ಹೈದರಾಬಾದ್: ಯಾವುದೇ ನಿರ್ಧಾರವು ಎಂದಿಗೂ ಒಂದೇ ಆಗಿರುವುದಿಲ್ಲ. ಅದು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಅದರಲ್ಲೂ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿನ ಜನ ತೆಗೆದುಕೊಳ್ಳುವ ನಿರ್ಧಾರಗಳು ಮಾತ್ರ ಹೆಚ್ಚಾಗಿ ಸುದ್ದಿಯಲ್ಲಿ ಇರುತ್ತವೆ. ಯಾಕೆಂದರೆ, ಈ ಮಂದಿಯ ನಿರ್ಧಾರಗಳು ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಹೀರೋಯಿನ್ಗಳು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲರಲ್ಲೂ ಅಚ್ಚರಿ ದೂಡುತ್ತವೆ. ನಟಿ ತಮನ್ನಾ ಲಿಪ್ಲಾಕ್ ಸೀನ್ಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ, ವೆಬ್ಸೀರಿಸ್ನಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಅದೇ ರೀತಿ ಇದೀಗ ಮತ್ತೊಬ್ಬ ನಟಿ ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಮೃನಾಲ್ ಠಾಕೂರ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸೂಪರ್ ಹಿಟ್ ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಾಲಿವುಡ್ಗಿಂತ ಬೇರೆ ಭಾಷೆಗಳಲ್ಲೇ ಭಾರಿ ಆಫರ್ಗಳು ಬರುತ್ತಿವೆ. ಸದ್ಯ ಮೃನಾಲ್ ಸ್ಟಾರ್ ನಟಿಯರ ಸಾಲಿಗೆ ಸೇರಿದ್ದಾರೆ.
ತಾಜಾ ಸಂಗತಿ ಏನೆಂದರೆ, ಮೃನಾಲ್ ಠಾಕೂರ್, ಇತ್ತೀಚೆಗಷ್ಟೇ ಸಂಚಲನ ಮೂಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಈಗ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಮೃನಾಲ್ ಅವರ ನಿರ್ಧಾರ ಇತರ ನಾಯಕಿಯರ ಬೆವರಿಳಿಸಿದೆ. ಈ ಹಿಂದೆ ತಂದೆಗೆ ಕೊಟ್ಟ ಮಾತಿನಂತೆ ಬೋಲ್ಡ್ ಪಾತ್ರಗಳಲ್ಲಿ ನಟಿಸದಿರಲು ನಿರ್ಧರಿಸಿದ್ದರು. ಇದರಿಂದ ಆಕೆಗೆ ಹೆಚ್ಚು ಅವಕಾಶಗಳು ಬರಲಿಲ್ಲ. ಆದರೆ, ಇದೀಗ ತಮ್ಮ ನಿರ್ಧಾರ ಬದಲಿಸಿರುವ ಮೃನಾಲ್, ತುಂಬಾ ಬೋಲ್ಡ್ ಪಾತ್ರದಲ್ಲಿಯೂ ನಟಿಸಲು ಓಕೆ ಎಂದಿದ್ದಾರಂತೆ.
ಈ ರೀತಿಯ ನಿರ್ಧಾರವನ್ನು ಮೃನಾಲ್ ಏಕೆ ತೆಗೆದುಕೊಂಡರು ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಮೃನಾಲ್ ಅವರ ಎತ್ತರ, ಸೌಂದರ್ಯ ಮತ್ತು ನಟನೆಯು ದೊಡ್ಡ ಸ್ಟಾರ್ ಹೀರೋಗಳಿಗೆ ಹೋಲುತ್ತದೆ. ಆದರೆ ಆಕೆ ಹಾಕಿಕೊಂಡ ಕೆಲವು ಬೌಂಡರಿಗಳಿಂದಾಗಿ ಅವಕಾಶಗಳು ಸಿಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಈಗ ಆ ಷರತ್ತುಗಳನ್ನೂ ಮುರಿಯಲು ಮೃನಾಲ್ ಠಾಕೂರ್ ರೆಡಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಫ್ಯಾಮಿಲಿ ಸ್ಟಾರ್ ಸಿನಿಮಾದಲ್ಲೂ ನಟಿಸಿದ್ದರು. ಈ ಚಿತ್ರ ಮಿಶ್ರ ಟಾಕ್ ಪಡೆದರೂ ಮೃನಾಲ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದವು. (ಏಜೆನ್ಸೀಸ್)