ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್ ನಿವಾಸಕ್ಕೆ ಮಮ್ಮುಟಿ ಭೇಟಿ 
ಮಾಲಿವುಡ್

ಬಿಜೆಪಿ ನಾಯಕನ ಮನೆಗೆ ನಟ ಮಮ್ಮುಟ್ಟಿ ವಿಸಿಟ್​​; ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ,CPIM ಹೇಳಿದ್ದಿಷ್ಟು

  • ಬಿಜೆಪಿ ರಾಜ್ಯ ಉಪಾಧ್ಯಕ್ಷರ ನಿವಾಸಕ್ಕೆ ಭೇಟಿ ಕೊಟ್ಟ ನಟ ಮಮ್ಮುಟಿ.

  • ರಾಜಕೀಯ ಮುಖಂಡರ ಜತೆ ಒಡನಾಟ ಇಟ್ಟುಕೊಳ್ಳುವುದು ಮಮ್ಮುಟಿಯಂತಹ ನಟರಿಗೆ ತಕ್ಕುದಾದ ನಡೆಯಲ್ಲ ಎಂದು ಟೀಕೆ.

  • ಸ್ನೇಹವನ್ನು ರಾಜಕೀಯಕ್ಕೆ ತರಬೇಡಿ ಎಂದ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್.

  • ಸೈಬರ್ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದ ಸಿಪಿಐಎಂ ನಾಯಕರು.

ತಿರುವನಂತಪುರಂ: ಮಲಯಾಳಂ ನಟ ಮಮ್ಮುಟ್ಟಿ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್ ಅವರ ಮಗಳ ಮದುವೆಯ ಬಳಿಕ ಅವರ ಮನೆಗೆ ಭೇಟಿ ನೀಡಿ ನವದಂಪತಿಗಳನ್ನು ಹಾರೈಸಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಟೀಕೆಗೆ ಕಾರಣವಾಗಿದೆ.

ಬಿ ಗೋಪಾಲಕೃಷ್ಣನ್​​​ ಅವರ ಮಗಳ ಮದುವೆಯು ನ.1ರಂದು ಗುರುವಾಯೂರುನಲ್ಲಿ ನಡೆದಿತ್ತು. ಈ ವೇಳೆ ಮಮ್ಮುಟ್ಟಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ ಭಾನುವಾರ ಸಂಜೆ ತ್ರಿಶೂರ್​ನಲ್ಲಿರುವ ಗೋಪಾಲಕೃಷ್ಣನ್ ಅವರ ಮನೆಗೆ ತೆರಳಿ ನವದಂಪತಿಗಳನ್ನು ಹಾರೈಸಿದರು. ಇದೇ ವಿಡಿಯೋಗಳು ಎಕ್ಸ್​ ಸೇರಿದಂತೆ ಇತರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಕೆಲವರಿಂದ ಭಾರೀ ಟೀಕೆ

ಎಡಪಂಥೀಯ ಒಲವುಳ್ಳ ಕೆಲವು ಎಕ್ಸ್​ ಬಳಕೆದಾರರ, ವಿವಾದಿತ ಸಿದ್ಧಾಂತ ಹೊಂದಿರುವ ನಾಯಕರೊಂದಿಗೆ ನಟ ಇಂತಹ ನಂಟು ಹೊಂದಿರುವುದು ಸರಿಯಲ್ಲ ಎಂದು ಕೆಲವುರ ಹೇಳಿದ್ದರೆ, ಇನ್ನೂ ಕೆಲವರು ಮಮ್ಮುಟ್ಟಿ ಎಲ್ಲರ ನಟ ಎಂದು ಗುರುತಿಸಿಕೊಂಡಿದ್ದರೂ ಇಂತಹ ರಾಜಕೀಯ ಮುಖಂಡರ ಜತೆ ಒಡನಾಟ ಇಟ್ಟುಕೊಳ್ಳುವುದು ಎಷ್ಟು ಸರಿ ಎಂದು ಟೀಕೆ ಮಾಡಿದ್ದಾರೆ

ಭೂಕುಸಿತ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ತನ್ನೊಂದಿಗೆ ಬರಲು ಯತ್ನಿಸಿದ ಸಿಪಿಎಂ ಸ್ಥಳೀಯ ನಾಯಕನೊಬ್ಬನನ್ನು ಮಮ್ಮುಟ್ಟಿ ಹಿಂದೊಮ್ಮೆ ದೂರವಿಟ್ಟಿದ್ದ ಘಟನೆಯನ್ನು ಈ ಸಂದರ್ಭದಲ್ಲಿ ಕೆಲವರು ಉಲ್ಲೇಖಿಸಿ ದ್ವಂದ್ವ ನೀತಿ ಎಂದು ಟೀಕಿಸಿದ್ದಾರೆ.

ಗೋಪಾಲಕೃಷ್ಣನ್ ಏನಂದ್ರು?

'ಸ್ನೇಹ ಎನ್ನುವುದು ಜಾತಿ, ಮತ, ಭಾಷೆ, ಬಣ್ಣ ಹಾಗೂ ರಾಜಕೀಯ ಮೀರಿದ್ದು. ಪಿಣರಾಹಿ ವಿಜಯನ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ದಿಗ್ಗಜರು ಮದುವೆಗೆ ಬಂದಿದ್ದರು. ಕೌಟುಂಬಿಕ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಬಳೆಯುವುದು ಸರಿಯಲ್ಲ. ವೈಯಕ್ತಿಕ ಸಂಬಂಧಗಳನ್ನು ರಾಜಕೀಯವಾಗಿ ನೋಡುವುದು ತಪ್ಪು' ಎಂದು ಬಿಜೆಪಿ ನಾಯಕ ಗೋಪಾಲಕೃಷ್ಣನ್ ಕಿಡಿಕಾರಿದ್ದಾರೆ.

ಸಿಪಿಐಎಂ ಸ್ಪಷ್ಟನೆ

ಮಮ್ಮೂಟಿ ವಿರುದ್ಧದ ಸೈಬರ್ ದಾಳಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಮಮ್ಮುಟ್ಟಿಯನ್ನು ಕೇರಳದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು. ಆ ನಟ ಎಡಪಂಥೀಯರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಅದನ್ನು ಸಿಪಿಐ(ಎಂ) ಆ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುತ್ತದೆ ಎಂದು ಹಿರಿಯ ಸಿಪಿಐ(ಎಂ) ಮುಖಂಡ ಥಾಮಸ್ ಐಸಾಕ್ ಹೇಳಿದ್ದಾರೆ.

ಶುಕ್ರವಾರದಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಕೂಡ ಮಮ್ಮೂಟಿ ವಿರುದ್ಧದ ಆನ್‌ಲೈನ್ ದಾಳಿಯನ್ನು ತಳ್ಳಿಹಾಕಿದ್ದು, ಹಿರಿಯ ನಟರನ್ನು ಟೀಕಿಸುವ ಯಾವುದೇ ಆಸಕ್ತಿಯನ್ನು ನಾವು ಇಟ್ಟುಕೊಂಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಮಮ್ಮುಟಿ ಕೇರಳದ ಆಸ್ತಿ, ಅವರನ್ನು ರಾಜಕೀಯ ಗಡಿಗಳಿಗೆ ಸೀಮಿತಗೊಳಿಸಬಾರದು ಎಂದು ದೊಡ್ಡ ಮಟ್ಟದ ಅಭಿಮಾನಿಗಳು ಹಾಗೂ ಸಾರ್ವಜನಿಕರು ನಟನ ಪರವಾಗಿ ನಿಂತಿದ್ದಾರೆ, (ಏಜೆನ್ಸೀಸ್).