- ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ
- ಹನಿ ರೋಸ್ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ
- ಮಲಯಾಳಂ ನಟಿಯ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ
- ಮದುವೆ ಅನ್ನೋ ಪದ ಕೇಳಿದಾಗ ತುಂಬಾ ಸಂತೋಷಪಡುವ ವ್ಯಕ್ತಿ ನಾನಲ್ಲ ಎಂದ ಹನಿ ರೋಸ್ ಹೇಳಿದ್ದಾರೆ
Honey Rose : ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು ಮತ್ತು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹನಿ ರೋಸ್ ಬಿಜಿಯಾಗಿದ್ದಾರೆ.
ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಹನಿ ರೋಸ್, ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ್ದಾರೆ. ಸಿನಿಮಾ ಹೊರತಾಗಿ ಉದ್ಘಾಟನಾ ಸಮಾರಂಭಗಳಿಗೆ ಹನಿರೋಸ್ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹನಿ ಭಾಗವಹಿಸಿದ ಎಲ್ಲ ಉದ್ಘಾಟನಾ ಸಮಾರಂಭಗಳಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಹನಿಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುವುದರ ಜತೆಗೆ, ಅವರ ವಿರುದ್ಧ ಸೈಬರ್ ದಾಳಿಗಳು ಕೂಡ ಸಾಮಾನ್ಯವಾಗಿವೆ.
ಸದ್ಯ ಹನಿ ರೋಸ್ ಅವರಿಗೆ 34 ವರ್ಷ ವಯಸ್ಸು. ಆದರೂ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಇನ್ನು ಸಿನಿಮಾಗಳ ಅವಕಾಶ ಅಷ್ಟೇನು ಇಲ್ಲ. ಹೀಗಾಗಿ, ಹನಿ ರೋಸ್ ಅವರಿಗೆ ಮದುವೆ ಯಾವಾಗ? ಅನ್ನೋ ಪ್ರಶ್ನೆಗೆ ಎಲ್ಲೇ ಹೋದರು ಸಾಮಾನ್ಯವಾಗಿ ಎದುರಾಗುತ್ತದೆ. ಆದರೆ, ಮದುವೆ ಅಂದರೆ, ಹನಿ ರೋಸ್ ಭಯ ಪಡುತ್ತಾರಂತೆ. ಮಲಯಾಳಂ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಹೇಳಿಕೊಂಡಿಕೊಂಡಿದ್ದಾರೆ.
ಮದುವೆ ಅನ್ನೋ ಪದ ಕೇಳಿದಾಗ ತುಂಬಾ ಸಂತೋಷಪಡುವ ವ್ಯಕ್ತಿ ನಾನಲ್ಲ. ಮದುವೆ ಅನ್ನೋ ಪದ ಕೇಳಿದರೆ ಸಾಕು ನನಗೆ ಭಯವಾಗುತ್ತದೆ. ಅಷ್ಟಕ್ಕೂ ಈ ಭಯ ಏಕೆ ಅನ್ನೋ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡಾಗ, ಒಳ್ಳೆಯ ವ್ಯಕ್ತಿ ನಮ್ಮ ಜೀವನದಲ್ಲಿ ಬರದೇ ಹೋದರೆ, ನಾವು ಎದುರಿಸಬೇಕಾದ ಕಷ್ಟಗಳು ಅಷ್ಟಿಷ್ಟಲ್ಲ ಎಂಬ ಉತ್ತರವನ್ನು ನಾನೇ ಕಂಡುಕೊಳ್ಳುತ್ತೇನೆ ಎಂದು ಹನಿ ರೋಸ್ ಹೇಳಿದ್ದಾರೆ.
ಇದೇ ಕಾರಣಕ್ಕೆ ನನಗೆ ಮದುವೆ ಬೇಡ. ಸಿನಿಮಾ ಬಿಟ್ಟ ನಂತರ ನನ್ನ ಜೀವನದಲ್ಲಿ ಬೇರೇನೂ ಇಲ್ಲ. ಒಂದು ವೇಳೆ ಮದುವೆಯಾದರು ಕೂಡ ನಾನು ಸಿನಿಮಾದಲ್ಲಿಯೇ ಇರುತ್ತೇನೆ ಎಂದು ಹನಿ ರೋಸ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ತಾವು ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ರಾಚೆಲ್' ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ, (ಏಜೆನ್ಸೀಸ್).