New OTT releases June 2026
New OTT releases June 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಾಸ ಮುಗಿಯುತ್ತಿದ್ದಂತೆ ಭಾರತೀಯ ಸಿನಿಮಾರಂಗದಲ್ಲಿ ಸ್ಟಾರ್ ಸೆಲಬ್ರೆಟಿಗಳ ಸಿನಿಮಾಗಳು ಬೆಳ್ಳಿ ತೆರೆಯ ಮೇಲೆ ರಂಜಿಸಲು ಲಗ್ಗೆ ಇಡುತ್ತಿವೆ. ಮತ್ತೊಂದು ಕಡೆ ನೆಟ್‌ಫ್ಲಿಕ್ಸ್, ಅಮೆಜಾನ್, ಝೀ ಸೇರಿಂದತೆ ಒಟಿಟಿ ಫ್ಲಾಟ್ಫಾರ್ಮ್ನಲ್ಲಿ ಜೂನ್ ಮೊದಲವಾರದಲ್ಲೇ ಬ್ಲಾಕ್ ಬಸ್ಟರ್ ಸಿನಿಮಾಗಳಾದ ಧುರಂಧರ್-2, ಮೈಕಲ್ ಜಾಕ್ಸನ್, ಮಾ ಬೆಹನ್ ಹಾಗೂ ವೆಬ್ಸೀರಿಸ್ಗಳನ್ನು ಈ ವಾರ ನೋಡಬಹುದಾಗಿದೆ.
- ಸಿನಿಮಾ: ಧುರಂಧರ್ ದಿ ರಿವೇಂಜ್
- ಎಲ್ಲಿ ನೋಡಬಹುದು: ಜಿಯೋ ಹಾಟ್ ಸ್ಟಾರ್
ಬ್ಲಾಕ್ ಬಸ್ಟರ್ ಹಿಟ್ ಕಂಡ ಧುರಂಧರ್ ಸಿನಿಮಾದ ಮುಂದುವರೆದ ಭಾಗ ಧುರಂಧರ್ ದಿ ರಿವೇಂಜ್. ಒಂದನೇ ಭಾಗ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿತ್ತು. ಸದ್ಯ ಧುರಂಧರ್ ದಿ ರಿವೇಂಜ್ ಜಿಯೋ ಹಾಟ್ಸ್ಟಾರ್ನಲ್ಲಿ ಸಿಗಲಿದೆ. ಧುರಂಧರ್: ಅನ್‌ಸೆನ್ಸಾರ್ಡ್ ಮತ್ತು ಅನ್‌ಕಟ್ ವರ್ಷನ್ ಬರಲಿದ್ದು, ಬರೋಬ್ಬರಿ ಮೂರು ಗಂಟೆ ಸಿನಿಮಾ ಇರಲಿದೆ. ಅಧಿಕಾರಕ್ಕಾಗಿ ಹೋರಾಟ, ಪ್ರತೀಕಾರದ ದೃಶ್ಯವು ಇದರಲ್ಲಿ ಇರಲಿದೆ.
- ಸಿನಿಮಾ: ಮೈಕೆಲ್ ಜಾಕ್ಸನ್: ದಿ ವರ್ಡಿಕ್ಟ್
- ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಪಾಪ್ ದಂತಕತೆ ಮೈಕಲ್ ಜಾಕ್ಸನ್ ಅವರ ಜೀವನಾಧಾರಿತ ಸಿನಿಮಾ ಮೈಕೆಲ್ ಜಾಕ್ಸನ್ ದಿ ವರ್ಡಿಕ್ಟ್ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ನೋಡಲು ಸಿಗಲಿದೆ. ಮೈಕಲ್ರ ಬಾಲ್ಯದ ಜೀವನದಿಂದ ಹಿಡಿದು ಒಬ್ಬಂಟಿಯಾಗಿ ಆಲ್ಬಮ್ ಬಿಡುಗಡೆ ಮಾಡಿದ ಥ್ರಿಲ್ಲರ್, ಬೀಟ್ ಇಟ್ ಬಗ್ಗೆ ವಿವರಿಸಲಾಗಿದೆ. ಸ್ವತಃ ಮೈಕಲ್ರ ಅಣ್ಣನ ಮಗ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.
- ಸಿನಿಮಾ: ಮಾ ಬೆಹೆನ್
- ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಮಾಧುರಿ ದೀಕ್ಷಿತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಾ ಬೆಹೆನ್ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ನೋಡಲು ಲಭ್ಯವಿದೆ. ಡಾರ್ಕ್ ಕಾಮಿಡಿ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್, ತೃಪ್ತಿ ಡಿಮ್ರಿ ಮತ್ತು ಧರ್ನಾ ದುರ್ಗಾ ಬಣ್ಣ ಹಚ್ಚಿದ್ದರೆ. ಕತೆ, ನಿರ್ದೇಶನ ಸುರೇಶ್ ತ್ರಿವೇಣಿಯವರದ್ದು.
- ಸಿನಿಮಾ: ಮೇಡ್ ಇನ್ ಇಂಡಿಯಾ ಎ ಟೈಟಾನ್ ಸ್ಟೋರಿ
- ಎಲ್ಲಿ ನೋಡಬಹುದು: ಅಮೆಜಾನ್
ವಿನಯ್ ಕಾಮತ್ ಪುಸ್ತಕ ಟೈಟಾನ್ ಆಧರಿಸಿ ವೆಬ್ಸೀರಿಸ್ ನಿರ್ದೇಶಿಸಲಾಗಿದೆ. ಭಾರತದ ಹೆಮ್ಮೆಯ ವಾಚ್ ಟೈಟಾನ್ ಬ್ರ್ಯಾಂಡ್ನ ಸ್ಪೂರ್ತಿದಾಯಕ ಕತೆ ಹೇಳುವ ವೆಬ್ ಸೀರಿಸ್ ಇದು. ಇದರಲ್ಲಿ ಜಿಮ್ ಸರ್ಭ್ ಮತ್ತು ನಾಸಿರುದ್ದೀನ್ ಶಾ ನಟಿಸಿದ್ದಾರೆ.
