ರಿಷಿ ಕಪೂರ್​ ಮತ್ತು ನೀತು ಕಪೂರ್ 
ಸಿನಿವಾಣಿ

ಮದ್ಯ ಕುಡಿಯದಿದ್ರೆ ನಿದ್ದೆ ಬರ್ತಿರಲಿಲ್ಲ! ಪತಿ ಸಾವಿನ ಬಳಿಕ ಇಂಜೆಕ್ಷನ್​, ಕುಡಿತದ ಚಟಕ್ಕೆ ಬಿದ್ದಿದ್ದ ನಟಿ ನೀತು

ಪ್ರಮುಖ ಮುಖ್ಯಾಂಶಗಳು

  • ಹಿರಿಯ ನಟ ರಿಷಿ ಕಪೂರ್​ ಸಾವಿನಿಂದ ಪತ್ನಿ ಅನುಭವಿಸಿದ್ದು ನರಕಯಾತನೆ
  • ಸಂದರ್ಶನದಲ್ಲಿ ಪಟ್ಟ ನೋವನ್ನು ಮುಕ್ತವಾಗಿ ಹಂಚಿಕೊಂಡ ನೀತು ಕಪೂರ್
Neetu Kapoor: ಬಾಲಿವುಡ್​ನ ಹಿರಿಯ​ ಸ್ಟಾರ್ ನಟಿ ನೀತು ಕಪೂರ್, ಕೇವಲ 8 ವರ್ಷ ವಯಸ್ಸಿನಲ್ಲೇ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. 21 ವರ್ಷಕ್ಕೆ, ಶಶಿ ಕಪೂರ್, ಅಮಿತಾಬ್ ಬಚ್ಚನ್, ಜೀತೇಂದ್ರ ಮತ್ತು ಶತ್ರುಘ್ನ ಸಿನ್ಹಾರಂತಹ ದಿಗ್ಗಜ ನಟರೊಂದಿಗೆ ಬಣ್ಣ ಹಚ್ಚಿದ ಬ್ಯೂಟಿ. ಮೆಗಾ, ಸೂಪರ್​​ಹಿಟ್​ ಚಿತ್ರಗಳನ್ನು ನೀಡಿದ ನಟಿ, 2020ರಲ್ಲಿ ತಮ್ಮ ಪತಿ ರಿಷಿ ಕಪೂರ್​ರನ್ನು ಕಳೆದುಕೊಂಡ ಬಳಿಕ ಅನುಭವಿಸಿದ ನರಕಯಾತನೆ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದರು. ಅದರ ವಿವರವಾದ ಮಾಹಿತಿ ಇಲ್ಲಿದೆ ನೋಡಿ.
ಹಳೆಯ ಸಂದರ್ಶನವೊಂದರಲ್ಲಿ ತಮ್ಮ ಪರಿಸ್ಥಿತಿ ಕುರಿತು ಓಪನ್​ ಆಗಿ ಮಾತನಾಡಿದ್ದ ನೀತು, "ನನ್ನ ನಟನಾ ಕರಿಯರ್​ಗೆ ಗುಡ್​ಬೈ ಹೇಳುವುದು ನನ್ನ ನಿರ್ಧಾರವಾಗಿತ್ತು. ವೃತ್ತಿಜೀವನದಲ್ಲಿ ಮುಂದುವರಿಯಲು ಮದುವೆಯಾದ ಬಳಿಕ ಬೇಸರವಾಗಿಬಿಟ್ಟಿತ್ತು. 7 ವರ್ಷಗಳ ಸಿನಿಪಯಣದಲ್ಲಿ ಪ್ರತಿದಿನ ಮೂರು ಶಿಫ್ಟ್​ನಂತೆ ಸುಮಾರು 70 ಸಿನಿಮಾಗಳನ್ನು ಬಾಲಿವುಡ್​ನಲ್ಲಿ ಮಾಡಿದ್ದೇನೆ. ಆ ನಂತರ ಮದುವೆ, ದಾಂಪತ್ಯ ಜೀವನ ಮತ್ತು ಮಕ್ಕಳು ಎಂದಿದ್ದರು.
