- ಬಹುಭಾಷ ನಟಿ ಭಾವನಾ ಅವರು ತುಂಬಾ ದಿನಗಳ ಬಳಿಕ ಮತ್ತೆ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ
- ಭಾವನಾ ನಟನೆಯ ಮುಂಬರುವ ಚಿತ್ರ 'ಅನೋಮಿ' ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ
- ಇತ್ತೀಚೆಗೆ ಭಾವನಾ ನೀಡಿದ ಸಂದರ್ಶನದ ಕೆಲವು ಭಾಗಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ
Actress Bhavana : ಬಹುಭಾಷ ನಟಿ ಭಾವನಾ ಅವರು ಮದುವೆಯ ನಂತರ ಸಿನಿಮಾ ರಂಗದಿಂದ ಸ್ವಲ್ಪ ಅಂತರ ಕಾಯ್ದುಕೊಂಡರು. ಇದೀಗ ಮತ್ತೆ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅವರ ಮುಂಬರುವ ಚಿತ್ರ 'ಅನೋಮಿ' ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ, ಭಾವನಾ ಅವರು ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನದ ಕೆಲವು ಭಾಗಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಜೀವನದಲ್ಲಿ ತಾನು ತಪ್ಪಿಸಲು ಬಯಸುವ ಸಂಗತಿಗಳು ಮತ್ತು ತಾನು ತಪ್ಪಿತಸ್ಥಳೆಂದು ಭಾವಿಸುವ ವಿಷಯಗಳ ಬಗ್ಗೆ ಭಾವನ ಮುಕ್ತವಾಗಿ ಮಾತನಾಡಿದ್ದಾರೆ.
ನನ್ನ ಮೊದಲ ಚಿತ್ರವೇ ಯಶಸ್ವಿಯಾಯಿತು. ಇದನ್ನು ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. 'ನಮ್ಮಲ್' ಸಿನಿಮಾ ನಂತರ, ನನಗೆ ಬಹಳಷ್ಟು ಅವಕಾಶಗಳು ಸಿಕ್ಕವು. ನಾನು ಮತ್ತೆ ಕಾಲೇಜಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ನಾನು ಎಂದಿಗೂ ಕಾಲೇಜು ಜೀವನವನ್ನು ಅನುಭವಿಸಲೇ ಇಲ್ಲ. ಆದ್ದರಿಂದ, ನನಗೆ ಕಾಲೇಜಿನ ಅನುಭವದ ಬಗ್ಗೆ ತಿಳಿದಿಲ್ಲ. ನಾನು ಕಾಲೇಜು ದಿನಗಳ ಉತ್ತಮ ಅನುಭವನ್ನು ಕಳೆದುಕೊಂಡೆ ಎಂದು ಭಾವನಾ ಹೇಳಿದರು.
ಅಂದಹಾಗೆ, ನಾನು ಚೆನ್ನಾಗಿ ತಿನ್ನುವ ವ್ಯಕ್ತಿ. ನನಗೆ ಚಿಪ್ಸ್ ಮತ್ತು ಫ್ರೆಂಚ್ ಫ್ರೈಸ್ ತುಂಬಾ ಇಷ್ಟ. ನಾನು ಒಮ್ಮೆ ತಿನ್ನಲು ಪ್ರಾರಂಭಿಸಿದರೆ, ನಿಲ್ಲಿಸೋಕೆ ಮನಸ್ಸೇ ಆಗಲ್ಲ. ಗರಿಗರಿಯಾದ ಆಹಾರವನ್ನು ತಪ್ಪಿಸಲು ನನ್ನಿಂದ ಆಗುವುದೇ ಇಲ್ಲ. ತಿನ್ನುವ ವಿಚಾರದಲ್ಲಿ ನಾನು ಕಂಟ್ರೋಲ್ ತಪ್ಪುತ್ತೇನೆ ಎಂದರು.
