- ಹಾರರ್ ಚಿತ್ರಗಳಲ್ಲಿಯೂ ಸಿನಿರಸಿಕರನ್ನು ಸೆಳೆಯುವ ಮಾಲಿವುಡ್
- ನೀವು ಈ 9 ಹಾರರ್ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಮಿಸ್ ಮಾಡಲೇಬೇಡಿ
ಕೇರಳ: ಅತೀ ಕಡಿಮೆ ಬಜೆಟ್‌ನಲ್ಲಿ ತಯಾರಾದ ಮತ್ತು ಕೇವಲ ವಿಷಯದ ಮೇಲೆ ಹೆಚ್ಚು ಅಧರಿಸಿ, ಅವಲಂಬಿಸಿ ನಿರ್ಮಿಸಲಾದ ಮಲಯಾಳಂ ಸಿನಿಮಾಗಳು ಸದ್ಯ ಭಾರತೀಯ ಬಾಕ್ಸ್ ಆಫೀಸ್ ಮಾತ್ರವಲ್ಲದೇ, ಚಿತ್ರರಸಿಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆಗಳನ್ನು ಪಡೆಯುತ್ತಿರುವುದು ಗಮನಾರ್ಹ. ಇದಕ್ಕೆ ಇತ್ತೀಚೆಗೆ ಮತ್ತು ಈ ಹಿಂದೆ ತೆರೆಕಂಡ ಹಲವಾರು ಸಿಂಪಲ್ ಸ್ಟೋರಿಯ ಸೂಪರ್ಹಿಟ್ ಚಿತ್ರಗಳು ಉತ್ತಮ ನಿದರ್ಶನ.
ಹಾಕಿರುವ ಬಂಡವಾಳ ಮತ್ತು ಲಾಭದ ಜೊತೆ ಜೊತೆಗೆ ಸಾಕಷ್ಟು ದಾಖಲೆಗಳನ್ನು ತನ್ನದಾಗಿಸಿಕೊಳ್ಳುತ್ತಿರುವ ಮಾಲಿವುಡ್ ಚಿತ್ರರಂಗದ ಸಿನಿಮಾಗಳು ಕೇವಲ ಯಾವುದೋ ಒಂದು ಜಾನರ್ಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ಆ್ಯಕ್ಷನ್, ಲವ್, ದಾಂಪತ್ಯ, ಕ್ರೈಂ-ಥ್ರಿಲ್ಲರ್, ಆಳವಾದ ಮತ್ತು ಮಹತ್ವದ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನೇ ತೆರೆಗೆ ತಂದು, ಅದರಲ್ಲಿ ಗೆಲುವು ನೋಡುವುದು ಮಲಯಾಳಂನವರ ಕಿಲಾಡಿತನ. ಇದು ಹಾರರ್ ಕಥೆಗಳಿಗೂ ಅನ್ವಯಿಸುತ್ತದೆ.
ಹಾರರ್-ಥ್ರಿಲ್ಲರ್, ಸಸ್ಪೆನ್ಸ್ ಸ್ಟೋರಿಗಳಲ್ಲಿಯೂ ಸಕ್ಸಸ್ ಕಂಡಿರುವ ಮಾಲಿವುಡ್, ಇಂತಹ ಕಥೆಗಳನ್ನು ಇಷ್ಟಪಡುವ ವರ್ಗಕ್ಕೂ ತಮ್ಮ ಸಿನಿಮಾಗಳಲ್ಲಿ ಸೆಳೆಯುವಂತ ವಿಷಯಗಳನ್ನು ಇಟ್ಟಿರುತ್ತಾರೆ. ಈ ಮೂಲಕ ಹಾರರ್ ಜಾನರ್ ಲೈಕ್ ಮಾಡುವ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ. ಮಲಯಾಳಂನ ಹಲವು ಸೂಪರ್ಹಿಟ್ ಹಾಗೂ ಗಮನ ಸೆಳೆದ ಭಯಾನಕ ಸಿನಿಮಾಗಳ ಪೈಕಿ ಒಂದಷ್ಟು ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ನೀವು ಒಟಿಟಿಯಲ್ಲಿ ನೋಡಲೇಬೇಕಾದ ಹಾರರ್ ಚಿತ್ರಗಳಿವು
ಒಟಿಟಿ: ಇರೋಸ್ ನೌ, ಯೂಟ್ಯೂಬ್