ದಿ ಕೇರಳ ಸ್ಟೋರಿ 2 ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್
- ದಿ ಕೇರಳ ಸ್ಟೋರಿ 2 ಸಿನಿಮಾವನ್ನು ಪ್ರೋಪಗಾಂಡಾ ಎಂದು ಕರೆದ ಅನುರಾಗ್ ಕಶ್ಯಪ್
- ಅನುರಾಗ್ ಕಶ್ಯಪ್ ಒಬ್ಬ ಮಾನಸಿಕ ಅಸ್ವಸ್ಥ ಎಂದ ಕೇರಳ ಸ್ಟೋರಿ ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್
- ಇಂತವರಿಗೆ ಸತ್ಯಾಂಶಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುವುದಿಲ್ಲ ಎಂದ ಸಿಂಗ್
ಕೇರಳ: ದಿ ಕೇರಳ ಸ್ಟೋರಿ 2 (The Kerala Story 2 ) ಸಿನಿಮಾವು ಬಿಡುಗಡೆಗೂ ಮುನ್ನವೇ ಭಾರಿ ಟೀಕೆ ಹಾಗೂ ವಿವಾದಗಳಿಗೆ ಒಳಗಾಗುತ್ತಿದ್ದು, ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಈ ಸಿನಿಮಾವನ್ನು ಪ್ರೋಪಗಾಂಡಾ ಎಂದು ಕರೆದಿದ್ದರು. ಈಗ ಈ ಹೇಳಿಕೆಗೆ ದಿ ಕೇರಳ ಸ್ಟೋರಿ ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್ ತಿರುಗೇಟು ನೀಡಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಮಾಕ್ಯ ನಾರಾಯಣ್ ಸಿಂಗ್, ಅನುರಾಗ್ ಕಶ್ಯಪ್ ಒಬ್ಬ ಮಾನಸಿಕ ಅಸ್ವಸ್ಥ, ಅವನ ಮಾತನ್ನು ಯಾರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಅವನು ಸಾಲು-ಸಾಲು ಪ್ಲಾಫ್ ಸಿನಿಮಾಗಳ ಹೊರತಾಗಿ ಏನು ಸಾಧನೆ ಮಾಡಿದ್ದಾನೆ ಎಂದು ತಿವಿದ್ದಿದ್ದಾರೆ.
ಅನುರಾಗ್ ರೀತಿಯ ಜನರಿಗೆ ದನದ ಮಾಂಸವನ್ನು ಬಲವಂತವಾಗಿ ತಿನ್ನಿಸಿ, ಮತಾಂತರ ಮಾಡುವ ಸಂಗತಿಗಳನ್ನು ಒಪ್ಪಿಕೊಳ್ಳಲು ಆಗುವುದಿಲ್ಲ, ನನ್ನ ಸಿನಿಮಾದಲ್ಲಿ ತೋರಿಸಲಿರುವ ಪ್ರತಿಯೊಂದು ದೃಶ್ಯವು ಸತ್ಯಾಂಶದಿಂದ ಕೂಡಿದೆ. ಅಂತೆಯೇ ಇದರ ಬಗ್ಗೆ ನಾನು ಹಲವಾರು ವರ್ಷ ಸಂಶೋಧನೆ ಮಾಡಿದ್ದೇನೆ, ಅನುರಾಗ್ ಅವರಿಗೆ ಬೇಕಿದ್ದರೆ ನನ್ನ ಸಂಶೋಧನಾ ಸಾಮಾಗ್ರಿಗಳನ್ನು ಪರೀಕ್ಷಿಸಲಿ ಎಂದು ಅವರು ಹೇಳಿದ್ದಾರೆ.
ಕಶ್ಯಪ್ ವಿರುದ್ಧ ವಾಗ್ದಾಳಿ ಮುಂದುವರೆಸಿದ ಸಿಂಗ್, ಅನುರಾಗ್ಗೆ ಬ್ರಾಹ್ಮಣರ ಮೇಲೆ, ಚಿತ್ರರಂಗದ ಮೇಲೆ ಅಷ್ಟೇ ಆಕೆ ಅವನಿಗೆ ಪ್ರತಿಯೊಂದರ ಮೇಲೂ ದ್ವೇಷಯಿದೆ. ಅವನಿಗೆ ಅವನ ಅನಿಸಿಕೆ ಬಿಟ್ಟು ಬೇರೆಯವರ ಅಭಿಪ್ರಾಯವನ್ನು ಗೌರವಿಸುವ ಕನಿಷ್ಟ ಸೌಜನ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅನುರಾಗ್ ಕಶ್ಯಪ್ ಹೇಳಿದ್ದೇನು?
ದಿ ಕೇರಳ ಸ್ಟೋರಿ 2 ಬಗ್ಗೆ ಪಾಪಾರಾಜಿಗಳು ನಿರ್ದೇಶಕ ಅನುರಾಗ್ ಕಶ್ಯಪ್ ಬಳಿ ಅನಿಸಿಕೆ ಕೇಳಿದಾಗ, ಸಮಾಜವನ್ನು ಇಬ್ಭಾಗ ಮಾಡಲು ಮತ್ತು ಹಣ ಗಳಿಸುವ ಸಲುವಾಗಿ ಇಂತಹ ಸಿನಿಮಾಗಳನ್ನು ಮಾಡಿದ್ದಾರೆ. ಚಿತ್ರದ ಟ್ರೇಲರ್‌ನಲ್ಲಿ ಮುಸ್ಲಿಂ ಕುಟುಂಬವು ಹಿಂದೂ ಹುಡುಗಿಗೆ ಬಲವಂತವಾಗಿ ಗೋಮಾಂಸ ತಿನ್ನಿಸುವುದನ್ನು ತೋರಿಸಲಾಗಿದೆ. ನಿಜ ಜೀವನದಲ್ಲಿ ಯಾರೂ ಹಾಗೆ ಮಾಡೋದಿಲ್ಲ. ಗೋಮಾಂಸ ಬಿಡಿ, ಕನಿಷ್ಠ ಕಿಚಡಿ ತಿನ್ನಲು ಸಹ ಒತ್ತಾಯಿಸುವುದಿಲ್ಲ ಇದೊಂದು ಪ್ರೋಪಗಾಂಡಾ ಸಿನಿಮಾ ಎಂದು ಹೇಳಿದರು.
ಈ ಸಿನಿಮಾದ ನಿರ್ದೇಶಕ ಒಬ್ಬ ಹಣಬುರಕ ಅವನೊಬ್ಬ ಬೂಟು ನೆಕ್ಕುವ ಮನುಷ್ಯ, ಹಣ ಗಳಿಸುವ ಸಲುವಾಗಿ ಏನು ಮಾಡಲು ಸಿದ್ದವಿರುವ ಮನಸ್ಥಿತಿ ಅವನದು. ಆದ್ದರಿಂದ ಸಮಾಜವನ್ನು ಒಡೆಯಲು ಇಂತಹ ಸಿನಿಮಾವನ್ನು ತಯಾರಿಸಿದ್ದಾರೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದರು,(ಏಜನ್ಸೀಸ್).