ನನ್ನ ಬಳಿ ತುಂಬಾ ಚರ್ಮದ ಬ್ಯಾಗ್ಗಳಿವೆ. ಮತ್ತೆಂದೂ ನಾನು ಚರ್ಮದ ಬ್ಯಾಗ್ಗಳನ್ನು ಖರೀದಿಸುವುದಿಲ್ಲ. ನಾನು ದೊಡ್ಡ ಪ್ರಾಣಿ ಪ್ರೇಮಿ. ಚರ್ಮದ ಬ್ಯಾಗ್ ಖರೀದಿ ಮಾಡಿದ್ದಕ್ಕೆ ನನಗೆ ಈಗಲೂ ತಪ್ಪಿತಸ್ಥ ಭಾವನೆ ಇದೆ. ನಾನು ಮತ್ತೆ ಎಂದಿಗೂ ಹೊಸ ಚರ್ಮದ ಬ್ಯಾಗ್ ಅನ್ನು ಖರೀದಿಸುವುದಿಲ್ಲ. ಹಾಗಾಗಿ ನಾನು ಇನ್ನು ಮುಂದೆ ಯಾವುದೇ ಪ್ರಾಣಿ ವಸ್ತುವನ್ನು ಖರೀದಿಸದಿರಲು ನಿರ್ಧರಿಸಿದ್ದೇನೆ ಎಂದು ಭಾವನಾ ಹೇಳಿದರು.
ಇನ್ನು ಚರ್ಮದ ಆರೈಕೆಯ ವಿಷಯಕ್ಕೆ ಬಂದರೆ, ಇದೆಲ್ಲವೂ ಸ್ವಲ್ಪ ಆನುವಂಶಿಕವಾಗಿದೆ. ನನ್ನ ತಾಯಿಯ ಸ್ಕಿನ್ ಚೆನ್ನಾಗಿದೆ . ಆದ್ದರಿಂದ ನಾನು ಹೆಚ್ಚು ಚರ್ಮದ ಆರೈಕೆ ಮಾಡಬೇಕಾಗಿಲ್ಲ. ಬೇಕಾದರೆ, ನೀವು ನನ್ನ ಸ್ನೇಹಿತರನ್ನು ಕೇಳಬಹುದು. ನಾನು ಬಹಳಷ್ಟು ಕರಿದ ಆಹಾರವನ್ನು ತಿಂದರೂ, ನನ್ನ ಮುಖಕ್ಕೆ ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದರು.
ಅಂದಹಾಗೆ, ಮಲಯಾಳಂ ಮೂಲದ ನಟಿ ಭಾವನಾ ಮೆನನ್, ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರೀತಿಪಾತ್ರ ನಟಿಯರಲ್ಲಿ ಒಬ್ಬರು. 2010ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜಾಕಿ' ಚಿತ್ರದ ಮೂಲಕ ಅದ್ಧೂರಿಯಾಗಿ ಕನ್ನಡಕ್ಕೆ ಪದಾರ್ಪಣೆ ಮಾಡಿದರು ಮತ್ತು ಮೊದಲ ಸಿನಿಮಾದಲ್ಲೇ ತಮ್ಮ ಸಹಜ ನಟನೆ ಮತ್ತು ಮುದ್ದಾದ ಅಭಿನಯದಿಂದ ಕನ್ನಡಿಗರ ಮನಗೆದ್ದರು. ನಂತರ ಸುದೀಪ್ ಅವರೊಂದಿಗೆ 'ವಿಷ್ಣುವರ್ಧನ್', ಉಪೇಂದ್ರ ಜೊತೆ 'ಟೋಪಿವಾಲ' ಮತ್ತು ಶಿವಣ್ಣನವರ ಜೊತೆ 'ಟಗರು' ಹಾಗೂ 'ಭಜರಂಗಿ-2' ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಟನಾ ಪ್ರಾಧಾನ್ಯತೆಯಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಭಾವನಾ ಅವರು, ಕನ್ನಡ ಭಾಷೆಯನ್ನು ಕಲಿತು ಸ್ವತಃ ತಾವೇ ಡಬ್ಬಿಂಗ್ ಮಾಡುವ ಮೂಲಕ ಕನ್ನಡಿಗರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ, (ಏಜೆನ್ಸೀಸ್).