ಸಿನಿವಾಣಿ

ಅಮ್ಮಂದಿರ ದಿನದ ಸ್ಪೆಶಲ್​: ಬಾಲಿವುಡ್​ ತಾಯಂದಿರ ಸಂಭ್ರಮ ನೋಡಿ!

rameshmysuru

ಮುಂಬೈ: ಅಮ್ಮ ಎಂಬ ಶಬ್ಧವೇ ಅಂಥದ್ದು. ಅದರಲ್ಲಿ ಏನೋ ಸೆಳೆತ, ಮಮಕಾರ, ಪ್ರೀತಿ, ಪ್ರೇಮ, ಬೆಚ್ಚನೆಯ ಅನುಭವದಂಥ ಹಲವು ಭಾವಗಳು ಆ ಪದದಲ್ಲಿ ಅಡಗಿದೆ. ಇದಕ್ಕೆ ಸಿನಿಮಾ ಮಂದಿಯೂ ಹೊರತಲ್ಲ. ತೆರೆಯ ಮೇಲಷ್ಟೇ ಅಲ್ಲ, ನಿಜಜೀವನದಲ್ಲೂ ತಾಯಂದಿರಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಟಿಯರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ... ನಿಭಾಯಿಸುತ್ತಲೂ ಇದ್ದಾರೆ.

ಇವರಲ್ಲಿ ಪ್ರಮುಖರ ಸ್ಥಾನದಲ್ಲಿ ಕಾಣಿಸುವವರು ಎಂದರೆ ಶ್ರೀದೇವಿ. ತಮ್ಮ ತಾಯಿಯಂತೆ ನಟನೆಯಲ್ಲೂ ಉತ್ತಮ ಸಾಧನೆ ಮೆರೆಯುವ ಕುರುಹು ತೋರಿರುವ ಶ್ರೀದೇವಿ-ಬೋನಿ ಕಪೂರ್​ ಪುತ್ರಿ ಜಾಹ್ನವಿ ಅವರಿಗೆ ತಮ್ಮ ತಾಯಿ ಎಂದರೆ ತುಂಬಾ ಇಷ್ಟ. ಈ ಹಿನ್ನೆಲೆಯಲ್ಲಿ ಅವರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ತಾಯಿಯನ್ನು ಸ್ಮರಿಸಿಕೊಳ್ಳದೇ ಇರುವುದಿಲ್ಲ.

ಭುವನ ಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ದಾಂಪತ್ಯದಲ್ಲಿ ಜನಿಸಿರುವ ಆರಾಧ್ಯ ಬಾಲಿವುಡ್​ನ ಬಿಗ್​ಬಿ ಅಮಿತಾಭ್​ ಬಚ್ಚನ್​ ಅವರ ಮನೆಯ ಕಣ್ಮಣಿ. ಅಮ್ಮನ ಆರೈಕೆ, ಹದ್ದಿನ ಕಣ್ಣಿನಡಿ ಅರಳುತ್ತಿರುವ ಆರಾಧ್ಯ ಅಮ್ಮನೊಂದಿಗೆ ಫೋಟೋಕ್ಕೆ ಫೋಸ್​ ಕೊಡುವುದರಲ್ಲಿ ಎತ್ತಿದ ಕೈ.

ಶಾರುಕ್​ ಖಾನ್​ ಮತ್ತು ಗೌರಿ ಖಾನ್​ ಪುತ್ರಿ ಸುಹಾನಾ ಖಾನ್​ ಬೆಳ್ಳಿತೆರೆ ಮೇಲೆ ಮಿಂಚುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಹಾನಾ ಖಾನ್​ ಬಗ್ಗೆ ಯಾವುದೇ ಪೋಸ್ಟ್​ಗಳು ಇಲ್ಲದ ದಿನವೇ ಇಲ್ಲ ಎನ್ನಬಹುದು. ಈಗಲೇ ಅವರು ಅಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ನೂರಾರು ಫ್ಯಾನ್ಸ್​ ಕ್ಲಬ್​ಗಳು ಕೂಡ ಹುಟ್ಟಿಕೊಂಡಿವೆ. ತಾಯಿಯೊಂದಿಗೆ ಪರಮಾಪ್ತ ಸಂಬಂಧ ಹೊಂದಿರುವ ಅವರು ಲಾಕ್​ಡೌನ್​ನಲ್ಲೂ ತಮ್ಮ ತಾಯಿಯೊಂದಿಗೆ ಫೋಟೋಕ್ಕೆ ಫೋಸ್​ ಕೊಟ್ಟಿದ್ದಾರೆ.

ಬಾಲಿವುಡ್​ನಲ್ಲಿ ತುಂಬಾ ಜನಪ್ರಿಯವಾಗಿರುವ ಅಮ್ಮ-ಮಗಳ ಜೋಡಿಯಲ್ಲಿ ಕಾಜೋಲ್​ ಮತ್ತು ನ್ಯಾಸಾ ಜೋಡಿ ಕೂಡ ಒಂದು. ಅಮ್ಮನನ್ನು ತುಂಬಾ ಹಚ್ಚಿಕೊಂಡಿರುವ ನ್ಯಾಸಾ ಸದಾ ಅಮ್ಮನಿಗೆ ಅಂಟಿಕೊಂಡಿರುತ್ತಾರೆ. ನ್ಯಾಸಾ, ಅಪ್ಪನಿಗೂ ಪ್ರೀತಿಯ ಮಗಳು. ಅವಕಾಶ ಸಿಕ್ಕಾಗಲೆಲ್ಲ ಅಜಯ್​ ಮತ್ತು ಕಾಜೋಲ್​ ತಮ್ಮ ಪುತ್ರಿಯೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಾರೆ.

ಬಾಲಿವುಡ್​ನಲ್ಲಿ ಈಗಾಗಲೆ ತಮ್ಮದೇ ಆದ ಛಾಪು ಮೂಡಿಸುತ್ತಾ, ಖ್ಯಾತಿಯ ಉತ್ತುಂಗಕ್ಕೇರುವ ಕುರುಹು ತೋರಿರುವ ಸೈಫ್​ ಆಲಿ ಖಾನ್​ ಮತ್ತು ಅಮೃತಾ ಸಿಂಗ್​ ಪುತ್ರಿ ಸಾರಾ ಆಲಿ ಖಾನ್​ ಅಮ್ಮನೊಂದಿಗೆ ವಿಶೇಷ ಆಪ್ತ ಸಂಬಂಧ ಹೊಂದಿದ್ದಾರೆ. ಅಮ್ಮನ ಹದ್ದಿನಕಣ್ಣಿನಡಿಯಲ್ಲೇ ಬಾಲಿವುಡ್​ ಪ್ರವೇಶಿಸಿದವರು ಅವರು.

ನೇಹಾ ಧುಪಿಯಾ ಮತ್ತು ಅಂಗದ್​ ಬೇಡಿ ಪುತ್ರಿ ಮೆಹರ್​ ಧುಪಿಯಾ ಬೇಡಿ ಚಿಗುರುತ್ತಿರುವ ಕುಡಿ. ಆದರೂ ಅಮ್ಮ ಮಗಳ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಬಂದಿಗಳಾಗಿರುವ ಇವರಿಬ್ಬರೂ ತಮ್ಮದೇ ಆದ ರೀತಿಯಲ್ಲಿ ಅಮೋದ-ಪ್ರಮೋದಗಳಲ್ಲಿ ತೊಡಗಿಕೊಂಡಿದ್ದು, ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.