Naga Chaitanya Moves Delhi High Court  
ಸಿನಿವಾಣಿ

'ಡಿವೋರ್ಸ್​ನಿಂದ ನಟಿ ಸಮಂತಾ ಕೆರಿಯರ್​​ ಹಾಳು'; ಸೋಶಿಯಲ್​​ ಮೀಡಿಯಾಗಳ ಸುಳ್ಳು ಸುದ್ದಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ Naga Chaitanya

Naga Chaitanya Moves Delhi High Court : 'ಅನುಮತಿ ಇಲ್ಲದೆ ನನ್ನ ಫೋಟೋ, ಧ್ವನಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆನ್​ಲೈನ್​​ನಲ್ಲಿ ನನ್ನ ವಿರುದ್ಧ ಸುಳ್ಳು ಮಾಹಿತಿ ಹಬ್ಬಿಸಲಾಗುತ್ತಿದೆ' ಎಂದು ತೆಲುಗು ಸ್ಟಾರ್​ ನಟ ನಾಗಚೈತನ್ಯ ಅವರು ಸೋಶಿಯಲ್​ ಮೀಡಿಯಾದ ವಿರುದ್ಧ ದೆಹಲಿ ಹೈ ಕೊರ್ಟ್​ ಮೆಟ್ಟಿಲೇರಿದ್ದಾರೆ.
ಸಲ್ಮಾನ್​ ಖಾನ್​, ಐಶ್ವರ್ಯಾ ರೈ ಸೇರಿದಂತೆ ಹಲವರು ವ್ಯಕ್ತಿತ್ವ ಹಕ್ಕುಗಳ ಕೋರಿ ಹೈ ಕೋರ್ಟ್​ ಮೆಟ್ಟಿಲೇರಿದ್ದರು. ಈಗ ಅವರ ಸಾಲಿನಲ್ಲಿ ನಾಗ ಚೈತನ್ಯ ಅವರು ಇದ್ದಾರೆ. ಸಮಂತಾ ರುತ್​ಪ್ರಭು ಮತ್ತು ನಾಗಚೈತನ್ಯ ಡಿವೋರ್ಸ್​ ಪಡೆದುಕೊಂಡು ಇಬ್ಬರು ದೂರಾಗಿದ್ದರೆ. ಪ್ರತ್ಯೇಕವಾಗಿ ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಹೀಗಿದ್ದರೂ, ಸಹ ಸೋಶಿಯಲ್​ ಮೀಡಿಯಾದಲ್ಲಿ ಕಾಂಟೆಂಟ್​ ಕ್ರಿಯೇಟರ್​ಗಳು ನಾಗಚೈತನ್ಯ ಸಮಂತಾ ಅವರಿಗೆ ಮೋಸ ಮಾಡಿದ್ದಾರೆ. ಡಿವೋರ್ಸ್​ ಕೊಟ್ಟಿದ್ದಕ್ಕಾಗಿ ಅವರ ನಟನೆಯ ಜೀವನಕ್ಕೆ ಸಮಸ್ಯೆಯಾಗಿದೆ ಎಂದು ಸುಳ್ಳು ಸುದ್ದಿ ಹಂಚಿಕೊಳ್ಳಲಾಗುತ್ತಿದೆ ಎಂದು ನಟ ನಾಗಚೈತನ್ಯ ಆರೋಪಿಸಿದ್ದಾರೆ.
ನಟನ ವಾದವೇನು?
'ನಾಗ ಚೈತನ್ಯ ಅವರು ತಮ್ಮ ಮಾಜಿ ಪತ್ನಿ ಸಮಂತಾಗೆ ಮೋಸ ಮಾಡಿದ್ದಾರೆ.ಸಮಂತಾ ಅವರ ನಟನಾ ಕೆರಿಯರ್ ಹಾಳಾಗಿದೆ. ನಾಗ ಚೈತನ್ಯ ತಪ್ಪಿತಸ್ಥ ಎನ್ನುವಂತೆ ಸೋಶಿಯಲ್​ ಮೀಡಿಯಾದಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ನಟನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದಿದ್ದರು.' ಎಂದು ಚೈತನ್ಯ ಪರ ನಾಗ ಚೈತನ್ಯ ಪರ ಹಿರಿಯ ವಕೀಲರಾದ ವೈಭವ್​ ಗಗ್ಗರ್ ವಾದ ಮಂಡಿಸಿದರು.
ಮುಂದುವರೆದು, ತಮ್ಮ ಲೈಕ್ಸ್​, ಸಬ್​ಸ್ಕ್ರೈಬ್​​ಗಾಗಿ ಎಐ ಬಳಕೆ ಮಾಡಿಕೊಂಡು ನಾಗಚೈತನ್ಯ ಅವರ ಫೋಟೋಗಳನ್ನು ಸೃಷ್ಟಿಸಿ ದುರುಪಯೋಗ ಪಡಿಸಿಕೊಳ್ಳುತ್ತಿವೆ. ಆಕ್ಷೇಪಾರ್ಹ ಸರ್ಚ್​, ಡೀಪ್​ ಫೇಕ್​​ ಮೂಲಕ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದರು.

