New OTT releases this week
- ಧನುಷ್ ನಟನೆಯ 'ಕಾರಾ' ಚಿತ್ರವು 5 ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ನೋಡಲು ಲಭ್ಯ
- ಈ ವಾರ ಒಟ್ಟು 11 ಕ್ಕೂ ಹೆಚ್ಚು ಹೊಸ ಶೋಗಳು ಮತ್ತು ಸಿನಿಮಾಗಳು OTTಗೆ ಲಗ್ಗೆ
- ಮೇ ಕೊನೆಯ ವಾರದ ಒಟಿಟಿ ಸಿನಿಮಾಗಳು ಯಾವುದು ಗೊತ್ತಾ
New OTT releases this week: ಮೇ ತಿಂಗಳ ಕೊನೆಯ ವಾರವು ಒಟಿಟಿ ಪ್ರೇಮಿಗಳಿಗೆ ಭರ್ಜರಿ ಮನರಂಜನೆಯ ರಸದೌತಣವಾಗಿದೆ. ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ನಟನೆಯ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಕಾರಾ' ಚಿತ್ರದಿಂದ ಹಿಡಿದು ಹಾಲಿವುಡ್‌ನ 'ಸ್ಪೈಡರ್-ನಾಯ್ರ್'ವರೆಗೆ, ಜಾಗತಿಕ ಮಟ್ಟದ ಬ್ಲಾಕ್‌ಬಸ್ಟರ್ ಸಿನಿಮಾ, ವೆಬ್ ಸೀರಿಸ್ಗಳು ಸಿನಿ ಪ್ರೇಮಿಗಳನ್ನು ರಂಜಿಸಲಿವೆ.
ಈ ವಾರದ ಪ್ರಮುಖ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾ ಇದು
- ಸಿನಿಮಾ: ಕಾರಾ
- ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್ (ಮೇ 28)
ಧನುಷ್ ಮುಖ್ಯ ಭೂಮಿಕೆಯ ಸಿನಿಮಾ ಕಾರಾ ಆಕ್ಷನ್ ಕಳ್ಳತನದ ಕಥೆ ಹೊಂದಿರುವ ಥ್ರಿಲ್ಲರ್ ಸಿನಿಮಾ. . ಬ್ಯಾಂಕ್‌ನವರು ತಮ್ಮ ಪೂರ್ವಜರ ಭೂಮಿಯನ್ನು ವಶಪಡಿಸಿಕೊಂಡಾಗ ಮಾಜಿ ಕಳ್ಳನೊಬ್ಬ ಮತ್ತೆ ಅಪರಾಧ ಜಗತ್ತಿಗೆ ಹೇಗೆ ಮರಳುತ್ತಾನೆ ಎಂಬುದು ಇದರ ಕಥಾಹಂದರ. ತಮಿಳು ಮೂಲದ ಈ ಚಿತ್ರ ಕನ್ನಡ, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಲಭ್ಯವಿದೆ.
- ಸಿನಿಮಾ: ಸ್ಪೈಡರ್-ನಾಯ್ರ್
- ಎಲ್ಲಿ ನೋಡಬಹುದು: ಅಮೆಜಾನ್ ಪ್ರೈಮ್ ವಿಡಿಯೋ (ಮೇ 27)
ಹಾಲಿವುಡ್ ನಟ ನಿಕೋಲಸ್ ಕೇಜ್ ಧ್ವನಿ ನೀಡಿರುವ ಮತ್ತು ಲೈವ್ ಆಕ್ಷನ್ ರೂಪದಲ್ಲಿ ಮೂಡಿಬಂದಿರುವ ವಿಭಿನ್ನ ಸೂಪರ್ ಹೀರೊ ಸರಣಿ. 1930ರ ದಶಕದ ನ್ಯೂಯಾರ್ಕ್ ಹಿನ್ನೆಲೆಯಲ್ಲಿ ಬ್ಲ್ಯಾಕ್ ಅಂಡ್ ವೈಟ್ ಮಾದರಿಯಲ್ಲಿ ಈ ಸರಣಿ ಮೂಡಿಬಂದಿದೆ.
