ಮೃಣಾಲ್ ನಟಿಸಿದ್ದ ಫ್ಯಾಮಿಲಿ ಸ್ಟಾರ್ ಮತ್ತು ಸನ್ ಆಫ್ ಸರ್ದಾರ್2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿಲ್ಲ. ಆದರೂ ಸಹ ಸಿನಿಮಾ ಇಂಡಸ್ಟ್ರಿಯಲ್ಲಿ ಅವರಿಗಿರುವ ಬೇಡಿಕೆ ಕಡಿಮೆಯಾಗಿಲ್ಲ. ಅಟ್ಲೀ ನಿರ್ದೇಶನದ ರಾಕಾ ಸಿನಿಮಾದಲ್ಲಿ ಮೃಣಾಲ್ ನಟಿಸಲಿದ್ದಾರೆ ಎನ್ನುವ ವದಂತಿಗಳು ,ಮಾತ್ರ ಸಾಕಷ್ಟು ಹರಿದಾಡುತ್ತಿದೆ. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಮೃಣಾಲ್ ಅವರು, 9 ತಿಂಗಳಿಂದ ಯಾವುದೇ ಹೊಸ ಸಿನಿಮಾಗೆ ಸೈನ್ ಮಾಡಿಲ್ಲ. ಆದರೆ, ರಾಕಾ ಸಿನಿಮಾಗೆ ಸಹಿ ಮಾಡಿಲ್ಲ ಎನ್ನುವ ಬಗ್ಗೆ ನಟಿ ಎಲ್ಲಿಯೂ ಸ್ಪಷ್ಟನೆ ಕೊಟ್ಟಿಲ್ಲ.