ನ್ಯಾಯಾಧೀಶರು ಹೇಳಿದ್ದೇನು?

ಈ ಅರ್ಜಿಯನ್ನು ಕೈಗೆತ್ತಿಕೊಂಡ ದೆಹಲಿ ಹೈ ಕೋರ್ಟ್​ ನ್ಯಾಯಮೂರ್ತಿ ಜ್ಯೋತಿ ಸಿಂಗ್​​ ವಿಚಾರಣೆ ನಡೆಸಿ, ಸೆಪ್ಟೆಂಬರ್​30ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಸೆಲಬ್ರೆಟಿಗಳು ಸಾಮಾನ್ಯ ಜನಕ್ಕಿಂತ ಹೆಚ್ಚಾಗಿ ಟೀಕೆಗೆ ಒಳಗಾಗುತ್ತಾರೆ. ಆದರೆ ಎಲ್ಲದಕ್ಕೂ ಮಿತಿಯುದೆ ಎಂದರು. ಮುಂದುವರೆದು, ನಾಗ ಚೈತನ್ಯ ಅವರು ವ್ಯಕ್ತಿತ್ವದ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಡಿಜಿಟಲ್​ ಫ್ಲಾಟ್​ಫಾರ್ಮ್​ಗಳಿಗೆ ಸಮನ್ಸ್​ ಜಾರಿ ಮಾಡುವುದಕ್ಕೆ ಮಧ್ಯಂತರ ಆದೇಶ ಹೊರಡಿಸುವುದಾಗಿ ಜಡ್ಜ್​ ಹೇಳಿದ್ದಾರೆ.

ಸ್ಯಾಮ್​, ಚೈತನ್ಯರ ದಾಂಪತ್ಯ ಜೀವನ

ನಾಗಚೈತನ್ಯ ಮತ್ತು ಸಮಂತಾ ಅವರು ಮಜಿಲಿ, ಏ ಮಾಯಾ ಚೇಸಾವೆ ಸಿನಿಮಾ ಮೂಲಕ ಪರಿಚಯವಾದರು. ಆನಂತರ ಇಬ್ಬರು ಡೇಟಿಂಗ್​ನಲ್ಲಿದ್ದರು ಎನ್ನುವ ಗಾಸಿಪ್ಸ್​ ಹೆಚ್ಚಾಯಿತು. 2017ರಲ್ಲಿ ವಿವಾಹವಾದರು. 2021ರಲ್ಲಿ ಪರಸ್ಪರ ಒಪ್ಪಿಗೆ ಪಡೆದು ವಿಚ್ಛೇದನ ಪಡೆದುಕೊಂಡರು. 2024ರಲ್ಲಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಾಗಚೈತನ್ಯ ದಾಂಪತ್ಯ ಜೀವಕ್ಕೆ ಕಾಲಿಟ್ಟರು. 2025ರ ಡಿಸೆಂಬರ್​ನಲ್ಲಿ ಸಮಂತಾ ಅವರು ಫ್ಯಾಮಿಲಿ ಮ್ಯಾನ್​ ವೆಬ್​ ಸೀರಿಸ್​ನ ನಿರ್ದೇಶಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರ ಡಿವೋರ್ಸ್​​ ಕೇಸ್ ಮುಗಿದು ವರ್ಷ ಕಳೆದರೂ ಇನ್ನೂ ಸಮಸ್ಯೆ ಮಾತ್ರ ಇತ್ಯರ್ಥಗೊಂಡಿಲ್ಲ, (ಏಜೆನ್ಸೀಸ್).