- ಸಿನಿಮಾ: ಆಫೀಸ್ ರೋಮ್ಯಾನ್ಸ್
- ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಅಮೆರಿಕನ್ ರೊಮ್ಯಾಂಟಿಕ್ ಸಿನಿಮಾವದ ಆಫೀಸ್ ರೊಮ್ಯಾನ್ಸ್ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ. ಜೆನ್ನಿಫರ್ ಲೋಪೇಜ್, ಬ್ರೆಟ್ ಗೋಲ್ಡ್ ಸ್ಟೈನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವರ್ಕೋ ಹಾಲಿಕ್ ಉದ್ಯೋಗಿಗಳ ರಹಸ್ಯ ಪ್ರೇಮ ಕತೆಯನ್ನು ಈ ಸಿನಿಮಾ ಹೇಳುತ್ತದೆ.
- ಸಿನಿಮಾ: 'ದಿ ಪಿರಮಿಡ್ ಸ್ಕೀಮ್'
- ಎಲ್ಲಿ ನೋಡಬಹುದು: ಅಮೆಜಾನ್
'ದಿ ಪಿರಮಿಡ್ ಸ್ಕೀಮ್' ಎಂಬುದು ದ ವೈರಲ್ ಫೀವರ್ ನಿರ್ಮಿಸಿರುವ ಒಂದು ರೋಮಾಂಚಕ ಹಿಂದಿ ವೆಬ್ ಸರಣಿಯಾಗಿದೆ. ಪಿರಮಿಡ್ ಮಾರ್ಕೆಟಿಂಗ್ ಜಗತ್ತಿನಲ್ಲಿ ತ್ವರಿತ ಯಶಸ್ಸು ಕಂಡು ಶ್ರೀಮಂತರಾಗ ಬಯಸಲು ಹೊರಟ ಯುವಕರ ಸುತ್ತ ಈ ಸಿನಿಮಾವಿದೆ.
- ಸಿನಿಮಾ: ಬ್ರೌನ್
- ಎಲ್ಲಿ ನೋಡಬಹುದು: ಜೀ5
ಬ್ರೌನ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದ ಮೂಲಕ ನಟಿ ಕರಿಷ್ಮಾ ಕಪೂರ್ ಮತ್ತೆ ನಟನೆಗೆ ಮರಳಿದ್ದಾರೆ. ಕೋಲ್ಕತ್ತಾದ ಪ್ರಭಾವಿ ಕುಟುಂಬದ ಯುವತಿಯೊಬ್ಬಳ ಹತ್ಯೆಯ ತನಿಖೆ ನಡೆಸುವ ಪೊಲೀಸ್ ಅಧಿಕಾರಿ ರೀಟಾ ಬ್ರೌನ್ ಪಾತ್ರದಲ್ಲಿ ಕರಿಷ್ಮಾ ಕಾಣಿಸಿಕೊಂಡಿದ್ದಾರೆ.
- ಸಿನಿಮಾ: 'ದಿ ರೈಸ್ ಆಫ್ ಅಶೋಕ'
- ಎಲ್ಲಿ ನೋಡಬಹುದು: Sun NXT
ಸತೀಶ್ ನೀನಾಸಂ ಮತ್ತು ಸಪ್ತಮಿ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ದಿ ರೈಸ್ ಆಫ್ ಅಶೋಕ ಸಿನಿಮಾವನ್ನು ಸನ್ ನೆಕ್ಷ್ಟ್ನಲ್ಲಿ ನೋಡಬಹುದಾಗಿದೆ.
- ಸಿನಿಮಾ: ಕೆಡಿ - ದಿ ಡೆವಿಲ್'
- ಎಲ್ಲಿ ನೋಡಬಹುದು: ZEE5
ಧ್ರುವ ಸರ್ಜಾ, ನೋರಾ ಫತೇಹಿ ಸೇರಿದಂತೆ ಘಟಾನುಘಟಿ ನಾಯಕರಿರುವ 'ಕೆಡಿ - ದಿ ಡೆವಿಲ್' ಸಿನಿಮಾ ZEE5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವು ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ವೀಕ್ಷಣೆಗೆ ಲಭ್ಯವಿದೆ.
ಇದರೊಂದಿಗೆ ಗುಲ್ಲಕ್ ಸೀಸನ್ ಅನ್ನು ಸೋನಿಲಿವ್ ಅಲ್ಲಿ ಹಾಗೂ ಪೇಟ್ರಿಯಾಟ್ ಅನ್ನು ಜೀ5 ಅಲ್ಲಿ ಹಾಗೂ ಯುಫೋರಿಯಾ ಸೀಸನ್ 3 ಫಿನಾಲೆ ಸಿನಿಮಾವನ್ನು ಜಿಯೋ ಹಾಟ್ಸ್ಟಾರ್ನಲ್ಲಿ ನೋಡಬಹುದಾಗಿದೆ. ಟೀಚ್ ಯು ಎ ಲೆಸನ್ ಕೊರಿಯನ್ ಡ್ರಾಮಾವನ್ನು ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ, (ಏಜೆನ್ಸೀಸ್).