Mother Promise release date fixed 
ಸಿನಿವಾಣಿ

ಡಾಲಿ ಧನಂಜಯ್ ನಿರ್ಮಿಸಿ, ನಟಿಸಿರುವ 'ಮದರ್​ ಪ್ರಾಮಿಸ್'​ ರಿಲೀಸ್​ಗೆ ಮುಹೂರ್ತ ಫಿಕ್ಸ್; ಬಿಡುಗಡೆ ದಿನಾಂಕ ಯಾವುದು?

ಪ್ರಮುಖ ಮುಖ್ಯಾಂಶಗಳು

  • 'ಮದರ್​ ಪ್ರಾಮಿಸ್'​ ಸಿನಿಮಾ ರಿಲೀಸ್​ಗೆ ದಿನಾಂಕ ನಿಗದಿ
  • ಜುಲೈ10ರಂದು ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್​ ಪ್ರಾಮಿಸ್'​ ರಿಲೀಸ್
  • 'ಮದರ್​ ಪ್ರಾಮಿಸ್'​ ಸಿನಿಮಾ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಲಿರುವ ನಟ ಪೂರ್ಣಚಂದ್ರ ಮೈಸೂರು
Mother Promiseಡಾಲಿ ಪಿಕ್ಚರ್ಸ್​​ ಅಡಿ ಸಿನಿಮಾ, ವೆಬ್​ ಸೀರಿಸ್​ ನಿರ್ಮಾಣ ಮಾಡುತ್ತಿರುವ ನಟ ಧನಂಜಯ್​ ಅವರು ಹೊಸ ನಿರ್ದೇಶಕರಿಗೆ, ನಟರಿಗೆ ಅವಕಾಶ ನೀಡುತ್ತಿದ್ದಾರೆ. 'ಡೇರ್​ ಡೆವಿಲ್​ ಮುಸ್ತಫಾ', 'ಜೆರಾಕ್ಸ್​', ಟಗರು ಪಲ್ಯ, ಇಕ್ಕಟ್​  ಇದಕ್ಕೆ ಉದಾಹರಣೆ.  ಸದ್ಯ ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್​ ಪ್ರಾಮಿಸ್'​ ಸಿನಿಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ನಟ ಪೂರ್ಣಚಂದ್ರ ಮೈಸೂರು ನಿರ್ದೇಶಕರಾಗಿ ಹೊರಹೊಮ್ಮಲಿದ್ದಾರೆ. 
ಹೌದು,  ಸೋಮವಾರ ಡಾಲಿ ಧನಂಜಯ್​ ಅವರು ತಮ್ಮ ಎಕ್ಸ್​, ಫೇಸ್​ಬುಕ್​ ಸೇರಿದಂತೆ ಸೋಶಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 'ಜುಲೈ 10ರಂದು ನಿಮ್ಮ ಹತ್ತಿರದ ಸಿನಿಮಾ ಮಂದಿರದಲ್ಲಿ ಮದರ್ ಪ್ರಾಮಿಸ್ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ' ಎಂದಿದ್ದಾರೆ

ಧನಂಜಯ್​ ಪೋಸ್ಟ್​ನಲ್ಲಿ ಏನಿದೆ?

'ಡಿಸ್ಟ್ರಿಬ್ಯೂಟರ್ ಲಾಕ್ ಆಗಿದೆ. ಡೇಟ್ fix ಆಗಿದೆ. ಹತ್ತಿರದ ಚಿತ್ರಮಂದಿರದಲ್ಲಿ ಜುಲೈ 10 ರಿಂದ ಆಟ ಶುರು' ಎಂದು ಮದರ್​ ಪ್ರಾಮಿಸ್ ಸಿನಿಮಾದ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅವರ ಈ ಪೋಸ್ಟ್​ಗೆ ಹಲವರು  ಕಂಗ್ರಾಜ್ಯುಲೇಶನ್​ ಎನ್ನುವ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಶುಭವಾಗಲಿ, ಗುಡ್​ಲಕ್​ ಅಣ್ಣ,  ಗ್ರೂಪ್​ ಫೋಟೋ ಚೆನ್ನಾಗಿದೆ ಎನ್ನುವ ಕಾಮೆಂಟ್​ಗಳನ್ನು ಮಾಡಿ, ಸಿನಿಮಾ ತಂಡಕ್ಕೆ ಹಾರೈಸುತ್ತಿದ್ದಾರೆ.

ಮದರ್​ ಪ್ರಾಮಿಸ್ ಕತೆ ಏನು?

ಬಹುತೇಕ ಹೊಸ ಹುಡುಗರೇ ಇರುವ ಈ ಸಿನಿಮಾವು ಒಂದು ಕಾಮಿಡಿ ಜಾನರ್​​​ ಆಗಿರಲಿದೆ. ಝೆನ್​​ ಜಿ ಕಾಲದ ಯುವಕ  ಮತ್ತು ಯುವತಿಯರಿಗೆ ಕನೆಕ್ಟ್​ ಆಗುವ ಸಿನಿಮಾ ಇದು. ಇದೊಂದು ತಮಾಷೆಯಾಗಿ ಮೂಡಿ ಬರುವ ಲೈಟ್​ ಹ್ಯೂಮರ್​ ಕತೆ ಎನ್ನಲಾಗಿದೆ. ಮಹಾನಗರಗಳಿಗೆ ಕಾಲಿಟ್ಟು, ಬದುಕು ಕಟ್ಟಿಕೊಳ್ಳಲು ಒದ್ದಾಡುವ ತರುಣರ ಕತೆ ಎಂದು ಪೂರ್ಣಚಂದ್ರ ಮೈಸೂರು ಅವರು ಹೇಳಿದ್ದರು.
ಸಿನಿಮಾದಲ್ಲಿ ನಟರಾಕ್ಷಸ ಡಾಲಿ ಧನಂಜಯ್​​,   ನಾಗಭೂಷಣ್​​, ಗೀತ, ವಿನಯಾ ಪ್ರಸಾದ್​​​, ರೀಲ್ಸ್​ ಸ್ಟಾರ್​ ಆದ ಯಶವಂತ್​ ಶೆಟ್ಟಿ  ಹಾಗೂ ಡೇರ್​ ಡೆವಿಲ್​ ಮುಸ್ತಫಾ ಸಿನಿಮಾದಲ್ಲಿ ನಟಿಸಿದ್ದ ಸುಪ್ರೀತ್​ ಭಾರದ್ವಾಜ್​,  ಕೇರ್ ಆಫ್ ಫುಟ್‌ಪಾತ್ 2, ಬೆಲ್​ ಬಾಟಂ ಸಿನಿಮಾಗಳಲ್ಲಿ ನಟಿಸಿರುವ ಡಿಂಗ್ರಿ ನರೇಶ್​ ಸೇರಿದಂತೆ ಹಲವರು ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ. 

ಡಾಲಿ ಬರೆದಿದ್ದ ತಾಯಿ ಹಾಡು ವೈರಲ್​

ನೀನೇ ಬೇಕು ಅಮ್ಮ ಎನ್ನುವ ಹಾಡನ್ನು ಇದೇ ಸಿನಿಮಾಕ್ಕಾಗಿ ಡಾಲಿ ಧನಂಜಯ್​ ಅವರು ಬರೆದಿದ್ದರು. ಈ ಬಗ್ಗೆ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು.ಈ ಸಿನಿಮಾದ ಅಮ್ಮನ ಹಾಡು, ನೀನೆ ಬರೀಬೇಕು ಅಂದ ಪೂರ್ಣ. “ಟಗರುಪಲ್ಯ” ನಂತರ ಹಾಡು ಬರೆಯೋಕೆ ಆಗಿರಲಿಲ್ಲ. ಮನಸ್ಸು ಕ್ರಿಯೇಟಿವಿ ಝೋನ್​ ಇಂದ ದೂರ ಆಗಿ , ನಿರ್ಮಾಣ, ವ್ಯವಹಾರಗಳಲ್ಲಿ, ಬದುಕಿನ ಗೋಜಲುಗಳಲ್ಲಿ, ಬೇರೆ ಖುಷಿಗಳಲ್ಲಿ ಕಳೆದು ಹೋಗಿತ್ತು. ಮತ್ತೆ ಬರೆಯೋಕೆ ಆಗತ್ತ ಅನ್ನೋ ಯೋಚನೆಲೆ ಶುರು ಮಾಡಿದೆ. ಸಿಂಪಲ್ ಆಗಿ ಏನೋ ಬರೆಯುವ ಪ್ರಯತ್ನ ಮಾಡಿದ್ದೇನೆ. ಅಮ್ಮನ ಬಗ್ಗೆ ಏನ್ ಬರೆದ್ರು, ಎಷ್ಟ್ ಬರೆದ್ರು ಕಮ್ಮಿನೆ. ಓದಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ ಎಂದು ಮೇ10ರ ತಾಯಂದಿರ ದಿನಕ್ಕಾಗಿ ಈ ಹಾಡನ್ನು ಹಂಚಿಕೊಂಡಿದ್ದರು, (ಏಜೆನ್ಸೀಸ್).