'ತನ್ಮತ್ರಾ' ಚಿತ್ರದ ಒಂದು ಸೀನ್​ 
ಮಾಲಿವುಡ್

ಆ ಸೀನ್​ಗೆ ಮೀರಾ ಹಾಕಿದ್ದು 2 ಕಂಡೀಷನ್​! ಮೋಹನ್​ ಲಾಲ್​ ಸಿನಿಮಾ ನಟಿ ಬಗ್ಗೆ ನಿರ್ದೇಶಕರ ಓಪನ್​ ಟಾಕ್​

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ನಟ ಮೋಹನ್​ ಲಾಲ್​ ಮತ್ತು ಮೀರಾ ಅಭಿನಯದ 'ತನ್ಮತ್ರಾ' ಸಿನಿಮಾ
  • ಈ ಚಿತ್ರದಲ್ಲಿದ್ದ ಬೆಡ್​ರೂಮ್​ ಸೀನ್ ಬಗ್ಗೆ ನಿರ್ದೇಶಕರ ಮಾತು ​
  • ಶೂಟಿಂಗ್​ ಒಪ್ಪಿಕೊಂಡ ಮೀರಾ ನಿರ್ದೇಶಕರ ಮುಂದಿಟ್ಟಿದ್ದು ಎರಡು ಬೇಡಿಕೆ
ಕೇರಳ: ತಮ್ಮ ಸಿನಿಮಾ ಸುದ್ದಿಗಳಿಗಿಂತ ಮದುವೆ ಮತ್ತು ವಿಚ್ಛೇದನದ ವಿಷಯಗಳಿಂದಲೇ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದ ಮಲಯಾಳಂ ನಟಿ ಮೀರಾ ವಾಸುದೇವ್, ಒಂದಷ್ಟು ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ ಚೆಲುವೆ. ಒಂದಲ್ಲ, ಎರಡಲ್ಲ ಒಟ್ಟು ಮೂರು ಮದುವೆಯಾದ ಈ ಸ್ಟಾರ್​ ಬ್ಯೂಟಿ, ಮೂವರಿಂದಲೂ ಡಿವೋರ್ಸ್​ ಪಡೆದು ಸದ್ಯ ಸಿಂಗಲ್ ಆಗಿದ್ದಾರೆ. ಕಳೆದ ವರ್ಷ ನಡೆದ ಸಂದರ್ಶನವೊಂದರಲ್ಲಿ ಅವರು, ಮೋಹನ್​ ಲಾಲ್ ಜೊತೆ ನಟಿಸಿದ ಚಿತ್ರದ ಸೀನ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆದರೀಗ, ಆ ವಿಷಯ ಸಿನಿಮಾ ನಿರ್ದೇಶಕರಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ​
ಮದುವೆ ಮತ್ತು ಡಿವೋರ್ಸ್​ ವಿವಾದಕ್ಕೆ ಸಿಲುಕಿ, ಟ್ರೋಲಿಗರಿಗೆ ಆಹಾರವಾಗಿರುವ ನಟಿ ಮೀರಾ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಪೋಸ್ಟ್‌ಗಳು ಹರಿದಾಡುತ್ತಿರುತ್ತವೆ. ಕೆಲವೊಂದಕ್ಕೆ ನಟಿ ಖಡಕ್ ಉತ್ತರ ನೀಡಿದ್ದೇ ಆದರೂ ಅಷ್ಟಾಗಿ ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾಗುತ್ತಾರೆ. ಮಾಲಿವುಡ್​ ಹಿರಿಯ ನಟ ಮೋಹನ್​ ಲಾಲ್ ಮತ್ತು ನಟಿ ಮೀರಾ ಮುಖ್ಯಭೂಮಿಕೆಯಲ್ಲಿ ಅಭಿನಯದ ​'ತನ್ಮಾತ್ರ' ಕುರಿತು ಚಿತ್ರದ ನಿರ್ದೇಶಕ ಅಲೆಪ್ಪಿ ಆಶ್ರಫ್​ ಮಾತನಾಡಿದ್ದಾರೆ.
