Kathanar – The Wild Sorcerer Teaser 
ಮಾಲಿವುಡ್

ಅನುಷ್ಕಾ ಶೆಟ್ಟಿ ಫ್ಯಾನ್ಸ್​ಗೆ ಗುಡ್​ನ್ಯೂಸ್;`ಕಥನಾರ್' ಟೀಸರ್ ರಿಲೀಸ್​, ಸಿನಿಮಾ ಬಿಡುಗಡೆ ಯಾವಾಗ?..Kathanar

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಅನುಷ್ಕಾ ಶೆಟ್ಟಿ ನಟನೆಯ ಕಥನಾರ್​ ಸಿನಿಮಾ ಬಿಡುಗಡೆ
  • ಮಾ.31ರಂದು ಕಥನಾರ್​ ಟೀಸರ್​ ರಿಲೀಸ್, ಕುತೂಹಲ ಕೆರಳಿಸಿದ ಕಥಾ ಹಂದರ
  • ಕಥನಾರ್ ಸಿನಿಮಾ ಮೂಲಕ ಮಲಯಾಳ ಚಿತ್ರರಂಗಕ್ಕೆ ಕಾಲಿಟ್ಟ ಅನುಷ್ಕಾ ಶೆಟ್ಟಿ
ಹೌದು, ಘಾಟಿ ಸಿನಿಮಾದ ನಂತರ ಸೋಶಿಯಲ್​ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದ ಅನುಷ್ಕಾ ಶೆಟ್ಟಿಯವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇತ್ತೀಚೆಗೆ. ಬೆಂಗಳೂರಿನ ಪ್ರಸಿದ್ಧ ಉದ್ಯಮಿ ಜೊತೆ ಅರೇಂಜ್ಡ್​ ಮ್ಯಾರೇಜ್​ ಎಂದೆಲ್ಲ ಸುದ್ದಿ ಹರಡಿತ್ತು. ಅವರಿಬ್ಬರು ಈವೆಂಟ್​ವೊಂದರಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಸದ್ಯ ಮದುವೆ ಸುದ್ದಿ ಬಿಡಿ ಸಿನಿಮಾ ಬರ್ತಿದೆ ನೋಡಿ ಎಂದು ಪರೋಕ್ಷವಾಗಿ ಸಿನಿಮಾ ಪೋಸ್ಟರ್​ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅನುಷ್ಕಾ ಶೆಟ್ಟಿಯವರು ಸಿಹಿಸುದ್ದಿ ಕೊಟ್ಟಿದ್ದಾರೆ.

ಟೀಸರ್​ ಇಂದು ರಿಲೀಸ್

Kathanar – The Wild Sorcere ರೋಜಿನ್​ ಥಾಮಸ್​ ನಿರ್ದೇಶನದ, ಜಯಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಸಿರುವ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿಯವರು ನಟಿಸಿದ್ದಾರೆ. ಈ ಸಿನಿಮಾದ ಟೀಸರ್​ ಮಾ.31ರಂದು ಬಿಡುಗಡೆಯಾಗಿದೆ.

ಮಾಲಿವುಡ್​ಗೆ ಕಾಲಿಟ್ಟ ಅನುಷ್ಕಾ

ಕೇರಳದ ಪುರಾಣ ಕತೆಗಳಲ್ಲಿ ಅದ್ಭುತ ಶಕ್ತಿ ಹೊಂದಿರುವ ಪ್ರಾದಿಯೊಬ್ಬರ ಕಥಾ ಹಂದರವನ್ನು ಈ ಸಿನಿಮಾ ಹೊಂದಿದ್ದು, ಪ್ರೇಕ್ಷಕರಲ್ಲಿ ಕೂತೂಹಲವನ್ನು ಹೆಚ್ಚಿಸಲಿದೆ. ಕನ್ನಡ, ತೆಲುಗು, ಮಲಯಾಳಂ ಸೇರಿದಂತೆ ಆರು ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿದೆ.ಈ ಸಿನಿಮಾ ಮೂಲಕ ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಸಿನಿಮಾ ರಿಲೀಸ್ ಆಗೋದ್ಯಾವಾಗ?

ಸದ್ಯ ಸಿನಿಮಾದ ಟ್ರೇಲರ್​, ಟೀಸರ್ ಮಾತ್ರ ಬಿಡುಗಡೆಯಾಗಿದ್ದು, ಮಳೆಗಾಲದಲ್ಲಿ ಕಥನಾರ್​ ಸಿನಿಮಾ ರಿಲೀಸ್​ ಮಾಡಲು ತಂಡ ಚಿಂತನೆ ನಡೆಸಿದೆ. ಸುಮಾರು 500ಕ್ಕೂ ಹೆಚ್ಚು ಜನರು, ಐದು ವರ್ಷಗಳಿಂದ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಜಯಸೂರ್ಯ, ಅನುಷ್ಕಾ ಶೆಟ್ಟಿ, ಪ್ರಭುದೇವ, ಮೋಹನ್​ ಲಾಲ್, ವಿನೇಶ್​, ಹರೀಶ್​ ಉತ್ತಮನ ಅವರು ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಪ್ರಾಮುಖ್ಯತೆ ಕಾಣ್ತಿರುವ ಅನುಷ್ಕಾ

ಇತ್ತೀಚೆಗೆ ಅವರು ಸಿನಿಮಾಗಳಲ್ಲಿ ನಟಿಸುವ ಮುನ್ನ ತುಂಬಾನೆ ಚ್ಯೂಸ್​ ಮಾಡಿ ಸೆಲೆಕ್ಟ್​ ಮಾಡುತ್ತಾರೆ. ಸಿನಿಮಾದಲ್ಲಿ ಅವರಿಗಿರುವ ಪ್ರಾಮುಖ್ಯತೆಯನ್ನು ವಿಮರ್ಶಿಸಿ ನಂತರ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇದಕ್ಕೆ ಉದಾಹರಣೆ, ಘಾಟಿ, ಮಿಸ್​ ಶೆಟ್ಟಿ-ಮಿಸಸ್ ಪೊಲೀಶೆಟ್ಟಿ, ಬಾಹುಬಲಿ ಸಿನಿಮಾಗಳನ್ನು ನೋಡಬಹುದು.

ಟೀಸರ್​​ನಲ್ಲಿ ಏನಿದೆ?

ಕಥನಾರ್​ ಟೀಸರ್​ ಸುಮಾರು 2 ನಿಮಿಷ 58 ಸೆಕೆಂಡ್‌ ಇದೆ. ಚಿತ್ರವು ಅದ್ಭುತ ದೃಶ್ಯಗಳನ್ನು ಹೊಂದಿದೆ. ಪೌರಾಣಿಕ ಹಿನ್ನೆಲೆಯ ಪ್ರಾದಿ ಕತೆಯನ್ನ ಆಧಾರಬವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಚಿತ್ರದ ಮೇಕಿಂಗ್​ ಹೇಗಿದೆ ಎನ್ನುವುದನ್ನು ಟೀಸರ್​ ಬಹಿರಂಗಪಡಿಸಿದೆ. ಜಯಸೂರ್ಯ ಮತ್ತು ಅನುಷ್ಕಾ ಶೆಟ್ಟಿಯವರ ಪಾತ್ರ ಪರಿಚಯಗಳು ಕುತೂಹಲವನ್ನುಟ್ಟು ಹಾಕುವಂತಿದೆ, (ಏಜೆನ್ಸೀಸ್​).