ಸಿನಿವಾಣಿ

ಓಟಿಟಿ ಬಿಡುಗಡೆಗೆ ‘ಮಿತ್ರರಕ್ಷಕ’‌ ರೆಡಿ; ಆಗಸ್ಟ್ 15ಕ್ಕೆ ಮೈ ಎಟಿಎಂನಲ್ಲಿ ರಿಲೀಸ್​

manjunathktgns

ಮಾದೇಶ್ ಎಂಟರ್​ಪ್ರೈಸಸ್​ ಲಾಂಛನದಲ್ಲಿ ನಿರ್ಮಾಣವಾಗಿರುವ "ಮಿತ್ರರಕ್ಷಕ" ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಇದೇ 15 ರಂದು ಮೈ ಎಟಿಎಂ ಮೊಬೈಲ್ ಆಪ್ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ‌. ಚಿತ್ರವನ್ನು ಓಂಪ್ರಕಾಶ್ ನಾಯಕ್ ,ಕಥೆ, ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದೇ ಚಿತ್ರತಂಡ ಈ ಮೊದಲು ಆಪ್ತಮಿತ್ರ ಭಾಗ-3 ಸಿನಿಮಾ ಮಾಡಲು ಮುಂದಾಗಿತ್ತು. ಆ ನಂತರ ಮಿತ್ರರಕ್ಷಕ ಎಂದು ಹೆಸರಿಟ್ಟಿದ್ದಾರೆ. ದಟ್ಟ ಕಾಡಿಗೆ ಹೋಗುವ ತಂಡ ಅಲ್ಲಿ ಒಬ್ಬರ ಕೊಲೆಯಾಗುತ್ತದೆ. ಆ ಕೊಲೆಯನ್ನು ನಾಗವಲ್ಲಿ ಮಾಡಿದ್ದಾಳೆ ಎಂದು ಕೆಲವರು ತಿಳಿಯುತ್ತಾರೆ. ಆದರೆ ನಿಜವಾಗಿ ಕೊಲೆ ಮಾಡಿದವರು ಯಾರು ಎನ್ನುವುದು ರಹಸ್ಯದ ಸಂಗತಿ.

ಚಿತ್ರದ ಚಿತ್ರೀಕರಣವನ್ನು ಶೃಂಗೇರಿ ಬೆಟ್ಟ‌ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಓಂ ಪ್ರಕಾಶ್ ನಾಯಕ್​ ನಾಗವಲ್ಲಿ ಪಾತ್ರ ಮಾಡಿದ್ದಾರೆ. ದೇವದಾಸ್ ಸಂಗೀತ, ಕಿರಣ್ ಛಾಯಾಗ್ರಹಣ, ನವೀನ್ ಸಹ‌ನಿರ್ದೇಶನ, ಓಂಪ್ರಕಾಶ್ ಸಂಕಲನವಿದೆ. ಓಂಪ್ರಕಾಶ್ ನಾಯಕ್, ಶ್ರೀಧರ್, ಸ್ಮೈಲ್ ಶಿವು, ಸ್ವಪ್ನ, ಕಾವ್ಯ, ಅವಿನಾಶ್ ಭಾರದ್ವಾಜ್, ಪ್ರಸನ್ನ, ರುದ್ರೇಶ್, ಶಂಕರ್ ಬಾಬು, ಅನಿತಾ ಹೆಗ್ಗರ್, ನೆಲಮಂಗಲ ಬಾಬು ಮತ್ತಿತರ ಪಾತ್ರವರ್ಗದಲ್ಲಿದ್ದಾರೆ.