- ಈ ವರ್ಷ ಮಮಿತಾ ಬೈಜು ನಟನೆಯ ನಾಲ್ಕರ ಪೈಕಿ ಮೂರು ಸಿನಿಮಾಗಳು ಹಿಟ್
- ಇದೊಂದು ವರ್ಷದಲ್ಲೇ 1000 ಕೋಟಿ ರೂ. ಕ್ಲಬ್ ಸೇರಿದ ನಟಿಯ ಸಿನಿಮಾಗಳು
- ಗ್ಲಾಮರಸ್ಗಿಂತಲೂ ಸಿಂಪಲ್ ನಟನೆಯಿಂದಲೇ ಸಿನಿಪ್ರಿಯರ ಹೃದಯ ಗೆದ್ದ ಯುವ ನಟಿ
Mamita Baiju: ಮಾಲಿವುಡ್ನಲ್ಲಿ ಸಣ್ಣ-ಪುಟ್ಟ ಪಾತ್ರಗಳಿಂದ ಕರಿಯರ್ ಆರಂಭಿಸಿದ ಮಮಿತಾ ಬೈಜು ಈಗ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವುದು ಬಹುತೇಕ ಸಿನಿಪ್ರಿಯರಿಗೆ ಗೊತ್ತೇ ಇದೆ. ಈ ವರ್ಷ ಬರೋಬ್ಬರಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರ ದಾಖಲೆಯನ್ನು ಸರಿಗಟ್ಟಿದ ಮಲಯಾಳಂನ ಯುವ ಜನಪ್ರಿಯ ನಟಿ, ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ನೋಡುಗರ ಫೇವರೆಟ್ ಆಗಿಬಿಟ್ಟಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ಮಮಿತಾ ನಟನೆಯ ಇತ್ತೀಚಿನ ಚಿತ್ರಗಳಂತು, ವಿಶೇಷವಾಗಿ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಎರಡೇ ತಿಂಗಳ ಅವಧಿಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕೆಲವೇ ವಾರಗಳ ಹಿಂದೆ ಬಿಡುಗಡೆಗೊಂಡ 'ಬೆತ್ಲೆಹೆಮ್ ಫ್ಯಾಮಿಲಿ ಯೂನಿಟ್' ಚಿತ್ರವು ಇದೀಗ 300 ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನು ನಿರ್ಮಿಸಿ, ಇಂದಿಗೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಯಶಸ್ವಿ ಓಟವನ್ನು ಮುಂದುವರಿಸಿದೆ. ಹೀಗಿರುವಾಗಲೇ, ಮಮಿತಾರ ನಟನೆ ಅನೇಕರ ಗಮನ ಸೆಳೆದಿದೆ.
4ರಲ್ಲಿ ಮೂರು ಮಾತ್ರ ಹಿಟ್
ಈ ವರ್ಷ, ಒಟ್ಟು ನಾಲ್ಕು ಸಿನಿಮಾಗಳನ್ನು ನೀಡಿರುವ ಯುವ ನಟಿಗೆ ಮೂರು ಚಿತ್ರಗಳು ಕೈಹಿಡಿದಿದ್ದು, ಒಂದು ಮಾತ್ರ ಫ್ಲಾಪ್ ಸಾಲಿಗೆ ಸೇರಿದೆ. ಕೇವಲ ಇದೊಂದು ವರ್ಷದಲ್ಲಿ 800 ಕೋಟಿ ರೂ. ಗಳಿಕೆ ಕಂಡಿರುವ ಮಮಿತಾ ನಟನೆಯ ಚಿತ್ರಗಳು, ನಟಿಯ ಹೆಸರಿಗೆ ಹೊಸ ದಾಖಲೆಯನ್ನೂ ಸೇರಿಸಿದೆ. ತಮ್ಮ ಇತ್ತೀಚಿನ ಸಿನಿಮಾ 'ಬೆತ್ಲೆಹೆಮ್ ಫ್ಯಾಮಿಲಿ ಯೂನಿಟ್' ಯಶಸ್ಸಿನಿಂದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಈ ಮಲಯಾಳಿ ಬ್ಯೂಟಿ, ನಟಿಸಿದ ಮೂರು ಬಹುನಿರೀಕ್ಷಿತ ಸಿನಿಮಾಗಳು 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಕಂಡಿದೆ. ಈ ರೀತಿ ಒಂದೇ ವರ್ಷದಲ್ಲಿ ಮೂರು ಸೂಪರ್ಹಿಟ್ ಚಿತ್ರಗಳನ್ನು ಕೊಟ್ಟ ಹಾಗೂ ಕಲೆಕ್ಷನ್ ಕಂಡ ಭಾರತೀಯ ನಟಿಯರ ಪೈಕಿ ಮಮಿತಾ ಮೂರನೇ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸರಳ ನಟನೆಗೆ ಫಿದಾ
ಪ್ರೇಮಲು ಮೂಲಕ ಸೂಪರ್ಹಿಟ್ ನೋಡಿದ ಈ ಚೆಲುವೆ, ಇಲ್ಲಿಯವರೆಗೆ ಅಭಿನಯಿಸಿರುವ ಅಷ್ಟು ಸಿನಿಮಾಗಳಲ್ಲಿಯೂ ಗ್ಲಾಮರಸ್ಗಿಂತಲೂ ತಮ್ಮ ಸಿಂಪಲ್ ನಟನೆಯಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಮತ್ತು ವ್ಯಾಪಕ ಮೆಚ್ಚುಗೆ ಗಳಿಸಿ ಎಲ್ಲರ ಹೃದಯ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬ್ಯೂಟಿ ಬದಲಿಗೆ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಮಮಿತಾ ಈಗ ಭಾರತದ ಟಾಪ್ ಟ್ರೆಂಡಿಂಗ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.