- ಸಿನಿಮಾ: ಎ ಗುಡ್ ಗರ್ಲ್ಸ್ ಗೈಡ್ ಟು ಮರ್ಡರ್ ಸೀಸನ್ 2
- ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್ (ಮೇ 27)
ಕ್ರೈಮ್ ಇನ್ವೆಸ್ಟಿಗೇಷನ್ ಮತ್ತು ಮಿಸ್ಟರಿ ಪ್ರಿಯರಿಗೆ ನೆಚ್ಚಿನ ವೆಬ್ ಸರಣಿಯ ಎರಡನೇ ಭಾಗ ಬಿಡುಗಡೆಯಾಗಿದೆ. ಟೀನ್ ಡಿಟೆಕ್ಟಿವ್ ಪಿಪ್ ಈ ಬಾರಿ ಮತ್ತೊಂದು ರೋಮಾಂಚಕ ಕೊಲೆ ರಹಸ್ಯವನ್ನು ಭೇದಿಸಲಿದ್ದಾಳೆ.
- ಸಿನಿಮಾ: ಜೆಟ್ಲೀ
- ಎಲ್ಲಿ ನೋಡಬಹುದು: ಜಿಯೋಹಾಟ್‌ಸ್ಟಾರ್ (ಮೇ 25)
ಫ್ಲೈಟ್ ಅಟೆಂಡೆಂಟ್ ಒಬ್ಬಳು ಆಕಾಶದ ಮಧ್ಯೆ ವಿಮಾನದಲ್ಲೇ ಎದುರಿಸುವ ವಿಲಕ್ಷಣ ಮತ್ತು ಕಾಮಿಡಿ ಪ್ರಸಂಗಗಳನ್ನು ಹೊಂದಿರುವ ತೆಲುಗಿನ ಅತ್ಯುತ್ತಮ ಕಾಮಿಡಿ ಥ್ರಿಲ್ಲರ್ ಸಿನಿಮಾ ಇದಾಗಿದೆ.
- ಸಿನಿಮಾ: ಬ್ರದರ್ಸ್ ಆಂಡ್ ಸಿಸ್ಟರ್ಸ್ಎ
- ಎಲ್ಲಿ ನೋಡಬಹುದು: ಜಿಯೋಹಾಟ್‌ಸ್ಟಾರ್ (ಮೇ 27)
ಕೌಟುಂಬಿಕ ಸಿದ್ಧಾಂತಗಳು ಮತ್ತು ಅಣ್ಣ-ತಂಗಿಯರ ಭಾವನಾತ್ಮಕ ಸಂಬಂಧದ ಸುತ್ತ ಹೆಣೆಯಲಾದ ತಮಿಳಿನ ಅತ್ಯುತ್ತಮ ಫ್ಯಾಮಿಲಿ ಡ್ರಾಮಾ ವೆಬ್ ಸರಣಿ.
ಸಿನಿಮಾ: ದಿ ಫೋರ್ ಸೀಸನ್ಸ್ ಸೀಸನ್ 2
ನೆಟ್‌ಫ್ಲಿಕ್ಸ್ (ಮೇ 28) - ಕಾಮಿಡಿ ಸರಣಿ.
ಸಿನಿಮಾ: ಅನ್‌ಟೋಲ್ಡ್ ಯುಕೆ: ವಿನ್ನಿ ಜೋನ್ಸ್: ನೆಟ್‌ಫ್ಲಿಕ್ಸ್ (ಮೇ 26) - ಸ್ಪೋರ್ಟ್ಸ್ ಡಾಕ್ಯುಮೆಂಟರಿ.
ಸಿನಿಮಾ: ಮರ್ಡರ್ ಮೈಂಡ್‌ಫುಲಿ ಸೀಸನ್ 2 – ನೆಟ್‌ಫ್ಲಿಕ್ಸ್ (ಮೇ 28) - ಜರ್ಮನ್ ಡಾರ್ಕ್ ಕಾಮಿಡಿ, (ಏಜೆನ್ಸೀಸ್)