ಎರಡು ವರ್ಷಗಳ ಕಾಲ ಬ್ಲಡ್​ ಕ್ಯಾನ್ಸರ್ ವಿರುದ್ಧ ಹೋರಾಡಿದ ಹಿರಿಯ ನಟ ರಿಷಿ ಕಪೂರ್​, 2020ರಲ್ಲಿ ವಿಧಿವಶರಾದರು. ಈ ಘಟನೆಯಿಂದ ಅವರ ಕುಟುಂಬ, ಸ್ನೇಹಿತರು, ಚಿತ್ರರಂಗ ಭಾರೀ ಆಘಾತಕ್ಕೆ ಸಿಲುಕಿತು. ರಿಶಿ ಇನ್ನಿಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲಾಗದ ಪತ್ನಿ ನೀತು, ಅವರ ಅಗಲಿಕೆಯಿಂದ ಸರಿಯಾಗಿ ನಿದ್ದೆ ಮಾಡಲು ಆಗುತ್ತಿರಲಿಲ್ಲ ಎಂದು ಸೋಹಾ ಅಲಿ ಖಾನ್ ಅವರ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡರು.
ಈ ಕಠಿಣ ಸಮಯದಲ್ಲಿ ನೀವು ಯಾರೊಂದಿಗಾದರೂ ಮಾತನಾಡಬೇಕು. ಇಲ್ಲದಿದ್ದರೆ ಕಷ್ಟವಾಗಿಬಿಡುತ್ತೆ. ನಾನು ನಿಜವಾಗಿಯೂ ಖಿನ್ನತೆಗೆ ಒಳಗಾಗಿದ್ದೆ. ವೈದ್ಯರ ಚಿಕಿತ್ಸೆಗಿಂತ ನೀವು ಹೆಚ್ಚು ವಿಶ್ವಾಸ ಹೊಂದಿದ್ದರೆ, ಎಲ್ಲವೂ ಸರಿಯಾಗುತ್ತೆ. ನೀವೇ ಗಟ್ಟಿಯಾಗಿಲ್ಲ ಎಂದರೆ, ವೈದ್ಯರ ಸಲಹೆ, ಚಿಕಿತ್ಸೆಗಳು ಅಷ್ಟಾಗಿ ಕೆಲಸ ಮಾಡೋದಿಲ್ಲ ಎಂದರು.
ಪತಿ ನಿಧನರಾದಾಗ, ಒಂದು ತಿಂಗಳು ನನಗೆ ನಿದ್ರೆಯೇ ಬರಲಿಲ್ಲ. ಬಹುಶಃ 2ರಿಂದ 3 ತಿಂಗಳು ನಾನು ನಿದ್ದೆಗೆ ಜಾರಲು ಸಾಧ್ಯವೇ ಆಗಲಲಿಲ್ಲ. ನಾನು ಕುಡಿತಕ್ಕೆ ದಾಸಳಾದೆ. ಈ ಚಟಕ್ಕೆ ಬಿದ್ದ ನಂತರ ಕುಡಿಯದೆ ನಿದ್ರೆಯೇ ಬರುತ್ತಿರಲಿಲ್ಲ. ಇದಾದ ನಂತರ ವೈದ್ಯರೊಬ್ಬರು ನಮ್ಮ ಮನೆಗೆ ಬಂದು ಪ್ರತಿದಿನ ಇಂಜೆಕ್ಷನ್​ ನೀಡುತ್ತಿದ್ದರು. ಇದನ್ನು ಕೊಟ್ಟ ಕೆಲ ನಿಮಿಷಗಳ ನಾನು ನಿದ್ರೆಗೆ ಜಾರಿದ್ದೀನೋ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಆ ಮಟ್ಟಿಗೆ ನರಕ ಅನುಭವಿಸಿದೆ ಎಂದಿದ್ದಾರೆ,(ಏಜೆನ್ಸೀಸ್).