ಸಿನಿವಾಣಿ

ಹಳೆಯ ಚೌಕಟ್ಟಲ್ಲಿ ಹೊಸ ಪ್ರಯೋಗ; ಸಂಬಂಧ ಬೆಸೆಯೋ ಸಿನಿಮಾ ಅಗ್ರಸೇನಾ

ಬೆಂಗಳೂರು: ‘ಅಗ್ರಸೇನಾ’ ಎಂಬ ಚಿತ್ರ ಪ್ರಾರಂಭವಾಗಿದ್ದು ನೆನಪಿರಬಹುದು. ಆ ಚಿತ್ರ ಇದೀಗ ಮುಗಿದಿದೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ‘ದಸರಾ ಗೊಂಬೆ’ ಎಂಬ ಹಾಡು ಬಿಡುಗಡೆಯಾಗಿದೆ. ಅಂದಹಾಗೆ, ಈ ಚಿತ್ರದಲ್ಲಿ ಅಮರ್ ಮತ್ತು ರಚನಾ ದಶರಥ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಇದೊಂದು ಲವ್​ಸ್ಟೋರಿ ಇರಬಹುದು ಅಂದುಕೊಂಡರೆ, ಅದು ತಪ್ಪು ಎನ್ನುತ್ತಾರೆ ನಿರ್ದೇಶಕ ಮುರುಗೇಶ್ ಕಣ್ಣಪ್ಪ.

ನಿರ್ದೇಶಕ ಎ. ಹರ್ಷಗೆ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮುರುಗೇಶ್, ಇದೊಂದು ಸಂಬಂಧಗಳನ್ನು ಬೆಸೆಯುವ ಸಿನಿಮಾ ಎಂದು ವ್ಯಾಖ್ಯಾನಿಸುತ್ತಾರೆ. ‘ಇದೊಂದು ಫ್ಯಾಮಿಲಿ ಚಿತ್ರ. ಪ್ರೇಮಕಥೆ ಒಂದು ಭಾಗ ಅಷ್ಟೇ. ಕಮರ್ಷಿಯಲ್ ಚೌಕಟ್ಟಿನಲ್ಲಿ ಒಂದು ಪ್ರಯೋಗ ಮಾಡುತ್ತಿದ್ದೇವೆ. ಇದು ಹಿರಿಯ ನಟ ರಾಮಕೃಷ್ಣ ಅವರ 200ನೇ ಚಿತ್ರ. ಫ್ಲಾಶ್​ಬ್ಯಾಕ್​ನಲ್ಲಿ ಅವರ ಪಾತ್ರ ಬರುತ್ತದೆ ಮತ್ತು ಅವರು ಇಲ್ಲಿ ಸೇನಾಪತಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಅವರ ಭಾಗದ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ. ‘ಅಗ್ರಸೇನಾ’ ಚಿತ್ರವನ್ನು ಮಮತಾ ಜಯರಾಮರೆಡ್ಡಿ ನಿರ್ವಿುಸಿದ್ದು, ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜಿಸಿದ್ದಾರೆ.