ಇನ್ನೂ ಒಂದು ತಿಂಗಳಾಗಿಲ್ಲ ಅಷ್ಟರಲ್ಲೇ... ನಟಿ ನವ್ಯಾ ನಾಯರ್​ ವಿರುದ್ಧ ನೆಟ್ಟಿಗರ ಆಕ್ರೋಶ! Navya Nair  
ಮಾಲಿವುಡ್

ಇನ್ನೂ ಒಂದು ತಿಂಗಳಾಗಿಲ್ಲ ಅಷ್ಟರಲ್ಲೇ... ನಟಿ ನವ್ಯಾ ನಾಯರ್​ ವಿರುದ್ಧ ನೆಟ್ಟಿಗರ ಆಕ್ರೋಶ! Navya Nair

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ನಟಿ ನವ್ಯಾ ನಾಯರ್​ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ
  • ನಟ ದರ್ಶನ್​ ಅಭಿನಯದ ಗಜ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು
  • ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡು ಕನ್ನಡಿಗರ ಮನದಲ್ಲಿ ನೆಲೆಸಿದರು
  • ತಾಜಾ ಸಂಗತಿ ಏನೆಂದರೆ, ನಟಿ ನವ್ಯಾ ನಾಯರ್​ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ
Navya Nair : ಮಲಯಾಳಂ ನಟಿ ನವ್ಯಾ ನಾಯರ್​ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ನಟ ದರ್ಶನ್​ ಅಭಿನಯದ ಗಜ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಬ್ಯೂಟಿ, ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡು ಕನ್ನಡಿಗರ ಮನದಲ್ಲಿ ನೆಲೆಸಿದರು. ಇದಾದ ಬಳಿಕ ನಮ್ಮೆಜಮಾನರು, ಭಾಗ್ಯದ ಬಳೆಗಾರ ಹಾಗೂ ಬಾಸ್ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾಗಳು ಅಷ್ಟೊಂದು ಹೆಸರು ಮಾಡಲಿಲ್ಲ. ಬಳಿಕ ದೃಶ್ಯ ಸರಣಿಯಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಜತೆ ನಟಿಸುವ ಮೂಲಕ ಮತ್ತೆ ಕನ್ನಡಿಗರ ಮನದಲ್ಲಿ ಗಟ್ಟಿಯಾಗಿ ನೆಲೆಯೂರಿದರು. 
ತಾಜಾ ಸಂಗತಿ ಏನೆಂದರೆ, ನಟಿ ನವ್ಯಾ ನಾಯರ್​ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ವಿಷು ಆಚರಣೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು. 
ಅಂದಹಾಗೆ, ಇತ್ತೀಚೆಗೆ, ನವ್ಯಾ ಅವರ ಅತ್ತೆ ನಿಧನರಾದರು. ಈ ಸಂಬಂಧ ನವ್ಯಾ ಅವರು ಒಂದು ಪೋಸ್ಟ್​ ಅನ್ನು ಹಂಚಿಕೊಂಡಿದ್ದರು. ಆ ಪೋಸ್ಟ್​ನಲ್ಲಿ, ನಮ್ಮ ಮನೆಯ ದೀಪ ಆರಿಹೋಯಿತು. ಯಾವಾಗಲೂ ಧೈರ್ಯ ತುಂಬುತ್ತಿದ್ದರು. ಸೊಸೆಯನ್ನಾಗಿ ಅಲ್ಲ, ಮಗಳಂತೆಯೇ ನನ್ನನ್ನು ಪ್ರೀತಿಸಿದರು. ಎಲ್ಲಾ ಸಂಕಟಗಳಲ್ಲೂ ಮಕ್ಕಳೇ ಬೇಸರಪಡಬೇಡಿ, ಅಮ್ಮನ ಪ್ರಾರ್ಥನೆ ಮತ್ತು ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತದೆ ಎಂದು ಹೇಳಿ ನಮ್ಮ ಜೊತೆಗೆ ನಿಂತರು. ಅಮ್ಮ ಆಶಿಸಿದಂತೆಯೇ ಇದುವರೆಗೆ ಎಲ್ಲವನ್ನೂ ಮಾಡಿದ್ದೇನೆ. ಅಮ್ಮನ ಪ್ರೀತಿಯ ಮುಂದೆ ನನ್ನ ನಷ್ಟಗಳನ್ನೆಲ್ಲಾ ನಾನು ಸಹಿಸಿಕೊಂಡೆ. ನನ್ನ ನೃತ್ಯವನ್ನು ತುಂಬಾ ಇಷ್ಟಪಡುತ್ತಿದ್ದ ಅಮ್ಮ, ಕೊನೆಯದಾಗಿ ಮಾತಂಗಿ ಫೆಸ್ಟಿವಲ್‌ಗೆ ಬಂದು ನನ್ನ ಇಡೀ ಕಚೇರಿಯನ್ನು ನೋಡಿದರು. ನನ್ನ ಮಗಳು ಎರಡು ಗಂಟೆಗಳ ಕಾಲ ನೃತ್ಯ ಮಾಡಿದಳು ಎಂದು ಎಲ್ಲರ ಬಳಿಯೂ ಹೆಮ್ಮೆಯಿಂದ ಹೇಳಿಕೊಂಡರು. ಇಂದು ಅವರು ನಮ್ಮೊಂದಿಗೆ ಇಲ್ಲ. ಅಮ್ಮನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ನವ್ಯಾ ಬರೆದುಕೊಂಡಿದ್ದರು.

ನೆಟ್ಟಿಗರ ಆಕ್ರೋಶ

ವಿಷು ಆಚರಣೆಯ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರು ನವ್ಯಾರನ್ನು ಟೀಕಿಸುತ್ತಾರೆ. ಅತ್ತೆ ಸಾವಿಗೀಡಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ, ಅಷ್ಟರಲ್ಲೇ ಈ ಸಂಭ್ರಮಾಚರಣೆ ಬೇಕಿತ್ತಾ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಯಾರಾದರೂ ಸತ್ತರೆ, ನಮ್ಮ ಸಂಪ್ರದಾಯದ ಪ್ರಕಾರ, ನಾವು ಒಂದು ವರ್ಷದವರೆಗೂ ಮನೆಯಲ್ಲಿ ಯಾವುದೇ ಸಂಭ್ರಮಾಚರಣೆ ಮಾಡುವುದಿಲ್ಲ. ಆದರೆ, ನೀವು ಒಂದೇ ತಿಂಗಳಲ್ಲಿ ಆಚರಣೆ ಮಾಡುತ್ತಿದ್ದೀರಿ ಹಾಗಾದರೆ, ಅತ್ತೆಯ ಬಗ್ಗೆ ನೀವು ಆಡಿದ ಪ್ರೀತಿ ಮಾತುಗಳೆಲ್ಲ ನಿಜವೇ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ನವ್ಯಾ ನಾಯರ್​ ಅವರು ಯಾವುದೇ ಉತ್ತರವನ್ನು ನೀಡಿಲ್ಲ. ಈ ಬಗ್ಗೆ ನವ್ಯಾ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).