ನಟ ನಮನ್ ಅರೋರಾ 
ಸಿನಿವಾಣಿ

Naman Arora - ಹಂಟರ್​ ಆಕ್ಯಾ ನಮನ್​ ಅರೋರಾ

"ಎಡಗೈಯೇ ಅಪಘಾತಕ್ಕೆ ಕಾರಣ' ಬಳಿಕ ಸಮರ್ಥ್​ ಕಡಕೋಳ್​ ಆ್ಯಕ್ಷನ್​&ಕಟ್​ ಹೇಳುತ್ತಿರುವ "ಬೆಲ್​ ಬಾಟಮ್​' ಖ್ಯಾತಿಯ ಸಂತೋಷ್​ ಕುಮಾರ್​ ನಿರ್ಮಿಸುತ್ತಿರುವ ಸಿನಿಮಾ "ಹುಬ್ಬಳ್ಳಿ ಹಂರ್ಟಸ್​'. ವಿಶೇಷ ಅಂದರೆ ಉಡಾಳ್​ ಪಾವ್ಯ ಪವನ್​ ಕೃಷ್ಣ, ವನು ಪಾಟೀಲ್​, ಸುಮಿತ್​ ಸಂಕೋಜಿ, ಧನ್ಯಶ್ರೀ, ಚೇತನ್​ ಮಾರಂಬೀಡ್​, ವಿನಯ್​ ದೊಡ್ಡಮನಿ ಸೇರಿ ಹಲವು ಕರ್ನಾಟಕದ ಸೋಷಿಯಲ್​ ಮಿಡಿಯಾ ಇನ್​್ಲೂಯೆನ್ಸರ್​ಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗೇ "ದ ಕಪಿಲ್​ ಶರ್ಮಾ ಶೋ', "ಇಂಡಿಯಾ ಗಾಟ್​ ಲೇಟೆಂಟ್​', "ಬ್ಯಾರಿಸ್ಟರ್​ ಬಾಬು', "ಜುಗ್​ ಜುಗ್​ ಜೀಯೋ' ಖ್ಯಾತಿಯ ಬರಹಗಾರ, ನಟ, ಸ್ಟಾ$ಂಡಪ್​ ಕಾಮಿಡಿಯನ್​ ನಮನ್​ ಅರೋರಾ "ಹುಬ್ಬಳ್ಳಿ ಹಂರ್ಟಸ್​' ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಬೆಂಗಳೂರು:

"ಎಡಗೈಯೇ ಅಪಘಾತಕ್ಕೆ ಕಾರಣ' ಬಳಿಕ ಸಮರ್ಥ್​ ಕಡಕೋಳ್​ ಆ್ಯಕ್ಷನ್​&ಕಟ್​ ಹೇಳುತ್ತಿರುವ "ಬೆಲ್​ ಬಾಟಮ್​' ಖ್ಯಾತಿಯ ಸಂತೋಷ್​ ಕುಮಾರ್​ ನಿರ್ಮಿಸುತ್ತಿರುವ ಸಿನಿಮಾ "ಹುಬ್ಬಳ್ಳಿ ಹಂರ್ಟಸ್​'. ವಿಶೇಷ ಅಂದರೆ ಉಡಾಳ್​ ಪಾವ್ಯ ಪವನ್​ ಕೃಷ್ಣ, ವನು ಪಾಟೀಲ್​, ಸುಮಿತ್​ ಸಂಕೋಜಿ, ಧನ್ಯಶ್ರೀ, ಚೇತನ್​ ಮಾರಂಬೀಡ್​, ವಿನಯ್​ ದೊಡ್ಡಮನಿ ಸೇರಿ ಹಲವು ಕರ್ನಾಟಕದ ಸೋಷಿಯಲ್​ ಮಿಡಿಯಾ ಇನ್​್ಲೂಯೆನ್ಸರ್​ಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಹಾಗೇ "ದ ಕಪಿಲ್​ ಶರ್ಮಾ ಶೋ', "ಇಂಡಿಯಾ ಗಾಟ್​ ಲೇಟೆಂಟ್​', "ಬ್ಯಾರಿಸ್ಟರ್​ ಬಾಬು', "ಜುಗ್​ ಜುಗ್​ ಜೀಯೋ' ಖ್ಯಾತಿಯ ಬರಹಗಾರ, ನಟ, ಸ್ಟ್ಯಾಂಡಪ್​​ ಕಾಮಿಡಿಯನ್​ ನಮನ್​ ಅರೋರಾ "ಹುಬ್ಬಳ್ಳಿ ಹಂರ್ಟಸ್​' ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, ""ಹುಬ್ಬಳ್ಳಿ ಹಂರ್ಟಸ್​' ನನ್ನ ಮೊದಲ ಕನ್ನಡ ಹಾಗೂ ಹಿಂದಿಯೇತರ ಸಿನಿಮಾ. ಸಮರ್ಥ್​ "ಇಂಡಿಯಾ ಗಾಟ್​ ಲೇಟೆಂಟ್​' ನೋಡಿದ್ದರು. ನಾನು ಆರ್​ಎಂಡಿ ಆಕ್ಯಾ ಪಾತ್ರಕ್ಕೆ ಹೊಂದುತ್ತೇನೆ ಅಂತನ್ನಿಸಿ, ಸಂಪರ್ಕಿಸಿದರು. ಅವರು ನಿರ್ದೇಶಿಸಿದ್ದ "ಎಡಗೈಯೇ ಅಪಘಾತಕ್ಕೆ ಕಾರಣ' ನೋಡಲು ತಿಳಿಸಿದರು. ನನಗೂ ಆ ಸಿನಿಮಾ ಇಷ್ಟವಾಯಿತು. ಆಗ "... ಹಂರ್ಟಸ್​' ಬಗ್ಗೆ ತಿಳಿಸಿ ಯಾವುದೇ ಆಡಿಷನ್​ ಇಲ್ಲದೇ ನನ್ನನ್ನು ಆಯ್ಕೆ ಮಾಡಿಕೊಂಡರು. ನನಗೆ ಕನ್ನಡ ಹೊಸತು. ಭಾಷೆಯ ಜತೆಗೆ ಪಾತ್ರಕ್ಕೂ ತುಂಬ ಸಿದ್ಧತೆ ಬೇಕಿತ್ತು. ನಾನು ಇದುವರೆಗೆ ನಟಿಸಿರುವ ಎಲ್ಲ ಸಿನಿಮಾಗಳಲ್ಲೇ ಅತಿ ಹೆಚ್ಚು ಶ್ರಮ ಕೇಳಿದ ಚಿತ್ರವಿದು. ಪಾತ್ರದ ಬಗ್ಗೆ ಈಗಲೇ ಹೆಚ್ಚೇನೂ ಹೇಳಲಾರೆ. ಆದರೆ, ಸರ್​ಪ್ರೈಸ್​​ಗಳಿವೆ. ಅವನ್ನು ಸಿನಿಮಾದಲ್ಲಿ ನೋಡಿದರೆ ಚಂದ. ಸಿನಿಮಾ ಜತೆಗೆ ನನ್ನ ಪಾತ್ರ ಕೂಡ ಎಲ್ಲರಿಗೂ ಇಷ್ಟವಾಗುವ ಭರವಸೆಯಿದೆ' ಎಂದು ಹೇಳಿಕೊಳ್ಳುತ್ತಾರೆ.

ಹುಬ್ಬಳ್ಳಿ ಹಂಟರ್ಸ್​ ಚಿತ್ರದ ಪೋಸ್ಟರ್

ಬಾಲಿವುಡ್​ ನಟನ ಜವಾರಿ ಡಬ್ಬಿಂಗ್​

ವಿಶೇಷ ಅಂದರೆ ತಮ್ಮ ಚೊಚ್ಚಲ ಚಿತ್ರದಲ್ಲೇ ನಮನ್​ ಕನ್ನಡದಲ್ಲಿ ಡಬ್​ ಮಾಡಿದ್ದಾರೆ. "ಹಿಂದಿಗೆ ಡಬ್​ ಆಗಿರುವ "ಕೆಜಿಎ್​', "ಕಾಂತಾರ'ದಂತಹ ಕನ್ನಡದ ಕೆಲ ಕಲ್ಟ್​ ಸಿನಿಮಾಗಳನ್ನು ನೋಡಿದ್ದೆ. ಆದರೆ, ನಾನು ಕನ್ನಡದಲ್ಲಿ ನಟಿಸುತ್ತೇನೆ ಅಂತ ಎಂದಿಗೂ ಅಂದುಕೊಂಡಿರಲಿಲ್ಲ. ಈ ರೀತಿಯ ಸಿನಿಮಾ, ಪಾತ್ರ ಮಾಡಬೇಕು ಅಂತ ಪ್ರತಿಯೊಬ್ಬ ಕಲಾವಿದರಿಗೂ ಆಸೆಯಿರುತ್ತದೆ. ಅಂತಹ ಅವಕಾಶ ನನಗೆ ಕನ್ನಡದಲ್ಲಿ ದೊರೆತಿದ್ದು ಖುಷಿಯಿದೆ. ಸೆಟ್​ನಲ್ಲಿ ಕೆಲವರಿಗೆ ಹಿಂದಿ ಗೊತ್ತಿತ್ತು, ಜತೆಗೆ ನಾನೂ ಕನ್ನಡ ಕಲಿಯಲು ಆರಂಭಿಸಿದ ಕಾರಣ ಶೂಟಿಂಗ್​ ಸಮಯದಲ್ಲಿ ಸಮಸ್ಯೆಯಾಗಲಿಲ್ಲ. ಜತೆಗೆ ಪಾತ್ರ ನ್ಯಾಚುರಲ್​ ಆಗಿರಲಿ ಅಂತ ನಾನೇ ಡಬ್ಬಿಂಗ್​ ಮಾಡಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ. ಅಂದಹಾಗೆ, ಕನ್ನಡದ "ಹುಬ್ಬಳ್ಳಿ ಹಂರ್ಟಸ್​' ಜತೆಗೆ ನಮನ್​ ಬಾಲಿವುಡ್​ನ ನಾಲ್ಕು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.