- ಟಾಲಿವುಡ್‌ನಲ್ಲಿ ಮಾಲಿವುಡ್ ಬ್ಯೂಟಿಗಳು ಶೈನ್
- ಈ ವರ್ಷವೂ ಹೊಸ ಕೇರಳದ ಚೆಲುವೆಯರ ಎಂಟ್ರಿ
- 2025ರಲ್ಲಿ ತೆಲುಗು ಅಂಗಳದಲ್ಲಿ ಯಶಸ್ಸು ಕಂಡ ನಟಿಯರು ಯಾರೆಲ್ಲ? ಇಲ್ಲಿದೆ ಪಟ್ಟಿ
ತೆಲಂಗಾಣ: ಈ ವರ್ಷ ಹಲವು ಚಿತ್ರರಂಗದ ಹಲವಾರು ಭಾಷೆಯ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಾತ್ರವಲ್ಲದೇ, ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ. ಕೆಲವು ಚಿತ್ರಮಂದಿರಗಳಲ್ಲಿ ಹಾಗೂ ಒಟಿಟಿ ಎರಡಲ್ಲೂ ಯಶಸ್ಸನ್ನು ಕಂಡಿವೆ. ಇದರಲ್ಲಿ, ಹೊಸಬರ ತಂಡಗಳ ಚಿತ್ರಗಳು ಕಥಾಹಂದರ ಮತ್ತು ನಟ-ನಟಿಮಣಿಯರಿಂದ ಗಮನ ಸೆಳೆದಿವೆ. ಅದರಲ್ಲೂ, ಬಾಲಿವುಡ್ ಬಳಿಕ, ಟಾಲಿವುಡ್ ಚಿತ್ರೋದ್ಯಮ ಮಾಲಿವುಡ್ ಹೀರೋಯಿನ್ಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದೆ.
ಪ್ರತಿ ವರ್ಷದಂತೆ, ಈ ವರ್ಷವೂ ಸ್ಯಾಂಡಲ್ವುಡ್ ಹಾಗೂ ಇತರೆ ಚಿತ್ರರಂಗದ ನಟಿಯರನ್ನು ಕರೆಸಿಕೊಂಡಿರುವ ಟಾಲಿವುಡ್, ಮಲಯಾಳಂ ಯುವ ನಟಿಯರಿಗೆ ಹೆಚ್ಚೆಚ್ಚು ಅವಕಾಶ ನೀಡಿತು. ಅದರಲ್ಲಿ, ಕೆಲವರಿಗೆ ಅದ್ಭುತ ಯಶಸ್ಸು, ಜನಪ್ರಿಯತೆ ಸಿಕ್ಕಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನ ಬೇಡ. ತೆಲುಗು ಅಂಗಳದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲು ಬಂದ ಬೆಡಗಿಯರ ಪೈಕಿ ಸಕಸ್ಸ್ಫುಲ್ ಆದ ನಾಯಕಿಯರು ಯಾರೆಲ್ಲ? ಎಂಬುದರ ಪಟ್ಟಿ ಹೀಗಿದೆ ಗಮನಿಸಿ.
ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ಟಾಲಿವುಡ್ ಬಾಗಿಲು ತಟ್ಟಿದ ಮಾಲಿವುಡ್ ನಟಿಯರ ಪೈಕಿ ಇವಾನಾ ಮೊದಲು. ತಮಿಳು ನಟ ಪ್ರದೀಪ್ ರಂಗನಾಥನ್ ಅಭಿನಯದ 'ಲವ್ ಟುಡೇ' ಮೂಲಕ ತಮಿಳು ಪ್ರೇಕ್ಷಕರನ್ನು ತಲುಪಿದ ನಟಿ, ತೆಲುಗು ಡಬ್ ಚಿತ್ರದಲ್ಲಿ ಟಾಲಿವುಡ್ ಅಭಿಮಾನಿಗಳಿಗೆ ಪರಿಚಯವಾದರು. ಈ ಚಿತ್ರದ ಸಕಸ್ಸ್ ಬೆನ್ನಲ್ಲೇ ಅವಕಾಶಗಳನ್ನು ಹೆಚ್ಚಿಸಿಕೊಂಡ ಅವರು. ನಟ ವಿಷ್ಣು ಅವರ 'ಸಿಂಗಲ್' ಚಿತ್ರದೊಂದಿಗೆ ತೆಲುಗಿನಲ್ಲಿ ಪಾದಾರ್ಪಣೆ ಮಾಡಿ, ಸೂಪರ್ಹಿಟ್ ಕಂಡರು.
ಮಾಳವಿಕಾ ಮನೋಜ್
'ಜೋ' ಎಂಬ ಸರಳ, ಸುಂದರ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ಮಲಯಾಳಂ ನಟಿ ಮಾಳವಿಕಾ ಮನೋಜ್, ಸುಹಾಸ್ ಅವರ 'ಓ ಭಾಮಾ ಅಯ್ಯೋರಾಮ' ಚಿತ್ರದೊಂದಿಗೆ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು. ಆದರೆ, ಬ್ಯಾಡ್ ಲಕ್ ವಿಫಲರಾದರು. ಈ ಚಿತ್ರದ ಸೋಲಿನ ಬಳಿಕ, ಅವರು ಮತ್ತೆ ಕಾಲಿವುಡ್ ಮತ್ತು ಮಾಲಿವುಡ್ ಕಡೆ ಮುಖಮಾಡಿದರು.
ದರ್ಶನಾ ರಾಜೇಂದ್ರನ್
ದರ್ಶನಾ ಎಂಬ ಹೆಸರಿನಿಂದಲೇ ಮಲಯಾಳಿ ಯುವಕರ ಹೃದಯ ಕದ್ದ ಚೆಲುವೆ ದರ್ಶನಾ ರಾಜೇಂದ್ರನ್. 'ಪರದಾ' ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಕ್ರೇಜ್ ಸೃಷ್ಟಿಸಲು ಪ್ರಯತ್ನಿಸಿದ ಈ ಬ್ಯೂಟಿ, ಸಕ್ಸಸ್ಫುಲ್ ಆಗುವಲ್ಲಿ ಎಡವಿದರು. ಇಟ್ಟುಕೊಂಡಿದ್ದ ನಿರೀಕ್ಷೆಗಳು ಕಡೆಗೂ ಹುಸಿಯಾದವು.
ಅನಸ್ವರ ರಾಜನ್
ಈ ವರ್ಷ ಟಾಲಿವುಡ್‌ಗೆ ಬಂದಿಳಿದ ಮಲಯಾಳಂ ನಟಿ ಅನಸ್ವರ ರಾಜನ್, ಡಿ.25ರಂದು ರಿಲೀಸ್ ಆದ 'ಚಾಂಪಿಯನ್' ಚಿತ್ರದ ತೆಲುಗು ಮಂದಿಗೆ ಪರಿಚಯವಾಗಿದ್ದಾರೆ. ಇದೊಂದು ಸಿನಿಮಾ ಅವರಿಗೆ ಟಾಲಿವುಡ್‌ನಲ್ಲಿ ಹೆಚ್ಚಿನ ಅವಕಾಶಗಳನ್ನು ತಂದುಕೊಡುವುದು ಖಚಿತ ಎಂದೇ ಊಹಿಸಲಾಗಿದೆ. ಯುವ ನಾಯಕರ ಚಿತ್ರಗಳಿಗೆ ಇವರೇ ಉತ್ತಮ ಆಯ್ಕೆ ಎಂಬ ಮಾತುಗಳು ಕೂಡ ಕೇಳಿಬಂದಿವೆ.
ಮಾಳವಿಕಾ ಮೋಹನನ್
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೇರಳದ ಮತ್ತೊಬ್ಬ ಬ್ಯೂಟಿ ಮಾಳವಿಕಾ ಮೋಹನನ್ ಕೂಡ ಈ ವರ್ಷವೇ 'ರಾಜಾ ಸಾಬ್' ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದರು. ಆದರೆ, ಚಿತ್ರವನ್ನು ಮುಂದಿನ ವರ್ಷಕ್ಕೆ ಮುಂದೂಡಿರುವ ಕಾರಣ, ಅವರ ಎಂಟ್ರಿಗೆ ವಿಳಂಬ ಎದುರಾಗಿದೆ. ಇವರ ಅದೃಷ್ಟ ಒಲಿಯಲಿದೆಯೇ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಈ ನಾಲ್ವರು ನಟಿಯರಲ್ಲಿ ಇವಾನಾ ಮತ್ತು ಅನಸ್ವರ ಹಿಟ್ ಕಂಡಿದ್ದರೆ, ಮಾಳವಿಕಾ ಮತ್ತು ದರ್ಶನಾ ಯಶಸ್ಸು ನೋಡಿಲ್ಲ. ಆದರೆ, ಟಾಲಿವುಡ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಹಾಗೂ ಹೃದಯ ಕದಿಯುವಲ್ಲಿ ಮೇಲುಗೈ ಸಾಧಿಸಿದ್ದಾರೆ,(ಏಜೆನ್ಸೀಸ್).