ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಹನಿ ರೋಸ್​ ಜತೆ ಯುವಕನ ಅನುಚಿತ ವರ್ತನೆ: ವಿಡಿಯೋ ವೈರಲ್​...Honey Rose 
ಮಾಲಿವುಡ್

ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಹನಿ ರೋಸ್​ ಜತೆ ಯುವಕನ ಅನುಚಿತ ವರ್ತನೆ: ವಿಡಿಯೋ ವೈರಲ್​...Honey Rose

ಪ್ರಮುಖ ಮುಖ್ಯಾಂಶಗಳು

  • ಮಲಯಾಳಂ ಬ್ಯೂಟಿ ಹನಿ ರೋಸ್​ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ
  • ಹನಿ ರೋಸ್​ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ
  • ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ
  • ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹನಿ ರೋಸ್​ಗೆ ಮುಜುಗರ ಎನಿಸುವ ಘಟನೆಯೊಂದು ನಡೆದಿದೆ
Honey Rose : ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್​ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್​ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ.
ಸದ್ಯಕ್ಕೆ ಕೆಲ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ. ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಹನಿ ರೋಸ್, ಚಿತ್ರರಂಗದಲ್ಲಿ 20 ಪೂರೈಸಿದ್ದಾರೆ. ಪ್ರಸ್ತುತ ಹನಿ ರೋಸ್ ರಾಚೆಲ್‌ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾ ಹೊರತಾಗಿ ಉದ್ಘಾಟನಾ ಸಮಾರಂಭಗಳಿಗೆ ಹನಿ ರೋಸ್​ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹನಿ ಭಾಗವಹಿಸಿದ ಎಲ್ಲ ಉದ್ಘಾಟನಾ ಸಮಾರಂಭಗಳಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ತಾಜಾ ಸಂಗತಿ ಏನೆಂದರೆ, ಹನಿರೋಸ್​ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮುಜುಗರ ಎನಿಸುವ ಘಟನೆಯೊಂದು ನಡೆದಿದೆ.

ಅಷ್ಟಕ್ಕೂ ಏನಾಯಿತು?

ಕೇರಳದ ಪ್ರಮುಖ ಪಟ್ಟಣವೊಂದರಲ್ಲಿ ಹೊಸದಾಗಿ ತೆರೆಯಲಾದ ಶಾಪಿಂಗ್ ಮಾಲ್ ಉದ್ಘಾಟನೆಗೆ ಹನಿ ರೋಸ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಹನಿ ರೋಸ್​ ಬರ್ತಾರೆ ಅಂತಾ ಗೊತ್ತಾದ ಕೂಡಲೇ ಸಾವಿರಾರು ಅಭಿಮಾನಿಗಳು ಅವರನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಜಮಾಯಿಸಿದ್ದರು. ಮಾಲ್ ಆಡಳಿತ ಮಂಡಳಿ ಭಾರೀ ಭದ್ರತೆಯನ್ನು ಏರ್ಪಡಿಸಿದ್ದರೂ, ಅಭಿಮಾನಿಗಳ ನೂಕು ನುಗ್ಗಲನ್ನು ತಡೆಯುವುದು ಕಷ್ಟಕರವಾಗಿತ್ತು. ಉದ್ಘಾಟನೆಯನ್ನು ಮುಗಿಸಿ, ಹನಿ ರೋಸ್ ಹೊರಬರುತ್ತಿದ್ದಾಗ, ಕೆಲ ಯುವಕರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಧಾವಿಸಿದರು. ಹನಿ ರೋಸ್​ ಕೂಡ ಅವರೊಂದಿಗೆ ತಾಳ್ಮೆಯಿಂದ ಮತ್ತು ನಗುವಿನೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು. ಆದರೆ, ಅದೇ ಸಮಯದಲ್ಲಿ, ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಹನಿ ರೋಸ್​ ಹತ್ತಿರ ಬಂದು, ಅವರ ಸೊಂಟದ ಮೇಲೆ ಕೈಯಿಟ್ಟು ಅಸಭ್ಯವಾಗಿ ಮುಟ್ಟಿದನು.
ಈ ಅನಿರೀಕ್ಷಿತ ಘಟನೆಯಿಂದ ಹನಿ ರೋಸ್ ಕೂಡ ಮುಜುಗರಕ್ಕೆ ಒಳಗಾದರು. ಆದರೆ, ಅದನ್ನು ತೋರಿಸಿಕೊಳ್ಳದೇ ಅಲ್ಲಿಂದ ನಯವಾಗಿಯೇ ಹೊರಟರು. ಹನಿ ರೋಸ್​ ಮುಖದಲ್ಲಿ ಅಸಹನೆ ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ, ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಯಾರಿಗೂ ಏನನ್ನೂ ಹೇಳದೆ ಅವರು ಬೇಗನೆ ಅಲ್ಲಿಂದ ಹೊರಟುಹೋದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂತಹ ಸಮಯದಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ. ಆದರೆ, ಹನಿ ರೋಸ್ ಬಹಳ ಶಾಂತವಾಗಿ ಸ್ಥಳದಿಂದ ಹೊರಟುಹೋದರು.
ನೆಟ್ಟಿಗರ ಆಕ್ರೋಶ
ಈ ಘಟನೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲ್ಫಿ ಕೇಳುವುದು ಹಕ್ಕಲ್ಲ, ಅದು ಸೆಲೆಬ್ರಿಟಿಗಳು ನಮಗೆ ನೀಡಿದ ಗೌರವ. ಆ ಗೌರವವನ್ನು ರಕ್ಷಿಸದೆ ನೀವು ಯಾಕೆ ಇಂತಹ ಕೀಳು ಕೆಲಸಗಳನ್ನು ಮಾಡುತ್ತೀರಿ? ಎಂದು ನೆಟ್ಟಿಗರ ಕಿಡಿಕಾರುತ್ತಿದ್ದಾರೆ. ನಾಯಕಿಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲರಾದ ಮಾಲ್ ಆಡಳಿತ ಮಂಡಳಿ ಮತ್ತು ಬೌನ್ಸರ್‌ಗಳ ವಿರುದ್ಧವೂ ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ. ಈ ಹಿಂದೆಯೂ ಅನೇಕ ನಾಯಕಿಯರು ಇಂತಹ ಕಿರುಕುಳವನ್ನು ಎದುರಿಸಿದ್ದಾರೆ. ಮಾಲ್ ಉದ್ಘಾಟನೆಯಂತಹ ಜನದಟ್ಟಣೆಯ ಸ್ಥಳಗಳಿಗೆ ಮಹಿಳಾ ಸೆಲೆಬ್ರಿಟಿಗಳನ್ನು ಕರೆಯಿಸಿದಾಗ, ಅವರಿಗೆ ಬಲವಾದ ಭದ್ರತೆಯನ್ನು ಒದಗಿಸುವುದು ಆಡಳಿತ ಮಂಡಳಿಯ ಜವಾಬ್ದಾರಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್​).