Yami Gautam: ತಮ್ಮ ಬಹುಮುಖ ಪ್ರತಿಭೆಯೊಂದಿಗೆ ಬಾಲಿವುಡ್ನಲ್ಲಿ ಅದರಲ್ಲೂ ದೇಶಪ್ರೇಮವನ್ನು ಸಾರುವ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತನ್ನದೇ ಆದ ಫ್ಯಾನ್ ಬೇಸ್ ಹೊಂದಿರುವ ನಟಿ ಎಂದರೆ ಅದು ಯಾಮಿ ಗೌತಮ್ ಆಗಿದ್ದಾರೆ. ಇವರು ಧುರಂಧರ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಪತ್ನಿ ಕೂಡ ಆಗಿದ್ದಾರೆ. ಕೆಲ ದಿನಗಳ ಹಿಂದೆ ಯಾಮಿ ಅಭಿನಯದ ಆರ್ಟಿಕಲ್ 370 ಸಿನಿಮಾದಲ್ಲಿನ ನಟನೆಗಾಗಿ ಭಾರತ ಸರ್ಕಾರ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈಗ ಯಾಮಿ, ನಯೀ ನವೇಲಿ ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾದ ಟ್ರೇಲರ್ ಲಾಂಚ್ ಮೊದಲು ನಡೆಸಿದ ಫೋಟೊ ಶೂಟ್ನಲ್ಲಿ ಕ್ಲಿಕ್ಕಿಸಿದ ಕೆಲ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.