Pranav-Kalyani Marriage Rumours 
ಮಾಲಿವುಡ್

ಪ್ರಣವ್​ ಮೋಹನ್​ ಲಾಲ್ ಜೊತೆ ಕಲ್ಯಾಣಿ ಪ್ರಿಯದರ್ಶನ್​​ ಮದುವೆ?; ಹೃದಯಂ ಜೋಡಿಗಳ ಬಗ್ಗೆ ತಾಯಿ ಹೇಳಿದ್ದೇನು?..Kalyani Priyadarshan

Pranav-Kalyani Marriage Rumours: ಮೋಹನ್​ ಲಾಲ್​ ಪುತ್ರನಾದ ಪ್ರಣವ್​  ಮೋಹನ್​ ಲಾಲ್​ರಿಗೆ ಹೃದಯಂ ಸಿನಿಮಾ ಭಾರಿ ಹೆಸರನ್ನು ತಂದುಕೊಟ್ಟಿತ್ತು. ಇದರಲ್ಲಿ ಪ್ರಣವ್​  ಮತ್ತು ಕಲ್ಯಾಣಿ ಪ್ರಿಯದರ್ಶನ್  ಜೋಡಿಯ ಕತೆ ಮತ್ತು ಪಾತ್ರ ಪ್ರೇಮಿಗಳಿಗೆ, ಸಿನಿಮಾ ವೀಕ್ಷಕರಿಗೆ ನಿದ್ದೆ ಕೆಡಿಸಿತ್ತು. ಸದ್ಯ ಮಾಲಿವುಡ್​ ಕ್ಷೇತ್ರದಲ್ಲಿ ಹೆಚ್ಚಿರುವ ಗುಸುಗುಸು ಎಂದರೆ, ಇವರಿಬ್ಬರ ಮದುವೆ ವಿಚಾರ. ಆದರೆ, ಈ ಊಹಾಪೋಹಕ್ಕೆ ಕಲ್ಯಾಣಿಯವರ ತಾಯಿ ತೆರೆ ಎಳೆದಿದ್ದಾರೆ.
ಕಲ್ಯಾಣಿ ಪ್ರಿಯದರ್ಶನ್​ ಮತ್ತು ಪ್ರಣವ್​​ ಮದುವೆಯಾಗ್ತಾರೆ. ಡೇಟಿಂಗ್​ ನಲ್ಲಿದ್ದಾರೆ ಎನ್ನುವ ಸಾಕಷ್ಟು ಊಹಾಪೋಹಗಳು ಹೃದಯಂ ಸಿನಿಮಾದ ನಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಹೀಗಾಗಿ ಕಲ್ಯಾಣಿ ಅವರ ತಾಯಿ ಲಿಸ್ಸಿ ಅವರ ಪೋಸ್ಟ್​ಗೆ ನೇರವಾಗಿ ಅಭಿಮಾನಿಯೊಬ್ಬ ಇನ್​ಸ್ಟಾಗ್ರಾಂನಲ್ಲಿ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಲಿಸ್ಸಿ ಏನಂದ್ರು?

ಮಾಜಿ ನಟಿ ಮತ್ತು ಕಲ್ಯಾಣಿಯವರ ತಾಯಾದ ಲಿಸ್ಸಿ ಅವರು  ವಿಷು ಹಬ್ಬದ ಹಿನ್ನೆಲೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು. ಎಲ್ಲರಿಗೂ ಸಮೃದ್ಧಿ ಆರೋಗ್ಯ, ಆಸ್ತಿ ಸಂತೋಷ ನೀಡಲಿ ಎಂದು ಶುಭಾಷಯ ಕೋರಿದ್ದರು.  ಆಗ ಆಕಾಶ್​ ಎಂಬುವವರು ನಾನು ಕಲ್ಯಾಣಿ ಮತ್ತು ಪ್ರಣವ್​ರ ಮದುವೆಯ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಟೆಕ್ಸ್ಟ್​ ಮಾಡಿದ್ದರು. ಇದಕ್ಕೆ ಆಕೆ ಉತ್ತರಿಸಿದ್ದಾರೆ. 

ಮದುವೆ ಅನ್ನೋದೆಲ್ಲ ಸುಳ್ಳು

 ಕಲ್ಯಾಣಿ ಮತ್ತು ಪ್ರಣವ್ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ತೀರಾ ಸುಳ್ಳು. ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದು ನೇರವಾಗಿ ಉತ್ತರಿಸಿದ್ದಾರೆ.
ಪ್ರಣವ್​ ಕುಟುಂಬ ಮತ್ತು ಕಲ್ಯಾಣಿ  ಕುಟುಂಬಸ್ಥರ ಸಂಬಂಧ ಇಂದು ನಿನ್ನೆಯದಲ್ಲ.  ನಿರ್ದೇಶಕ ಪ್ರಿಯದರ್ಶನ್​  ಮತ್ತು ಮೋಹನ್​​ ಲಾಲ್​ ಕುಟುಂಬದ ನಡುವೆ ದಶಕಗಳಿಂದ ಆಪ್ತ ಬಾಂಧವ್ಯವಿದೆ.  ಕಲ್ಯಾಣಿ ಮತ್ತು ಪ್ರಣವ್​ ಬಾಲ್ಯದಿಂದಲೂ ಒಟ್ಟಾಗಿ ಬೆಳೆದವರು. ಈ ಹಿಂದೆಯೊಮ್ಮೆ  ಪಾಡ್​ಕಾಸ್ಟ್​​ವೊಂದರಲ್ಲಿ ಲಿಸ್ಸಿ ಮಾತನಾಡುತ್ತಾ, 'ಇಬ್ಬರ ಮಧ್ಯೆ ಗಾಢವಾದ ಸ್ನೇಹ ಇದೆ. ಅವರ ನಡುವೆ ಇರುವುದು ಅಣ್ಣ-ತಂಗಿಯಂತಹ ಸಂಬಂಧ. ಅವರಿಬ್ಬರ ನಡುವೆ ಪ್ರೇಮ ಸಂಬಂಧ ಇಲ್ಲ' ಎಂದು ಹೇಳಿದ್ದರು.

ಇಬ್ಬರು ಸಿನಿಮಾದಲ್ಲಿ ಬ್ಯುಸಿ

ಕಲ್ಯಾಣಿ ಮತ್ತು ಪ್ರಣವ್ 'ಹೃದಯಂ' ಮತ್ತು 'ವರ್ಷಂಗಲ್ಕು ಶೇಷಂ' ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಲೋಕಃ ಭಾಗ ಎರಡರ ಚಿತ್ರೀಕರಣ 2026ರಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಲೋಕಃ ಭಾಗ1  ಮಾಲಿವುಡ್​  ಮಾತ್ರವಲ್ಲದೇ ಇಡೀ ಭಾರತ ಸಿನಿಮಾರಂಗದಲ್ಲೇ ಧೂಳೆಬ್ಬಿಸಿತ್ತು. ಪ್ರಣವ್​ ಮೋಹನ್​ ಲಾಲ್​ ಅವರ ಡೈಸ್​ ಇರೇ ಸಿನಿಮಾವು ಕಳೆದ ವರ್ಷ ರಿಲೀಸ್​ ಆಗಿ ಭಾತಿ ಯಶಸ್ಸು ಕಂಡಿತ್ತು, (ಏಜೆನ್ಸೀಸ್​)