"ನಾನು ಅವನಲ್ಲ ಅವಳು' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಆದರೆ, ವಿಜಯ್ ಅಭಿನಯ ಹೇಗಿತ್ತು ಎಂಬ ಬಹಳಷ್ಟು ಜನ ನೋಡುವುದಕ್ಕೆ ಸಾಧ್ಯವಾಗಲಿಲ್ಲ. ಪ್ರಶಸ್ತಿ ವಿಜೇತ ಚಿತ್ರಗಳು ಬಿಡುಗಡೆಯಾಗುವುದಿಲ್ಲ ಎಂಬ ಆರೋಪಕ್ಕೆ ಉತ್ತರವಾಗಿ, ರಾಜ್ಯದ್ಯಂತ ಕೆಲವು ಚಿತ್ರಮಂದಿರಗಳಲ್ಲಿ ಚಿತ್ರವೇನೋ ಬಿಡುಗಡೆ ಆಯಿತು. ಎಷ್ಟು ಜನ ಚಿತ್ರ ನೋಡಿದರೋ ಗೊತ್ತಿಲ್ಲ. ಆಗ ಮಿಸ್ ಆದವರು, ಈಗ ಚಿತ್ರವನ್ನು ನೋಡಬಹುದಾಗಿದೆ.
ವಿಜಯ್ ನಿಧನದ ನಂತರ "ನಾನು ಅವನಲ್ಲ ಅವಳು' ಚಿತ್ರವನ್ನು ನೋಡಲು ಅನುವು ಮಾಡಿಕೊಡಿ ಎಂದು ಹಲವರು ಚಿತ್ರತಂಡದವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚಿತ್ರವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ಒಂದೇ ದಿನದಲ್ಲಿ ಒಂದು ಲಕ್ಷ ವೀಕ್ಷಣೆ ಪಡೆದಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಬಿ.ಎಸ್. ಲಿಂಗದೇವರು, "ಚಿತ್ರವನ್ನು ನೋಡುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕಳೆದ ಮೂರು ದಿನಗಳಿಂದ ನೂರಾರು ೋನ್ಕಾಲ್ಗಳು ಮತ್ತು ಮೆಸೇಜ್ಗಳು ಬಂದಿವೆ.
ನಾನು ಕನ್ನಡದ ಪ್ರಮುಖ ಚಾನಲ್ನವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದೆ. ಆದರೆ, ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಇಷ್ಟೆಲ್ಲ ಸುದ್ದಿಯಾದ ಚಿತ್ರವನ್ನು ಅವರು ಪ್ರದರ್ಶನ ಮಾಡುವುದಿಲ್ಲ ಎಂದರೆ, ಏನು ಹೇಳಬೇಕೋ ಗೊತ್ತಿಲ್ಲ. ೋನ್ ಎತ್ತಿದರೆ ಮಾತನಾಡಬಹುದು. ಆದರೆ, ಸಂಪರ್ಕಕ್ಕೇ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾವ ವ್ಯವಹಾರವೂ ಬೇಡ, ಮೊದಲು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ನಿರ್ಮಾಪಕ ರವಿ ಗರಣಿ, ಚಿತ್ರವನ್ನು ಯೂಟ್ಯೂಬ್ಗೆ ಅಪ್ಲೋಡ್ ಮಾಡಿಸಿದ್ದಾರೆ. ಚಿತ್ರವನ್ನು ಯಾರು ಬೇಕಾದರೂ ಉಚಿತವಾಗಿ ನೋಡಬಹುದು' ಎನ್ನುತ್ತಾರೆ.