ಹಿರಿಯ ನಟಿ ಊರ್ವಶಿ ಮಗಳ ಫೋಟೋ ವೈರಲ್​ 
ಮಾಲಿವುಡ್

ಅಮ್ಮನನ್ನು ಮೀರಿಸುವ ಸುಂದರಿ ತೇಜಲಕ್ಷ್ಮೀ: ಹಿರಿಯ ನಟಿ ಊರ್ವಶಿ ಪುತ್ರಿಯ ಹಾಟ್​ ಅವತಾರ ವೈರಲ್​! Urvashi daughter

ಪ್ರಮುಖ ಮುಖ್ಯಾಂಶಗಳು

  • ಹಿರಿಯ ನಟಿ ಊರ್ವಶಿ ಅವರ ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಊರ್ವಶಿ ಅವರಂತೆಯೇ ಮಗಳು ಕೂಡ ತುಂಬಾ ಸುಂದರವಾಗಿದ್ದಾರೆ ಎಂದ ನೆಟ್ಟಿಗರು
  • ಮಲಯಾಳಂ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ತೇಜಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್
Urvashi daughter : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಖ್ಯಾತ ನಟಿಯರು ಬಾಲ್ಯದಲ್ಲಿ ಹೇಗಿದ್ದರು? ಹಿರಿಯ ನಟ-ನಟಿಯರ ಮಕ್ಕಳು ಈಗ ಹೇಗಿದ್ದಾರೆ? ಸಿನಿಮಾಗೆ ಬರುವ ಮುಂಚೆ ಅವರು ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಇದೀಗ ಹಿರಿಯ ನಟಿ ಊರ್ವಶಿ ಅವರ ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಊರ್ವಶಿ ಅವರಂತೆಯೇ ಮಗಳು ಕೂಡ ತುಂಬಾ ಸುಂದರವಾಗಿದ್ದಾರೆ ಎಂದು ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. 
ಅಂದಹಾಗೆ, ಹಿರಿಯ ನಟಿ ಊರ್ವಶಿ ಅವರ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಅವರ ಪರಿಚಯ ಕನ್ನಡಿಗರಿಗೂ ಇದೆ. ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​ ಹಾಗೂ ಅಂಬರೀಷ್​ ಸೇರಿದಂತೆ ಮೇರು ನಟರ ಜತೆ ನಟಿಸಿ, ಊರ್ವಶಿ ಸೈ ಎನಿಸಿಕೊಂಡಿದ್ದಾರೆ. ಹಾಸ್ಯ ಪಾತ್ರಗಳ ಮೂಲಕವೂ ಮಿಂಚು ಹರಿಸಿದ್ದಾರೆ. ಕೇರಳದಲ್ಲಿ ಜನಿಸಿದ ಊರ್ವಶಿ ಅವರು ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಸಿದ್ಧರಾಗಿದ್ದಾರೆ. ಇಂದಿಗೂ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈವರೆಗೂ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ, ಐದು ಕೇರಳ ಮತ್ತು ತಮಿಳುನಾಡು ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ. 