ಬಾಲಿವುಡ್ ನಟಿಯರನ್ನೇ ಹಿಂದಿಕ್ಕಿದ ಚೆಲುವೆ
ಇದಕ್ಕೂ ಮುನ್ನ ಬಾಲಿವುಡ್ ಸ್ಟಾರ್ ಹೀರೋಯಿನ್ಗಳಾದ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಹೆಸರಿನಲ್ಲಿ ಮಾತ್ರ ಈ ಅಪರೂಪದ ಸಿನಿ ದಾಖಲೆಯಿತ್ತು. ಆದರೀಗ, ಈ ವಿಶೇಷ ರೆಕಾರ್ಡ್ ಮಲಯಾಳಂನ ಯುವ ನಟಿಯ ಪಾಲಾಗಿರುವುದು ಸದ್ಯ ಭಾರತೀಯ ಚಿತ್ರೋದ್ಯಮದ ಹಲವರ ಹುಬ್ಬೇರಿಸಿದೆ. ಮಮಿತಾ ಅವರ ಮೂರೂ ಚಿತ್ರಗಳು ಕೇವಲ 23 ದಿನಗಳಲ್ಲಿ ಥಿಯೇಟರ್‌ಗೆ ಲಗ್ಗೆಯಿಟ್ಟಿವೆ. ಜುಲೈ 23ರಂದು ಬಿಡುಗಡೆಯಾದ ಮೊದಲ ಚಿತ್ರ 'ಜನ ನಾಯಗನ್', ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 324.38 ಕೋಟಿ ಕಲೆಕ್ಷನ್ ಮಾಡಿತು. ನಂತರ 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರವು 210 ಕೋಟಿ ಗಳಿಸಿತು. ಅದಾದ ಬಳಿಕ ತೆರೆಕಂಡ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ 313.92* ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಮಮಿತಾಗೆ ಈ ಹ್ಯಾಟ್ರಿಕ್ ಸಾಧನೆ ತಂದುಕೊಟ್ಟಿದೆ.
1000 ಕೋಟಿ ಕ್ಲಬ್
ಈ ಚಿತ್ರಗಳನ್ನು ಹೊರತುಪಡಿಸಿ ತಮಿಳು ನಟ ಧನುಷ್ ಜತೆ ಅಭಿನಯಿಸಿದ "ಕಾರ" ಚಿತ್ರವು, ಅಂದುಕೊಂಡಂತೆ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಯಿತು. ಅಲ್ಲಿಗೆ, ಕೋವಿಡ್ ನಂತರದಲ್ಲಿ ಯುವ ನಟಿಯ ಒಟ್ಟು ಗಳಿಕೆಯು ಇದೀಗ 1000 ಕೋಟಿ ಕ್ಲಬ್ ಸೇರಿದೆ. ಅದು ಕೇವಲ 6 ಸಿನಿಮಾಗಳಲ್ಲಿ ಎಂಬುದು ವಿಶೇಷ. 2024ರಿಂದ ಇಲ್ಲಿಯವರೆಗೆ ರಿಲೀಸ್ ಆದ ಚಿತ್ರಗಳಿಂದ 1147.37 ಕೋಟಿ ರೂ. ಕಲೆಕ್ಷನ್ ಆಗಿದೆ ಎಂಬುದು ಗಮನಾರ್ಹ.
ಯಾವುದು ಆ 6 ಸಿನಿಮಾ?
1. ಜನ ನಾಯಗನ್ - 324.53 ಕೋಟಿ ರೂ. (ಜಾಗತಿಕ)
2. ವಿಶ್ವನಾಥ್ ಅಂಡ್ ಸನ್ಸ್ - 209.34 ಕೋಟಿ ರೂ. (ಜಾಗತಿಕ)
3. ಬೆತ್ಲೆಹೆಮ್ ಕುಟುಂಬ ಯೂನಿಟ್ - 313.92* ಕೋಟಿ ರೂ. (ಜಾಗತಿಕ 28 ದಿನಗಳು)
4. ಪ್ರೇಮಲು - 131.50 ಕೋಟಿ ರೂ. (ಜಾಗತಿಕ)
5. ಡ್ಯೂಡ್ - 114.30 ಕೋಟಿ ರೂ. (ಜಾಗತಿಕ)
6. ಕಾರಾ - 53.78 ಕೋಟಿ ರೂ. (ಜಾಗತಿಕ)