ಬಿಗ್ಬಾಸ್ ನಿಯಮ ಉಲ್ಲಂಘಿಸಿದ ಕಾರಣ ಮನೆಯಿಂದ ಮಂಜು ಎಲಿಮಿನೇಟ್
ಆರೋಗ್ಯದ ಕಾರಣಕ್ಕೆ ಸಂಗೀತಾ ಭಟ್ ಬಿಗ್ಬಾಸ್ ಜರ್ನಿ ಮುಕ್ತಾಯ
ಈ ವಾರ ಬಿಗ್ಬಾಸ್ ಮನೆಯಲಿ ಎಲಿಮಿನೇಷನ್ ಡೌಟು ಎಂದ ವೀಕ್ಷಕರು
ಎವಿಕ್ಷನ್ ಪ್ರೊಸೆಸ್ ಇಲ್ಲದೆಯೇ ಬಿಗ್ಬಾಸ್ ಮನೆಯಿಂದ ಈಗಾಗಲೇ ಮಂಜು ಮತ್ತು ನಟಿ ಸಂಗೀತಾ ಭಟ್ ಹೊರಕ್ಕೆ ಬಂದಿರುವ ಕಾರಣ, ಈ ವಾರ ಎಲಿಮಿನೇಷನ್ ಇರೋದಿಲ್ಲ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಗ್ಬಾಸ್ ನಿಯಮ ಉಲ್ಲಂಘಿಸಿದ ಕಾರಣದಿಂದಾಗಿ ಬಿಗ್ಬಾಸ್ ಮನೆಯಿಂದ ಮಹಾನ್ ಕವಿ ಮಂಜ ಎಲಿಮಿನೇಟ್ ಆದರು. ಇನ್ನೂ ಸಂಗೀತಾ ಭಟ್ ಅವರಿಗೆ ಆಗಾಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಕಾರಣ ತಮ್ಮ ಜರ್ನಿ ಅರ್ಧಕ್ಕೆ ಮುಗಿಸಿದ್ದಾರೆ. ಒಟ್ಟೊಟ್ಟಿಗೆ ಇಬ್ಬರು ಹೊರಕ್ಕೆ ಬಂದಿರುವ ಕಾರಣ ಮತ್ತು ಹಬ್ಬದ ಮೂಡ್ನಲ್ಲಿರುವ ಕಾರಣ ಈ ವಾರ ಎಲಿಮಿನೇಷನ್ ಇಲ್ಲದಿರುವ ಸಾಧ್ಯತೆ ಇರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಮಧ್ಯೆ ಎಲಿಮಿನೇಷನ್ ಪ್ರೊಸೆಸ್ ನಡೆದಿದ್ದು, ಆರು ಮಂದಿ ನಾಮಿನೇಟ್ ಆಗಿದ್ದಾರೆ. ಎವಿಕ್ಷನ್ ತೂಗು ಕತ್ತಿಯಲ್ಲಿ ತಾಂಡವ್, ಯಶಸ್, ಜಗದೀಶ್, ಗಾನವಿ, ಸೋನಿಕಾ, ಕಾವ್ಯಾ ಇದ್ದು, ಸೌಂದರ್ಯ, ಕಿರಣ್, ಪ್ರಶಾಂತ್, ಧನುಷ್, ಗಗನ್, ಯಶಸ್ ನಾಮಿನೇಷನ್ನಿಂದ ಪಾರಾಗಿದ್ದಾರೆ. ಇನ್ನು ಹೊಸದಾಗಿ ಬಿಗ್ಬಾಸ್ ಮನೆಗೆ ಎಂಟ್ರಿಯಾಗಿರುವ ಕುಮಾರಿ ಮತ್ತು ಲಕ್ಷ್ಮಿ ನಾಮಿನೇಟ್ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ.
ಈ ವಾರ ಡ್ಯಾನ್ಸ್ ಫ್ಲೋರ್ ನಿರ್ಮಾಣ ಮಾಡಿ ಅದರ ಎದುರು ಭಾಗದಲ್ಲಿ ಮೂರು ಸಣ್ಣ ಸ್ಟೇಜ್ ಇಟ್ಟು ನಂಬರ್ ಬರೆದಿತ್ತು. ಬಿಗ್ಬಾಸ್ ಪ್ಲೇ ಮಾಡುವ ಆಫ್ ಆದ ತಕ್ಷಣ ನಂಬರ್ ಬಳಿ ನಿಲ್ಲಬೇಕು. ಆಗ ಕ್ಯಾಪ್ಟನ್ ಧನುಷ್ ಸೂಚಿಸಿದ ಗುಂಪು ಅವರ ತಂಡದಲ್ಲಿ ಒಬ್ಬರನ್ನು ಹೊರಕ್ಕಿಡಬೇಕು. ಅವರು ನಾಮಿನೇಟ್ ಆಗುತ್ತಾರೆ. ಇಂತಹ ಆಟಗಳನ್ನು ಬಿಗ್ಬಾಸ್ ಎಂದಿಗೂ ಆಡಿಸಿಲ್ಲ. ಈ ವಾರ ನಾಮಿನೇಷನ್ ಇಲ್ಲದ ಕಾರಣ ಹೀಗೆ ನಡೆಸಿರಬಹುದು ಎನ್ನಲಾಗುತ್ತಿದೆ.
ಗಗನ್ ತಾಯಿಯ ರೇಟ್ ಕೇಳಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಗಾನವಿ ಅವರು ಸದ್ಯ ತಪ್ಪನ್ನು ತಿದ್ದಿಕೊಳ್ಳುವ ಪ್ರೊಸೆಸ್ ಅಲ್ಲಿದ್ದಾರೆ. ತಾವೇ ಗಗನ್ ಬಳಿ ಹೋಗಿ ಸಾರಿ ನನ್ನಿಂದ ತಪ್ಪಾಗಿದೆ ಎಂದು ಮಾತನಾಡಿರುವ ಪ್ರೊಮೋ ಸದ್ಯ ವೈರಲ್ ಆಗಿದೆ.
ಕಾಮನರ್ ಆಗಿ ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ ಕುಮಾರಿ ಸದ್ಯ ಬಿಗ್ಬಾಸ್ ಮನೆ ಮಂದಿ ಮೊಗದಲ್ಲಿ ಸಂತಸ ಬೀರುತ್ತಿದ್ದಾರೆ. ಸಾಮಾನ್ಯವಾಗಿ ಕೆಲವರು ಸ್ಟ್ರಾಂಗ್ ಜನರ ಜೊತೆಗೆ ಇರಲು ಆಟವಾಡಲು ಬಯಸುತ್ತಾರೆ. ಸಪೋರ್ಟ್ ಬಯಸುತ್ತಾರೆ. ಆದರೆ ಕುಮಾರಿ ನಾನು ನಿಮ್ಮ ಆಟ ನೋಡಿದ್ದೇನೆ. ಕಷ್ಟ ಪಟ್ಟಿರುವುದು ಬಲ್ಲೆ ಎಂದು ಕ್ಯಾಪ್ಟನ್ ಹಾಗೂ ಇತರೆ ಸ್ಪರ್ಧಿಗಳು ಟೀಕೆ ಮಾಡಿದ್ದ ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ.