ಜೂ.​ ಆರ್ಟಿಸ್ಟ್​ ಆಗಿ ಎಂಟ್ರಿಕೊಟ್ಟ ಮಮಿತಾ ಇಂದು ಬ್ಲಾಕ್​ಬಸ್ಟರ್​ ಚಿತ್ರಗಳ ಸ್ಟಾರ್​ ಹೀರೋಯಿನ್​! ಜೋರಾಯ್ತು ಯುವ ನಟಿಯ ಕ್ರೇಜ್​ | Mamitha Baiju  
ಮಾಲಿವುಡ್

ಜೂ.​ ಆರ್ಟಿಸ್ಟ್​ ಆಗಿ ಎಂಟ್ರಿಕೊಟ್ಟ ಮಮಿತಾ ಇಂದು ಬ್ಲಾಕ್​ಬಸ್ಟರ್​ ಚಿತ್ರಗಳ ಸ್ಟಾರ್​ ಹೀರೋಯಿನ್​! ಜೋರಾಯ್ತು ಯುವ ನಟಿಯ ಕ್ರೇಜ್​ | Mamitha Baiju

ಮಲಯಾಳಂನ ಯುವ ಜನಪ್ರಿಯ ನಟಿ, ಸದ್ಯ ಸಾಲು ಸಾಲು ಹಿಟ್​ ಸಿನಿಮಾಗಳನ್ನೇ ಕೊಡುತ್ತಿದ್ದಾರೆ ಎನ್ನುವುದಕ್ಕಿಂತ ಪ್ರತಿ ಚಿತ್ರಗಳಲ್ಲಿನ ಅವರ ಮುದ್ದಾದ ಹಾಗೂ ನೋಡುಗರು ಒಪ್ಪಿಕೊಳ್ಳುವಂತ ಅಭಿನಯ ಸಿನಿಪ್ರಿಯರ ಫೇವರೆಟ್​ ಆಗಿಬಿಟ್ಟಿದೆ.

Mamitha Baiju: ಮಲಯಾಳಂ ಚಿತ್ರರಂಗದಲ್ಲಿ ಸಣ್ಣ-ಪುಟ್ಟ, ಪಾತ್ರಗಳಿಂದ, ಜೂನಿಯರ್​ ಆರ್ಟಿಸ್ಟ್​ ಆಗಿ ಸಿನಿ ಕರಿಯರ್​ ಆರಂಭಿಸಿದ ಮಮಿತಾ ಬೈಜು ಈಗ ಭಾರತೀಯ ಚಿತ್ರೋದ್ಯಮದಲ್ಲಿ ಅತ್ಯಂತ ಯಶಸ್ವಿ ನಟಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೇ, ಹೊಸ ಮೈಲಿಗಲ್ಲು ಕೂಡ ಸಾಧಿಸಿರುವುದು ಸದ್ಯ ಅವರ ಬೇಡಿಕೆಯನ್ನು ದುಪ್ಪಟ್ಟಾಗಿಸಿದೆ.

ಈ ವರ್ಷ ಜನ ನಾಯಗನ್​, ವಿಶ್ವನಾಥ್​ ಅಂಡ್​ ಸನ್ಸ್​ ಮತ್ತು ಬೆತ್ಲಹೆಮ್​ ಕುಟುಂಬ ಯೂನಿಟ್​ ಎಂಬ ಮೂರು ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡುವ ಮೂಲಕ ಬಾಲಿವುಡ್ ನಟಿಮಣಿಯರಾದ​ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್​ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮಲಯಾಳಂನ ಯುವ ಜನಪ್ರಿಯ ನಟಿ, ಸದ್ಯ ಸಾಲು ಸಾಲು ಹಿಟ್​ ಸಿನಿಮಾಗಳನ್ನೇ ಕೊಡುತ್ತಿದ್ದಾರೆ ಎನ್ನುವುದಕ್ಕಿಂತ ಪ್ರತಿ ಚಿತ್ರಗಳಲ್ಲಿನ ಅವರ ಮುದ್ದಾದ ಹಾಗೂ ನೋಡುಗರು ಒಪ್ಪಿಕೊಳ್ಳುವಂತ ಅಭಿನಯ ಸಿನಿಪ್ರಿಯರ ಫೇವರೆಟ್​ ಆಗಿಬಿಟ್ಟಿದೆ.

4ರಲ್ಲಿ ಮೂರು ಸೂಪರ್​ಹಿಟ್​

ಈ ವರ್ಷ, ಒಟ್ಟು ನಾಲ್ಕು ಸಿನಿಮಾಗಳನ್ನು ನೀಡಿರುವ ಯುವ ನಟಿಗೆ ಮೂರು ಚಿತ್ರಗಳು ಕೈಹಿಡಿದಿದ್ದು, ಒಂದು ಮಾತ್ರ ಫ್ಲಾಪ್​ ಸಾಲಿಗೆ ಸೇರಿದೆ. ಕೇವಲ ಇದೊಂದು ವರ್ಷದಲ್ಲಿ 800 ಕೋಟಿ ರೂ. ಗಳಿಕೆ ಕಂಡಿರುವ ಮಮಿತಾ ನಟನೆಯ ಚಿತ್ರಗಳು, ನಟಿಯ ಹೆಸರಿಗೆ ಹೊಸ ದಾಖಲೆಯನ್ನೂ ಸೇರಿಸಿದೆ. ತಮ್ಮ ಇತ್ತೀಚಿನ 'ಬೆತ್ಲೆಹೆಮ್ ಕುಟುಂಬ ಯೂನಿಟ್' ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಈ ಮಲಯಾಳಿ ಬ್ಯೂಟಿ, ನಟಿಸಿದ ಮೂರು ಬಹುನಿರೀಕ್ಷಿತ ಸಿನಿಮಾಗಳು 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಕಂಡಿದೆ. ಈ ರೀತಿ ಒಂದೇ ವರ್ಷದಲ್ಲಿ ಮೂರು ಸೂಪರ್​ಹಿಟ್ ಚಿತ್ರಗಳನ್ನು ಕೊಟ್ಟ ಹಾಗೂ ಕಲೆಕ್ಷನ್​ ಕಂಡ ಭಾರತೀಯ ನಟಿಯರ ಪೈಕಿ​ ಮಮಿತಾ ಮೂರನೇ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸರಳ ನಟನೆಗೆ ಫಿದಾ

'ಪ್ರೇಮಲು' ಮೂಲಕ ಸೂಪರ್​ಹಿಟ್​ ನೋಡಿದ ಈ ಚೆಲುವೆ, ಇಲ್ಲಿಯವರೆಗೆ ಅಭಿನಯಿಸಿರುವ ಅಷ್ಟು ಸಿನಿಮಾಗಳಲ್ಲಿಯೂ ಗ್ಲಾಮರಸ್​ಗಿಂತಲೂ ತಮ್ಮ ಸಿಂಪಲ್​ ನಟನೆಯಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಡ್ಯೂಡ್​ ಚಿತ್ರದಿಂದ ಸಿನಿಪ್ರಿಯರಿಗೆ ಇನ್ನಷ್ಟು ಹತ್ತಿರವಾದ ಮಮಿತಾ, ಕೇವಲ ಮಲಯಾಳಂ, ಕಾಲಿವುಡ್​, ಮಾಲಿವುಡ್​ ಮಾತ್ರವಲ್ಲದೇ, ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷೆಯ ಸಿನಿಪ್ರೇಮಿಗಳು ಸಖತ್​ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ವ್ಯಾಪಕ ಮೆಚ್ಚುಗೆ ಗಳಿಸಿ ಎಲ್ಲರ ಹೃದಯ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬ್ಯೂಟಿ ಬದಲಿಗೆ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಮಮಿತಾ, ಪ್ರತಿ ಚಿತ್ರದಲ್ಲಿಯೂ ತುಂಬಾ ಸರಳವಾದ ನಟನೆಯ ಮೂಲಕವೇ ಈಗ ಭಾರತದ ಟಾಪ್​ ಟ್ರೆಂಡಿಂಗ್​ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.

ನಟ ಸೂರ್ಯ ಗುಣಗಾನ

'ವಿಶ್ವನಾಥ್ ಅಂಡ್​ ಸನ್ಸ್' ಚಿತ್ರದ ಬಿಡುಗಡೆಗೂ ಮುನ್ನ ವೇದಿಕೆಯಲ್ಲಿ ಮಮಿತಾ ಬಗ್ಗೆ ಮಾತನಾಡಿದ್ದ ತಮಿಳು ನಟ ಸೂರ್ಯ, ಯಾವುದೇ ಬ್ಯಾಕ್​ಗ್ರೌಂಡ್​ ಇಲ್ಲದೇ, ತನ್ನ ಮೇಲೆ ನಂಬಿಕೆ ಇಟ್ಟುಕೊಂಡು ಇಲ್ಲಿಯವರೆಗೆ ಬಂದ ಯುವತಿ ಈಕೆ. ಬಾಲನಟಿಯಾಗಿ, ಜೂನಿಯರ್​ ಆರ್ಟಿಸ್ಟ್​ ಆಗಿ ಇಂದು ವಿಶ್ವನಾಥ್​ ಅಂಡ್​ ಸನ್ಸ್​ ಚಿತ್ರದಲ್ಲಿ ಸೆಂಟರ್​ ಸ್ಟೇಜ್​ ಗಿಟ್ಟಿಸಿಕೊಂಡಿದ್ದಾರೆ ಎಂದು ಗುಣಗಾನ ಮಾಡಿದರು.

ಸಾಲು ಸಾಲು ಸಿನಿಮಾ

ಒಂದೇ ವರ್ಷದಲ್ಲಿ ಬ್ಯಾಕ್​ ಟು ಬ್ಯಾಕ್​ ಸೂಪರ್​ಹಿಟ್​ ನೋಡಿದ ಯುವ ನಟಿಯ ಕೈಯಲ್ಲಿ ಇದೀಗ ಸಾಲು ಸಾಲು ಸಿನಿಮಾಗಳಿವೆ. ದೊಡ್ಡ ಬ್ಯಾನರ್​ನಿಂದ ಹಿಡಿದು ಹೊಸಬರ ತಂಡಗಳು ಮಮಿತಾರನ್ನು ತಮ್ಮ ಮುಂದಿನ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳಲು ಮುಂದಾಗಿವೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ಪೈಕಿ, ಪ್ರಸ್ತುತ 'ಇರಂದು ವಾನಮ್'​ (ತಮಿಳು), 'ಪ್ರೇಮಲು' (ಮಲಯಾಳಂ), 'ಹಲೋ ಡಿಯರ್'​ (ಮಲಯಾಳಂ) ಮತ್ತು ಇನ್ನೂ ಹೆಸರಿಡದ 'ಪಿಆರ್​ಎಸ್​01' (ತಮಿಳು) ಸಿನಿಮಾಗಳಲ್ಲಿ ಬೈಜು ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ,(ಏಜೆನ್ಸೀಸ್).