ನಟಿ ಮಮಿತಾ ಬೈಜು 
ಮಾಲಿವುಡ್

ಮಮಿತಾ ಬಿಟ್ರೆ ಇನ್ಯಾರೂ ಬೇಡ! ಮದುವೆ ಆದ್ರೆ ಅವರನ್ನೇ ಆಗೋದು... ಫೇಸ್​ಬುಕ್​ನಲ್ಲಿ ವರ್ಕಿ ನಿವೇದನೆ | Mamitha Baiju

ಪ್ರಮುಖ ಮುಖ್ಯಾಂಶಗಳು

  • ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಯಶಸ್ಸಿನ ಉತ್ತುಂಗದಲ್ಲಿ ನಟಿ ಮಮಿತಾ ಬೈಜು
  • ಫೇಸ್​ಬುಕ್​ ಮುಖಾಂತರ ಮಮಿತಾರನ್ನು ಮದುವೆಯಾಗೋ ಆಸೆ ವ್ಯಕ್ತಪಡಿಸಿದ ವ್ಯಕ್ತಿ
  • ಮಮಿತಾ ನಟನೆಯ ಸಿನಿಮಾವನ್ನು ಮೂರನೇ ಬಾರಿ ನೋಡ್ತಿದ್ದೇನೆ, ಐ ಲವ್​ಯೂ ಎಂದು ಹೇಳಿಕೆ
ಕೊಚ್ಚಿ: ತಮಿಳು, ಮಲಯಾಳಂ ಚಿತ್ರರಂಗದ ಯುವ ಜನಪ್ರಿಯ ನಟಿ ಮಮಿತಾ ಬೈಜು (Mamitha Baiju) ಸದ್ಯ ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಮಮಿತಾ ನಟನೆಯ ಇತ್ತೀಚಿನ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುತ್ತಿದ್ದರೂ, ಆರೋಗ್ಯ ಸಮಸ್ಯೆಯಿಂದಾಗಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ, ವ್ಯಕ್ತಿಯೊಬ್ಬ ನಟಿಯನ್ನು ಮದುವೆ ಆಗುವ ಆಸೆಯನ್ನು ಬಹಿರಂಗವಾಗಿ ಫೇಸ್​ಬುಕ್​ ಮುಖಾಂತರ ಕೇಳಿರುವುದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.
‘ಆರತ್ತು ಅಣ್ಣನ್’ ಎಂಬ ಹೆಸರಿನ ಸಂತೋಷ್ ವರ್ಕಿ, ನನಗೆ ನಟಿ ಮಮಿತಾ ಬೈಜು ಅವರನ್ನು ಮದುವೆಯಾಗುವ ಆಸೆಯಿದೆ. ಇತ್ತೀಚೆಗೆ ರಿಲೀಸ್​ ಆದ ಅವರ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಸಿನಿಮಾವನ್ನು ಮೂರನೇ ಬಾರಿ ನೋಡಿದೆ. ನಮ್ಮಿಬ್ಬರ ನಡುವೆ ವಯಸ್ಸಿನ ವ್ಯತ್ಯಾಸವಿದ್ದರೂ ನಾನು ಮಮಿತಾ ಅವರನ್ನೇ ಇಷ್ಟಪಟ್ಟಿದ್ದೇನೆ. ನನ್ನ ಜೀವನದಲ್ಲಿ ಅವರನ್ನು ಬಿಟ್ಟರೆ ಇನ್ಯಾವ ಹುಡುಗಿಯೂ ಇರುವುದಿಲ್ಲ. ಐ ಲವ್​ ಯೂ ಸೋ ಮಚ್​ ಎಂದು ಫೇಸ್​ಬುಕ್​ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದೇನೂ ಹೊಸದಲ್ಲ!

ಈ ಹಿಂದೆಯೂ ಸಂತೋಷ್ ವರ್ಕಿ ಇದೇ ರೀತಿ ಇತರೆ ನಟಿಯರಿಗೆ ಮಾಡಿದ್ದಾನೆ. ಬಹುಭಾಷಾ ತಾರೆ ನಿತ್ಯಾ ಮೆನನ್ ಅವರಿಗೂ ಹೀಗೆಯೇ ನಿಮ್ಮನ್ನು ಮದುವೆಯಾಗುವ ಆಸೆಯಿದೆ ಎಂದು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದ. ಈ ಬಗ್ಗೆ ಸಂದರ್ಶನವೊಂದರಲ್ಲಿ ನಿತ್ಯಾ ಅವರು ಸಂತೋಷ್ ತನಗೆ ಹಲವು ವರ್ಷಗಳಿಂದ ಕಿರುಕುಳ ನೀಡುತ್ತಿದ್ದ. ಈತನ ವರ್ತನೆಯಿಂದ ನನ್ನ ಪೋಷಕರಿಗೆ ನೋವಾಗಿತ್ತು ಎಂದು ಹೇಳಿಕೊಂಡಿದ್ದಾಗಿ ಕೌಮುಡಿ ಕೇರಳ ಮತ್ತು ಟೈಮ್ಸ್​ ಕೇರಳ ವರದಿ ಮಾಡಿದೆ.
ಸುಮರು ಐದಾರು ವರ್ಷಗಳಿಂದ ತನ್ನನ್ನು ಫಾಲೋ ಮಾಡಿದ್ದ. ಸಂತೋಷ್ ಹೆಸರಿನಲ್ಲಿ ಬಂದ ಸುಮಾರು 30 ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ನಟಿ ಓಪನ್​ ಆಗಿ ಹೇಳಿದ್ದರು ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).