ಬೆಂಗಳೂರು: ಲಾಕ್ಡೌನ್ ಹೊತ್ತಿನಲ್ಲಿ ಹಿರಿಯ ಕಲಾವಿದ ನಾಗರಾಜ್ ಕೋಟೆ ಒಂದೇ ನಿಮಿಷದಲ್ಲಿ ಹಾಸ್ಯದ ರಸಾಯನವನ್ನು ಉಣಬಡಿಸುತ್ತಿದ್ದಾರೆ. "ಲಾಕ್ಡೌನ್ ಕಾಮಿಡಿ' ಹೆಸರಿನಲ್ಲಿ ಕಾಮಿಡಿ ಕಚಗುಳಿ ಇಡುತ್ತಿದ್ದು, ಕರೊನಾ ಸಮಯದಲ್ಲಿನ ಒಂದಷ್ಟು ಟನೆಗಳನ್ನೇ ಆಧಾರವಾಗಿಸಿ ಕೊಂಡು, ಆ ಸನ್ನಿವೇಶಗಳಿಗೆ ಹಾಸ್ಯದ ಲೇಪನ ಮಾಡಿ ನಗಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.
ಲಾಕ್ಡೌನ್ ಘೋಷಣೆ ಆದ ದಿನದಿಂದ ಇಲ್ಲಿಯವರೆಗೂ ಪ್ರತಿನಿತ್ಯ ಒಂದು ನಿಮಿಷದ ವಿಡಿಯೋ ತುಣುಕನ್ನು ನಾಗರಾಜ್ ಕೋಟೆ ೇಸ್ಬುಕ್ ಮತ್ತು ಯೂಟ್ಯೂಬ್ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ 25ಕ್ಕೂ ಅಧಿಕ ವಿಡಿಯೋಗಳನ್ನು ಹಂಚಿಕೊಂಡಿದ್ದು, ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಸ್ಯ ಸೇವೆಯ ಬಗ್ಗೆ ಹೇಳಿಕೊಳ್ಳುವ ನಾಗರಾಜ್ ಕೋಟೆ, "ಇಂಥ ಸಮಯದಲ್ಲಿ ಇದೊಂದು ಕಠಿಣ ಕೆಲಸ. ಕೆಲವರು ಆಹಾರ ಹಂಚುತ್ತಿದ್ದಾರೆ. ಇನ್ನು ಕೆಲವರು ಆಕ್ಸಿಜನ್ ಪೂರೈಸುತ್ತಿದ್ದಾರೆ.
ನಾನು ಹಾಸ್ಯ ಕಲಾವಿದ ಆಗಿರುವುದರಿಂದ ನಗಿಸುವ ಕೆಲಸ ಮಾಡುತ್ತಿದ್ದೇನೆ. ಕರೊನಾದಿಂದ ಮಾನಸಿಕವಾಗಿ ಕುಗ್ಗಿದವರಿಗೆ ಹಾಸ್ಯದ ಮೂಲಕ ನಗು ಉಕ್ಕಿಸುವ ಕೆಲಸ ಮಾಡುತ್ತಿದ್ದೇವೆ' ಎಂದು ಮಾಹಿತಿ ನೀಡುತ್ತಿದ್ದಾರೆ. ಅಂದಹಾಗೆ, ನಾಗರಾಜ್ ಅವರ ಲಾಕ್ಡೌನ್ ಕಾಮಿಡಿಗೆ ಅವರ ಪುತ್ರ ನಿಶಾಂತ್ ಕೋಟೆ ಛಾಯಾಗ್ರಹಣ ಮಾಡಿದರೆ, ಯಶ್ವಂತ್ ಕೋಟೆ, ಅಭಿಷೇಕ್, ಅನಿತಾ, ಐಶ್ವರ್ಯಾ ಮುಂತಾದವರು ಅಭಿನಯಿಸಿದ್ದಾರೆ.