ಈ ವಾರ ಒಟಿಟಿಗೆ ಯಾವೆಲ್ಲ ಸಿನಿಮಾಗಳು ರಿಲೀಸ್ ಆಗಿವೆ?.
ಆಕ್ಟೋಪಸ್, ಗರಿವಿಡಿ ಲಕ್ಷ್ಮಿ, ಹನುಮಾನ್ ಅಂಶ್ ಸೇರಿದಂತೆ ಹಲವು ಸಿನಿಮಾ ಲಗ್ಗೆ.
ಪನ್ನಾಗಭರಣ ನಿರ್ದೇಶನದ ಕಾರ್ಪೋರೇಟ್ ಪ್ರೇಮಕತೆ ಸಿನಿಮಾ ಜೀ5ನಲ್ಲಿ ನೋಡಲು ಲಭ್ಯ.
ಈ ವಾರ ನವೆಂಬರ್ 24 - 30ರವರೆಗೂ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್ನಿಂದ ಹಿಡಿದು ರೊಮ್ಯಾಂಟಿಕ್ ಡ್ರಾಮಾ, ಆಕ್ಷನ್ ಸಿನಿಮಾಗಳು ರಿಲೀಸ್ ಆಗಲು ಸಜ್ಜಾಗಿವೆ. ಈ ವಾರ ನೆಟ್ಫ್ಲಿಕ್ಸ್, ಮನೋರಮಾ ಮ್ಯಾಕ್ಸ್, ಜೀ5, ಪ್ರೈಮ್ನಲ್ಲಿ ರಿಲೀಸ್ ಆಗುವ ಸಿನಿಮಾಗಳ ಪಟ್ಟಿ ಇಲ್ಲಿದೆ.
ಗರಿವಿಡಿ ಲಕ್ಷ್ಮಿ, ಹನುಮಾನ್ ಅಂಶ್, ದೃಶ್ಯಂ ದಿ ಕನ್ಕ್ಲೂಷನ್, ಕಾರ್ಪೋರೇಟ್ ಪ್ರೇಮ ಕಥೆ ಸೇರಿಂದತೆ ಹಲವು ಸಿನಿಮಾಗಳನ್ನು ಈವಾರ ಒಟಿಟಿಯಲ್ಲಿ, ಫ್ಯಾಮಿಲಿ ಜೊತೆ ಕುಳಿತು ನೋಡಬಹುದಾಗಿದೆ.
ಆಕ್ಟೋಪಸ್
ನಿರ್ದೇಶಕ: ಜಯಚಂದ್ರ ಹಶ್ಮಿ
ಎಲ್ಲಿ ವೀಕ್ಷಿಸಬೇಕು: ZEE5
ಸ್ಟ್ರೀಮಿಂಗ್ ದಿನಾಂಕ: ನವೆಂಬರ್ 27, 2026
ಅಶ್ವಿನ್ ಕುಮಾರ್, ಅರ್ಚನಾ ರವಿಚಂದ್ರನ್, ವಿನೋತ್ ಕಿಶನ್ ನಟನೆಯ ಆಕ್ಟೋಪಸ್ ಸಿನಿಮಾವು ZEE5 ಅಲ್ಲಿ ಸ್ಟ್ರೀಮ್ ಆಗಲಿದೆ. ನವ ವಧು ಕಾಣೆಯಾದ ಸುತ್ತ ಕತೆ ಕಟ್ಟಲಾಗಿದೆ. ಥ್ರಿಲ್ಲರ್ ಸಿನಿಮಾ ಎಂತಲು ಹೇಳಬಹುದು.