ಮೀರಾ ಅವರ ಮೂರನೇ ಮದುವೆಯಿಂದಾಗಿ ಹಲವು ಟ್ರೋಲ್‌ಗಳನ್ನು ಎದುರಿಸಿರಬಹುದು. ಅವರು ಇನ್ನೊಂದು ಮದುವೆಯಾದರೂ ಯಾರೂಬ್ಬರು ಅವರನ್ನು ದೂಷಿಸಬಾರದು. ಅವರ ದೃಷ್ಟಿಕೋನವೆಂದರೆ ಅನುಭವಗಳಿಂದ ಕಲಿಯುವುದು. ಇದು ಅವರ ಜೀವನ ಮತ್ತು ಅದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅವರು ವಿದ್ಯಾವಂತ ಮಹಿಳೆ. ಮುಖ್ಯವಾಗಿ, ಮನೋವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ ಎಂಬುದು ನಿಮಗೆ ಗೊತ್ತಿರಲಿ ಎಂದರು.
ತನ್ಮಾತ್ರ ಚಿತ್ರದಲ್ಲಿ, ಮೋಹನ್ ಲಾಲ್ ಅವರ ಪಾತ್ರ ರಮೇಶಣ್ ನಾಯರ್. ಅವರ ಪತ್ನಿ ಲೇಖಾ ಅವರೊಂದಿಗೆ ದೈಹಿಕ ಸಂಭೋಗ ನಡೆಸುವ ಬೆಡ್​ರೂಮ್​ ದೃಶ್ಯವಿತ್ತು. ಇದನ್ನು ನಾವು ಭಿನ್ನವಾಗಿ ಅಂದರೆ, ಅದರ ಪರಿಪೂರ್ಣತೆಗಾಗಿ ಯಾವುದೇ ಅಡೆತಡೆಯಿಲ್ಲದೆ ಚಿತ್ರೀಕರಿಸಲು ನಿರ್ಧರಿಸದ್ದೆವು. ಲೇಖಾ ಪಾತ್ರಕ್ಕಾಗಿ ಮಲಯಾಳಂನ ಕೆಲ ಹೀರೋಯಿನ್​ಗಳನ್ನು ಸಂಪರ್ಕಿಸಿದೆವು. ಆದರೆ, ಈ ದೃಶ್ಯದ ಬಗ್ಗೆ ಪೂರ್ತಿಯಾಗಿ ಕೇಳಿದಾಗ ಅವರೆಲ್ಲರೂ ಆಗಲ್ಲ ಎಂದು ಹಿಂದೆ ಸರಿದರು.
ಅದೇ ಮೀರಾ ಅವರಿಗೆ ಕಥೆ ವಿವರಿಸಿದಾಗ, ಅವರು ನಾನು ನಟಿಸುತ್ತೇನೆ. ಆದರೆ, ಎರಡು ಕಂಡೀಷನ್​ ಎಂದರು. ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ತುಂಬ ಜನರು ನಮ್ಮ ಸುತ್ತಮುತ್ತ ಇರಬಾರದು ಮತ್ತು ನನ್ನ ಖಾಸಗಿ ಭಾಗಗಳನ್ನು ಸಂಪೂರ್ಣವಾಗಿ ಮುಚ್ಚಿರಬೇಕು ಎಂದು ಹೇಳಿದ್ದರು. ನಾವು ಅವರ ಭರವಸೆಯನ್ನು ಉಳಿಸಿಕೊಂಡ ಬಗ್ಗೆ ಮೀರಾ ಕೆಲವು ಸಂದರ್ಶನಗಳಲ್ಲಿ ಹೇಳಿದ್ದಾರೆ ಎಂದರು.
ಹಳೆಯ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಮೀರಾ, ಚಿತ್ರತಂಡ ನನಗೆ ನೀಡಿದ್ದ ಭರವಸೆಯನ್ನು ಸಂಪೂರ್ಣವಾಗಿ ಉಳಿಸಿಕೊಂಡಿತು. ಸಹಾಯಕ ನಿರ್ದೇಶಕ ಬ್ಲೆಸ್ಸಿ, ಕ್ಯಾಮೆರಾಮನ್ ಮತ್ತು ಫೋಕಸ್ ಪುಲ್ಲರ್ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಎಲ್ಲರೂ ನನ್ನನ್ನು ಚೆನ್ನಾಗಿ​ ಮತ್ತು ಗೌರವಾನ್ವಿತವಾಗಿ ನೋಡಿಕೊಂಡರು. ಮೋಹನ್​ ಲಾಲ್ ಸರ್​ ನನಗೆ ತುಂಬ ಕಂಫರ್ಟ್​ ಮಾಡಿಕೊಟ್ಟರು ಎಂದು ಹೇಳಿದ್ದಾರೆ,(ಏಜೆನ್ಸೀಸ್).