ಅಂದಹಾಗೆ ಮಲಯಾಳಂ ನಟ ಮನೋಜ್ ಕೆ ಜಯನ್ ಅವರನ್ನು 2000ನೇ ಇಸವಿಯಲ್ಲಿ ಊರ್ವಶಿ ಅವರು ವಿವಾಹವಾದರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ತೇಜಲಕ್ಷ್ಮಿ ಎಂಬ ಮಗಳಿದ್ದಾಳೆ. ಆರಂಭದಲ್ಲಿ ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ, ನಂತರದ ದಿನಗಳಲ್ಲಿ ಕೌಟುಂಬಿಕ ಕಲಹ ಉಂಟಾಗಿ 2008ರಲ್ಲಿ ಊರ್ವಶಿ ಮತ್ತು ಮನೋಜ್​ ವಿಚ್ಛೇದನ ಪಡೆದುಕೊಂಡರು. ಸದ್ಯ ತೇಜ ಲಕ್ಷ್ಮೀ ಅವರಿಗೆ 24 ವರ್ಷ ವಯಸ್ಸು. ಮಲಯಾಳಂ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ತೇಜ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ ಮತ್ತು ಆಗಾಗ ಗ್ಲಾಮರಸ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ.
ಇದೀಗ ಚಿನ್ನದ ಬಣ್ಣದ ತುಂಡುಡುಗೆ ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಊರ್ವಶಿ ಅವರ ಮಗಳು ಅಂತಾ ಗೊತ್ತಾದ ಬಳಿಕ ಅನೇಕ ಮಂದಿ ಹುಬ್ಬೇರಿಸಿದ್ದಾರೆ. ಊರ್ವಶಿಯವರ ಮಗಳು ಅವರಷ್ಟೇ ತುಂಬಾ ಮುದ್ದಾಗಿದ್ದಾರೆ. ತುಂಬಾ ಹಾಟ್​ ಆಗಿಯೂ ಕಾಣುತ್ತಿದ್ದಾರೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಇದೇ ವರ್ಷ ಸಿನಿಮಾಗೆ ಎಂಟ್ರಿ ಕೊಟ್ಟಿರುವ ತೇಜ ಲಕ್ಷ್ಮೀ, ಪಾಬ್ಲೋ ಪಾರ್ಟಿ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. 
ಅಂದಹಾಗೆ, ಈ ಹಿಂದೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಊರ್ವಶಿ, ಮನೋಜ್ ಕೆ ಜಯನ್ ಜೊತೆಗಿನ ವಿಚ್ಛೇದನದ ಹಿಂದಿನ ಕಾರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದರು. ನಮ್ಮ ವಿಚ್ಛೇದನಕ್ಕೆ ಮುಖ್ಯವಾದ ಕಾರಣವೆಂದರೆ ಮದ್ಯದ ಚಟ. ಅವರ ಕುಟುಂಬದ ಎಲ್ಲರೂ ಆಲ್ಕೋಹಾಲ್​ ಕುಡಿಯಲು ಒಟ್ಟಿಗೆ ಸೇರುತ್ತಾರೆ. ಆರಂಭದಲ್ಲಿ ನನಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದರು. ಪ್ರತಿದಿನ ನನಗೆ ಮದ್ಯ ಕುಡಿಸುವುದರೊಂದಿಗೆ ನನ್ನನ್ನು ಮದ್ಯ ವ್ಯಸನಿಯಾಗಿಸಿದರು. ಇದು ಅಂತಿಮವಾಗಿ ವಿಚ್ಛೇದನಕ್ಕೂ ಕಾರಣವಾಯಿತು. ಆಗ ನನ್ನ ಮಗಳನ್ನು ನನ್ನಿಂದ ದೂರ ಮಾಡಿದ್ದರು ಎಂದರು.

2013ರಲ್ಲಿ 2ನೇ ಮದುವೆ 

ವಿಚ್ಛೇದನದ ನಂತರ ಊರ್ವಶಿ ಅವರು 2013 ರಲ್ಲಿ ಚೆನ್ನೈ ಮೂಲದ ಕನ್ಸ್ಟ್ರಕ್ಷನ್ ವ್ಯಾಪಾರದ ಮಾಲೀಕ ಶಿವಪ್ರಸಾದ್ ಅವರನ್ನು ವಿವಾಹವಾದರು. ದಂಪತಿಗೆ ಇಶಾನ್ ಪ್ರಜಾಪತಿ ಎಂಬ ಮಗನಿದ್ದಾನೆ. ಮನೋಜ್ ಕೆ ಜಯನ್ ಅವರು 2011 ರಲ್ಲಿ ಆಶಾ ಎಂಬ ಮಹಿಳೆಯನ್ನು ಮರು-ಮದುವೆ ಮಾಡಿಕೊಂಡರು. ಇವರಿಗೆ 2012 ರಲ್ಲಿ ಜನಿಸಿದ ಅಮೃತ್ ಎಂಬ ಮಗನಿದ್ದಾನೆ, (ಏಜೆನ್ಸೀಸ್​).