ನಿರ್ದೇಶನಗೌರಿ ನಾಯ್ಡು ಜಮ್ಮು
ಎಲ್ಲಿ ವೀಕ್ಷಿಸಬೇಕು: ಪ್ರೈಮ್ ವಿಡಿಯೋ
ಸ್ಟ್ರೀಮಿಂಗ್ ದಿನಾಂಕ: ನವೆಂಬರ್ 27, 2026
ಆನಂದಿ, ರಾಗ್ ಮಯೂರ್, ನರೇಶ್, ರಾಸಿ, ಎಲ್ ಬಿ ಶ್ರೀರಾಮ್, ಶ್ರೀನಿವಾಸ್ ಅವಸರಾಳ ನಟಿಸಿರುವ ಗರಿವಿಡಿ ಲಕ್ಷ್ಮಿ ಸಿನಿಮಾವು 1990ರ ಆಂಧ್ರಪ್ರದೇಶದ ಭಾಗದಲ್ಲಿ ನಡೆಯುತ್ತಿದ್ದ ಬುರ್ರಾ ಕತಾ, ಜಾನಪದ ಗೀತೆಗಳನ್ನು ಹಾಡುವ ಮೂಲಕ ಫೇಮಸ್ ಆಗಿದ್ದ ಗರಿವಿಡಿ ಲಕ್ಷ್ಮಿ ಅವರ ಜೀವನ ಕತೆಯಾಗಿದೆ.
ನಿರ್ದೇಶಕ: ಪನ್ನಾಗಭರಣ
ಎಲ್ಲಿ ವೀಕ್ಷಿಸಬೇಕು: ZEE5
ಸ್ಟ್ರೀಮಿಂಗ್ ದಿನಾಂಕ: ನವೆಂಬರ್ 27, 2026
ಪ್ರಿಯಾಂಕಾ ಉಪೇಂದ್ರ, ಸಂಜನಾ ದಾಸ್, ಪ್ರಣವ್ ಶ್ರೀಧರ್ ನಟನೆಯ ಕಾರ್ಪೊರೇಟ್ ಪ್ರೇಮಕಥೆ ಇಂದಿನ ಕಾಲಘಟ್ಟದ ಕತೆಯನ್ನು ಹೇಳುತ್ತದೆ. ನಿರ್ದೇಶಕ ಪನ್ನಾಗಭರಣ ಅವರ ಫ್ರೆಂಚ್ ಬಿರಿಯಾನಿ, ಹ್ಯಾಪಿ ನ್ಯೂಯರ್ ಸಿನಿಮಾಗಳು ಕನ್ನಡ ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯ ತೆರೆದ ಸಿನಿಮಾಗಳಾಗಿವೆ.
ನಿರ್ದೇಶಕ: ರಂಜಿತ್
ಎಲ್ಲಿ ವೀಕ್ಷಿಸಬೇಕು: ಮನೋರಮಾ ಮ್ಯಾಕ್ಸ್
ಸ್ಟ್ರೀಮಿಂಗ್ ದಿನಾಂಕ: ನವೆಂಬರ್ 27 (ತಾತ್ಕಾಲಿಕ)
ಪ್ರಕಾಶ್ ವರ್ಮ , ಲಿಮ್ಸನ್ ಕೆ ಸನ್ನಿ, ಜಾಯ್ ಮ್ಯಾಥ್ಯೂ, ಸುರೇಶ್ ಕೃಷ್ಣ, ಅಭಿರಾಮಿ, ಶಂಕರ್ ರಾಮಕೃಷ್ಣನ್, ವಿಕೆ ಪ್ರಕಾಶ್, ಮಮ್ಮುಟ್ಟಿ ಅಭಿನಯದ ಲಾ ಆಂಡ್ ಆರ್ಡರ್ ಸಿನಿಮಾ ತಾತ್ಕಾಲಿಕವಾಗಿ ಮನೋರಮಾ ಮ್ಯಾಕ್ಸ್ನಲ್ಲಿ ನೋಡಬಹುದಾಗಿದೆ.
