ಸಿನಿವಾಣಿ

ಮುಂದಿನ ಜನರೇಶನ್​ನ ದೊಡ್ಡ ಆಲ್ಬಂ ಪದವಿ ಪೂರ್ವ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಯೋಗರಾಜ್ ಭಟ್ಟರ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶನ ಮಾಡುತ್ತಿರುವ ‘ಪದವಿಪೂರ್ವ’ ಸಿನಿಮಾದ ಎಲ್ಲ ಹಾಡುಗಳನ್ನು ಯೋಗರಾಜ ಭಟ್ಟರೇ ಬರೆಯುತ್ತಿದ್ದು, ಅದೊಂದು ದೊಡ್ಡ ಆನಂದ ಎಂದು ಅವರು ಹೇಳುತ್ತಾರೆ.

‘ಈ ಚಿತ್ರದ ಮೂಲಕ ಹದಿ ಹರೆಯದ ಹುಡುಗರ ಕಥೆ ಹೇಳಲು ಹರಿಪ್ರಸಾದ್ ಜಯಣ್ಣ ಪ್ರಯತ್ನ ಪಡುತ್ತಿದ್ದಾರೆ. ಈ ರೀತಿಯ ಸ್ಕ್ರಿಪ್ಟ್​ಗೆ ಹಾಡು ಬರೆಯಲು ನನಗೆ ಅವಕಾಶ ಸಿಕ್ಕಿರಲಿಲ್ಲ. ಆಮೇಲೆ 17-18ರ ವಯಸ್ಸಿನ ಮಕ್ಕಳಿಗೆ ಇಷ್ಟವಾಗುವಂತಹ ಹಾಡುಗಳನ್ನು ನಾನು ಇದುವರೆಗೂ ಕೇಳಿಲ್ಲ. ಹಾಗಾಗಿ ಹೊಸ ರೀತಿಯ ಪ್ರಯತ್ನವನ್ನು ಈ ಸಿನಿಮಾದ ಮೂಲಕ ಮಾಡುತ್ತಿದ್ದೇನೆ. ನನಗೆ ಹುಡುಗ ಬುದ್ಧಿಯ ಹಾಡುಗಳನ್ನು ಬರೆಯುವುದು ಎಂದರೆ ಬಹಳ ಇಷ್ಟ. ಜತೆಗೆ ಈ ವಯಸ್ಸಿನ ಮಕ್ಕಳಿಗೆ ಎಂತಹ ಹಾಡುಗಳು ಇಷ್ಟವಾಗುತ್ತವೆ ಎಂಬುದರ ಬಗ್ಗೆ ನಾನು ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರಿಸರ್ಚ್ ಮಾಡುತ್ತಿದ್ದೇವೆ.’ಎಂದು ಹೇಳುತ್ತಾರೆ ಯೋಗರಾಜ್​ಭಟ್.

ದಾವಣಗೆರೆಯ ಪೃಥ್ವಿ ಶ್ಯಾಮನೂರು ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ.ಯೋಗರಾಜ್ ಭಟ್ ಮತ್ತು ರವಿ ಶ್ಯಾಮನೂರು ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.