ಸಿನಿವಾಣಿ

VIDEO: ತುಂಡುಡುಗೆಯಲ್ಲಿ ಸೊಂಟ ಬಳುಕಿಸಿದ ನಿವೇದಿತಾ ಗೌಡ; ಫೋಟೋ ಕ್ಲಿಕ್ಕಿಸಿದ್ದು ಯಾರೆಂದು ಗೊತ್ತಾ?

ಬೆಂಗಳೂರು: ಸದಾ ಸುದ್ದಿಯಲ್ಲಿರುವ ನಿವೇದಿತಾ ಗೌಡ, ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಇಂಡೋನೇಷ್ಯಾ ದೇಶದ ‘ಬಾಲಿ’ ತೆರಳಿದ್ದಾರೆ. ತಾನು ಸೋಲೋ ಟ್ರಿಪ್ ಕೈಗೊಂಡಿರುವ ಬಗ್ಗೆ ಇತ್ತೀಚೆಗೆ ನಿವೇದಿತಾ ತಮ್ಮ ಇನ್ಸ್​​ಟಾಗ್ರಾಂನಲ್ಲಿ ರೀಲ್ಸ್​ ಮುಖಾಂತರ ಮಾಹಿತಿ ಹಂಚಿಕೊಂಡಿದ್ದರು.

ಇದೀಗ ಬಾಲಿಯಲ್ಲಿ ತೆಗೆದಿರುವ ಫೋಟೋಗಳನ್ನು ರೀಲ್ಸ್​ ಮಾಡಿ ಇದೀಗ ಹಂಚಿಕೊಂಡಿದ್ದಾರೆ. ನಿವೇದಿತಾ ಗೌಡ ಅಪ್ಲೋಡ್ ಮಾಡಿರುವ ಈ ಹಾಟ್​ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ. ನಿವೇದಿತಾ ಗೌಡ ಅವರ ಹಾಟ್​ ಲುಕ್ ನೋಡಿದವರು, ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ನಿವೇದಿತಾ ಗೌಡ ತುಂಡುಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದು, ನಾನು ಸೋಲೋ ಟ್ರಿಪ್ ಹೋಗಿದ್ದೇನೆ. ಹೀಗಾಗಿ ಫೋಟೋ ಕ್ಲಿಕ್ಕಿಸಲು ಯಾರೂ ಇರಲಿಲ್ಲ. ನನಗೆ ಸೆಲ್ಫಿ ಸ್ಟಿಕ್ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ನಿವೇದಿತಾ ಬಾಲಿಗೆ ಸೋಲೋ ಟ್ರಿಪ್ ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆ ಅನೇಕರು ಚಂದನ್ ಶೆಟ್ಟಿ ಎಲ್ಲಿ ಎಂದು ಪ್ರಶ್ನಿಸಿದ್ದರು. ಆದರೆ ನಿವೇದಿತಾ ಗೌಡ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ, ನಾನು ಮೊದಲ ಬಾರಿಗೆ ಸೋಲೋ ಪ್ರವಾಸ ಕೈಗೊಂಡಿದ್ದೇನೆ. ಈ ಬಗ್ಗೆ ನಾನು ಉತ್ಸಾಹದಿಂದ ಇದ್ದು, ಅಷ್ಟೇ ಕುತೂಹಲದಿಂದ ಇದ್ದೇನೆ ಎಂದು ಹೇಳಿಕೊಂಡಿದ್ದರು.