ನಿರ್ದೇಶಕ: ದೀಪು ಕರುಣಾಕರನ್
ಎಲ್ಲಿ ವೀಕ್ಷಿಸಬೇಕು: ZEE5
ಸ್ಟ್ರೀಮಿಂಗ್ ದಿನಾಂಕ: ನವೆಂಬರ್ 27, 2026
ರೋನಿ ಡೇವಿಡ್ ರಾಜ್ , ಮೀನಾಕ್ಷಿ ಉನ್ನಿಕೃಷ್ಣನ್, ಜಯರಾಜನ್ ಕೋಝಿಕ್ಕೋಡ್, ದೀಪು ಕರುಣಾಕರನ್, ಅಜಿತ್ ಧನ್ವಂತರಿ ಸತ್ಯಮೇವ ZEE5ನಲ್ಲಿ ಸ್ಟ್ರೀಮ್ ಆಗಲಿದೆ. ವೃತ್ತಿಪರ ರಾಜಾರಾಮ್ ಕಥೆಯನ್ನು ವಿವರಿಸುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಕಣ್ಮರೆಯಾದ ಮಹಿಳೆಯನ್ನು ಹುಡುಕಲು ಮುಂದಾದಾಗ ತನ್ನ ಕಳೆದುಹೋದ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಅನಿರೀಕ್ಷಿತ ಅವಕಾಶವನ್ನು ಪಡೆಯುತ್ತಾನೆ.
ನಿರ್ದೇಶಕ: ತ್ರಿವಿಕ್ರಮ್ ಶ್ರೀನಿವಾಸ್
ಎಲ್ಲಿ ನೋಡಬಹುದು: ನೆಟ್ಫ್ಲಿಕ್ಸ್
ಸ್ಟ್ರೀಮಿಂಗ್ ದಿನಾಂಕ: ನವೆಂಬರ್ 27, 2026
ವೆಂಕಟೇಶ್ ದಗ್ಗುಬಾಟಿ , ಶ್ರೀನಿಧಿ ಶೆಟ್ಟಿ, ನಾರಾ ರೋಹಿತ್, ನಿವೇತಾ ಪೇತುರಾಜ್, ಯುವಿನಾ ಪಾರ್ಥವಿ ನಟನೆಯ ಆದರ್ಶ ಕುಟುಂಬ ಮನೆ ಸಂಖ್ಯೆ: 47 - ಎಕೆ 47 ನವೆಂಬರ್ 27ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗಲಿದೆ. ಇದು ಕನ್ನಡ, ತೆಲುಗು ಮತ್ತು ತಮಿಳು, ಮಲಯಾಳಂನಲ್ಲಿ ನೋಡಲು ಲಭ್ಯವಿದೆ. ಲಾಟರಿಯಲ್ಲಿ ಮನೆ ಗೆದ್ದ ನಾಲ್ವರು ಅಪರಿಚಿತರು ಆ ಮನೆಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎನ್ನುವ ಸುತ್ತ ಕತೆಯನ್ನು ಹೆಣೆಯಲಾಗಿದೆ.
ಈ ವಾರ ಬಾಕ್ಸ್ ಆಫೀಸ್ ಗಲ್ಲಾ ಪಟ್ಟಿಗೆಯ ದಾಖಲೆ ಮುರಿದ ಹನುಮಾನ್ ಅಂಶ್ ಸೋನಿ ಲೈವ್ನಲ್ಲಿ ನೋಡಬಹುದಾಗಿದೆ. ಜಿಯೋ ಹಾಟ್ಸ್ಟಾರ್ ಸ್ಪೆಷಲ್ ಸಿನಿಮಾ ಡಾಯಿ ಚಾಲ್, ಬ್ಲೇಡ್ ರನ್ನರ್ 2099, ನೋಟ್ಬುಕ್ 90s ಕಾದಲ್ ಫ್ಲ್ಯಾಶ್ ಬ್ಯಾಕ್ ಸಿನಿಮಾ, ದೃಶ್ಯಂ ದಿ ಕನ್ಕ್ಲೂಷನ್ ನೆಟ್ಫ್ಲಿಕ್ಸ್ನಲ್ಲಿ ನೋಡಬಹುದಾಗಿದೆ, (ಏಜೆನ್ಸೀಸ್).