'ದಿ ಕೇರಳ ಸ್ಟೋರಿ 2' ಚಿತ್ರದ ಪೋಸ್ಟರ್​ 
ಮಾಲಿವುಡ್

ಪ್ರೀತಿ ಹೆಸರಲ್ಲಿ ಹೆಣ್ಣುಮಕ್ಕಳ ಟ್ರ್ಯಾಪ್​! ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳುವ ಚಿತ್ರವಿದು: ನಿರ್ದೇಶಕನ ಕಿಡಿನುಡಿ | The Kerala Story 2

ಪ್ರಮುಖ ಮುಖ್ಯಾಂಶಗಳು

  • ಫೆ.27ಕ್ಕೆ ತೆರೆಗೆ ದಿ ಕೇರಳ ಸ್ಟೋರಿ 2 ತೆರೆಗೆ
  • ಟ್ರೇಲರ್​ ರಿಲೀಸ್​ ಬೆನ್ನಲ್ಲೇ ಕೇರಳದಲ್ಲಿ ವಿವಾದ
  • ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಿಚ್ಚು
  • ಸ್ವತಃ ಚಿತ್ರದ ನಿರ್ದೇಶಕರೇ ಮಾತಿಗಿಳಿದು ಮೂಲಕ ಕಿಡಿ
ವಯನಾಡು: 'ದಿ ಕೇರಳ ಸ್ಟೋರಿ' ನೋಡಿರುವ ಬಹುತೇಕ ಸಿನಿಪ್ರಿಯರಿಗೆ ಇದೇ ಫೆ.27ಕ್ಕೆ ತೆರೆಗೆ ಬರಲು ಸಿದ್ಧವಾಗಿರುವ 'ಕೇರಳ ಸ್ಟೋರಿ 2' ಬಗ್ಗೆ ಖಂಡಿತ ಗೊತ್ತೇ ಇರುತ್ತದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಮೊದಲ ಭಾಗಕ್ಕೆ ತಟ್ಟಿದ್ದ ರಾಜಕೀಯ ಬಿಸಿ ಈಗ ಎರಡನೇ ಭಾಗಕ್ಕೂ ತಟ್ಟಲಾರಂಭಿಸಿದೆ. ಇದೀಗ ದೊಡ್ಡ ಮಟ್ಟದ ವಿವಾದ ಹಾಗೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಮಾಕ್ಯ ನಾರಾಯಣ್​ ಸಿಂಗ್ ನಿರ್ದೇಶನದ 'ದಿ ಕೇರಳ ಸ್ಟೋರಿ 2' ಚಿತ್ರಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ತೀವ್ರ ಆಕ್ಷೇಪ ಹೊರಹಾಕಿದ್ದಾರೆ. ಇದೆಲ್ಲವೂ ಸುಳ್ಳು ಪ್ರಚಾರ ಮತ್ತು ರಾಜ್ಯದ ಜಾತ್ಯತೀತ ಮೌಲ್ಯಗಳಿಗೆ ಬೆದರಿಕೆ ತಂದಿಡುವ ಉದ್ದೇಶ. ನಾಡಿನಲ್ಲಿ ದ್ವೇಷದ ಕಿಚ್ಚನ್ನು ಹೊತ್ತಿಸುವ ಕೆಲಸ ಈ ಚಿತ್ರದ ಮೂಲಕ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಂದೆಡೆ, ಇದೇ ವಿಚಾರಕ್ಕೆ ದನಿಗೂಡಿಸಿರುವ ಬಿಜೆಪಿ ನಾಯಕರು, ಈ ಸಿನಿಮಾ ಸತ್ಯಾಸತ್ಯತೆಯನ್ನು ತೋರಿಸುವ ಪ್ರಯತ್ನದಲ್ಲಿದೆ ಎಂದು ಬಿಡುಗಡೆಗೆ ಬೆಂಬಲಿಸಿದ್ದಾರೆ.
ಇತ್ತೀಚೆಗಷ್ಟೇ ತೆರೆಕಂಡ ಟ್ರೇಲರ್​ ಬೆನ್ನಲ್ಲೇ ಕೇರಳ ರಾಜಕೀಯ ವಲಯದಲ್ಲಿ ಭಾರೀ ವಿವಾದ ಸೃಷ್ಟಿಯಾಗಿದೆ. ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿಗಳು ನಡೆಯುತ್ತಿವೆ. ಈ ಮಧ್ಯೆ, ಸ್ವತಃ ನಿರ್ದೇಶಕರೇ ತಮ್ಮ ಸಿನಿಮಾ ಬಗ್ಗೆ ಮಾತನಾಡಿ, "ಇದು ಸತ್ಯಾಂಶ ಆಧಾರಿತ ಸಿನಿಮಾ. ದೇಶಾದ್ಯಂತ ಇಂತಹ ಘಟನೆಗಳು ನಡೆಯುತ್ತಿವೆ. ಹುಡುಗಿಯರನ್ನು ಬಲೆಗೆ ಬೀಳಿಸಲು, ದೇಶದ ಜನಸಂಖ್ಯೆಯನ್ನು ಬದಲಿಸಲು ಪ್ರೀತಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ" ಎಂದಿದ್ದಾರೆ.
"ಇಂತಹ ಪರಿಸ್ಥಿತಿಯ ಬಗ್ಗೆ ದೇಶಕ್ಕೆ ತಿಳಿಯಬೇಕು. ಪ್ರೀತಿ ಹೆಸರಲ್ಲಿ ಹೆಣ್ಣುಮಕ್ಕಳನ್ನು ಬೆಲೆಗೆ ಕೆಡವಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲೇ, ನಾವು ಈ ಚಿತ್ರವನ್ನು ಮಾಡಿರೋದು. ಈ ಹಿಂದೆ ಮೊದಲ ಭಾಗವನ್ನು ಜನ ಒಪ್ಪಿಕೊಂಡಿದ್ದಾರೆ. ಅಂತೆಯೇ, ಎರಡನೇ ಭಾಗವನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡ್ತಾರೆ ಎಂದು ನಿರೀಕ್ಷಿಸುತ್ತಿದ್ದೇವೆ. ಈ ಚಿತ್ರವು ಸತ್ಯವನ್ನು ಬಿಟ್ಟು ಬೇರೇನೂ ತೋರಿಸುವುದಿಲ್ಲ" ಎಂದು ಒತ್ತಿ ಹೇಳಿದರು,(ಏಜೆನ್ಸೀಸ್).