ಸಿನಿವಾಣಿ

ಈ ಸಲದ ದೀಪಾವಳಿ ಆಚರಣೆ ಕೈಬಿಟ್ಟ ಬಚ್ಚನ್​ ಕುಟುಂಬ; ಇದರ ಹಿಂದಿದೆ ಒಂದು ನೋವಿನ ಕಥೆ

manjunathktgns

ಮುಂಬೈ: ದೀಪಾವಳಿ ಹಬ್ಬ ಎಂದರೆ ಅದು ಬೆಳಕಿನ ಹಬ್ಬ. ಎಲ್ಲೆಡೆ ಸಂಭ್ರಮ ಮತ್ತು ಸಡಗರ. ಅದರಲ್ಲೂ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್ ಕುಟುಂಬದಲ್ಲಿ ದೀಪಾವಳಿ ಹಬ್ಬದ ಆಚರಣೆ ತುಸು ಹೆಚ್ಚೆ ಜೋರಾಗಿರುತ್ತದೆ. ಅಂಬಾನಿ ಕುಟುಂಬವೂ ಅಮಿತಾಬ್​ ಮನೆಗೆ ಆಗಮಿಸಿ ಹಬ್ಬವನ್ನು ಆಚರಣೆ ಮಾಡುತ್ತದೆ. ಆದರೆ, ಈ ಸಲದ ಅದ್ದೂರಿ ಆಚರಣೆಯನ್ನು ಬಚ್ಚನ್ ಕುಟುಂಬ ಕೈಬಿಟ್ಟಿದೆ.

ಅದಕ್ಕೆ ಕಾರಣ ಆ ಒಂದು ಸಾವು! ಹೌದು, ಇತ್ತೀಚೆಗಷ್ಟೇ ಅಮಿತಾಬ್​ ಪುತ್ರಿ ಅಭಿಷೇಕ್​ ಸಹೋದರಿ ಶ್ವೇತಾ ನಂದಾ ಅವರ ಅತ್ತೆ ನಿಧನರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅಮಿತಾಬ್​ ಮನೆಯಲ್ಲಿ ಈ ಸಲ ದೀಪಾವಳಿಯ ಆಚರಣೆಯನ್ನುಕೈಬಿಡಲು ನಿರ್ಧರಿಸಿದ್ದು, ಸರಳ ಆಚರಣೆಯ ಮೊರೆ ಹೋಗಿದ್ದಾರೆ.

‘ಹಬ್ಬದಾಚರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬ ಮುಖ್ಯ. ಕರೊನಾ ಪ್ರಮಾಣ ಕಡಿಮೆಯಾದರೂ, ಅದು ವಯಸ್ಸಾದವರಿಗೆ ಸಾಕಷ್ಟು ತೊಂದರೆಗೀಡು ಮಾಡುತ್ತಿದೆ. ಈ ವರ್ಷ ನಮ್ಮ ಮನೆಯಲ್ಲಿ ಸಾವಾಗಿರುವುದರಿಂದ ಹಬ್ಬದ ಆಚರಣೆಯನ್ನು ಕೈಬಿಟ್ಟಿದ್ದೇವೆ’ ಎಂದು ಸಂದರ್ಶನವೊಂದರಲ್ಲಿ ನಟ ಅಭಿಷೇಕ್​ ಹೇಳಿಕೊಂಡಿದ್ದಾರೆ.

ಸದ್ಯ ಅನುರಾಗ್ ಬಸು ನಿರ್ದೇಶನದ ಲೂಡೋ ಚಿತ್ರದ ಪ್ರಚಾರದಲ್ಲಿ ಅಭಿಷೇಕ್​ ಬಿಜಿಯಾಗಿದ್ದಾರೆ. ಅದರ ಜತೆಗೆ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಳ್ಳುವುದರ ಜತೆಗೆ ಶೂಟಿಂಗ್​ನಲ್ಲಿಯೂ ಭಾಗವಹಿಸಿದ್ದಾರೆ. (ಏಜೆನ್ಸೀಸ್​)