ಸಿನಿವಾಣಿ

ಉಪ್ಪಿಗೆ ಅಭಿಮಾನಿಗಳು ಕಳುಹಿಸಿದ ಮಾಸ್ಕ್​ ಹೀಗಿದೆ ನೋಡಿ ...

ಕರೊನಾ ತಡೆಯಲು ಮಾಸ್ಕ್​ ಕಡ್ಡಾಯವಾಗುತ್ತಿದ್ದಂತೆಯೇ, ತರತರಹದ ಮಾಸ್ಕ್​ಗಳು ಇದೀಗ ಎಲ್ಲೆಡೆ ಸಿಗುತ್ತಿವೆ. ಈ ಪೈಕಿ ಇದೀಗ ಹೊಸ ಸೇರ್ಪಡೆ ಉಪ್ಪಿ ಮಾಸ್ಕ್​.

ಲಾಕ್​ಡೌನ್​ ನಂತರ ಉಪೇಂದ್ರ ಅವರ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಹೆಸರಿನಲ್ಲಿ ಹಲವು ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ಅವರು ಜನರಿಗೆ ಮಾಸ್ಕ್​ಗಳನ್ನು ಹಂಚುತ್ತಿದ್ದಾರೆ. ಅಭಿಮಾನಿಗಳು ಕಳುಹಿಸಿರುವ ಮಾಸ್ಕ್​ ತೊಟ್ಟು, ಸೋಷಿಯಲ್​ ಮೀಡಿಯಾಲದಲ್ಲಿ ಫೋಟೋ ಹಂಚಿಕೊಂಡಿದ್ದಾರೆ ಉಪೇಂದ್ರ.

ಮಾಸ್ಕ್​ ಹಂಚುತ್ತಿರುವುದು ಉಪೇಂದ್ರ ಅವರ ತೆಲುಗು ಅಭಿಮಾನಿಗಳು. ಹೈದರಾಬಾದ್​ನ ಚಿಕ್ಕಡಪಲ್ಲಿಯ ನೀಲಿಮಾ ಗ್ರಾಫಿಕ್ಸ್​ ತಯಾರಿಸಿಕೊಟ್ಟಿರುವ ಉಪೇಂದ್ರ ಅವರ ಫೋಟೋ ಇರುವ ಈ ಮಾಸ್ಕ್​ಗಳನ್ನು ಇದೀಗ ಅವರ ಅಭಿಮಾನಿಗಳು ಆಂಧ್ರ ಮತ್ತು ತೆಲಂಗಾಣದಲ್ಲಿ ಹಂಚುತ್ತಿದ್ದಾರೆ.

ಉಪೇಂದ್ರ ಅವರ ಅಭಿಮಾನಿಗಳು ಈ ಕೆಲಸ ಮಾಡುತ್ತಿರುವುದೇನೋ ಸರಿ, ಆದರೆ ಯಾರು ಈ ಕೆಲಸ ಮಾಡಿದ್ದಾರೆಂದು ಸ್ವತಃ ಉಪೇಂದ್ರ ಅವರಿಗೂ ಗೊತ್ತಿಲ್ಲವಂತೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಇಂದು ಬೆಳಿಗ್ಗೆ ಹೈದರಾಬಾದ್​ನಿಂದ ಒಂದು ಕೊರಿಯರ್​ ಬಂತು. ಹೈದರಾಬಾದ್​ನ ಅಭಿಮಾನಿಗಳು ಈ ಮಾಸ್ಕ್​ಗಳನ್ನು ಕಳುಹಿಸಿದ್ದರು. ಅವರ್ಯಾರು ಎಂದು ನನಗೂ ಗೊತ್ತಿಲ್ಲ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ.