ಕಾವ್ಯಾ ಮತ್ತು ಮಂಜನ ಎಡವಟ್ಟಿನಿಂದ ದಿನಸಿ ಕಳ್ಕೊಂಡ ಬಿಗ್ಬಾಸ್ ಮನೆಮಂದಿ
ಇಡೀ ಮನೆ ತನ್ನ ವಾರದ ದಿನಸಿಯಲ್ಲಿ ಶೇ. 50ರಷ್ಟು ಸಾಮಗ್ರಿಗಳಿಗೆ ಕಡಿವಾಣ
ಮಾಡ್ರನ್ ಮಹಾಕವಿ ಮಂಜನ ವಿರುದ್ಧ ಅಸಮಾಧಾನ ಹೊರಹಾಕಿದ ಮನೆ ಮಂದಿ
ಬಿಗ್ಬಾಸ್ ಮನೆಯಲ್ಲಿರುವಾಗ ವೇಟ್ ಲಾಸ್ ಆದ ಬಗ್ಗೆ ಹಲವರು ಮಾತನಾಡುತ್ತಾರೆ. ಅದಕ್ಕೆ ಮೂಲ ಕಾರಣ ಆಹಾರ. ಲಕ್ಷುರಿ ಬಜೆಟ್ ಹಾಗೂ ದಿನಸಿಗಾಗಿ ಇಲ್ಲಿ ಸ್ಪರ್ಧಿಗಳು ಟಾಸ್ಕ್ ಚೆನ್ನಾಗಿ ಅರ್ಥ ಮಾಡಿಕೊಂಡು ಸಾಮಾಗ್ರಿ ಪಡೆದುಕೊಳ್ಳಬೇಕಾಗಿರುತ್ತದೆ. ಆದರೆ, ಈ ವಾರ ಬಿಗ್ಬಾಸ್ ಕೊಟ್ಟ ಚಟುವಟಿಕೆಯಲ್ಲಿ ಮಂಜ ಮತ್ತು ಕಾವ್ಯಾ ಅವರ ಎಡವಟ್ಟಿನಿಂದ ಮನೆ ಶೇ. 50ರಷ್ಟು ದಿನಸಿ ಕಳೆದುಕೊಂಡಿದ್ದು, ಮನೆ ಮಂದಿ ಮಂಜನ ವಿರುದ್ಧ ಕಿಡಿಕಾರಿದ್ದಾರೆ.
ದಿನಸಿ ಪಡೆದುಕೊಳ್ಳಲು ಬಿಗ್ಬಾಸ್ ಒಂದು ಟಾಸ್ಕ್ ಅನ್ನು ಕೊಟ್ಟಿತ್ತು. ಆ ಆಟದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂದು ದಾರಿಯಲ್ಲಿರುವ ಯಾವುದೇ ವಸ್ತುವನ್ನು ತುಳಿಯದೆ, ಗಂಟೆಗಳಿಗೆ ತಾಗದಂತೆ ಎಚ್ಚರಿಕೆ ವಹಿಸಿ ಸಾಗಬೇಕಿತ್ತು. ನಂತರ ಅಂತಿಮ ಸ್ಥಾನಕ್ಕೆ ತಲುಪಿ ಬಜರ್ ಒತ್ತಬೇಕಾಗಿತ್ತು. ಇದನ್ನು ಬೋರ್ಡ್ ಮೇಲೆ ಟೀಚರ್ ಒಬ್ಬರು ಬರೆದುಕೊಳ್ಳಬೇಕಿತ್ತು.
ಕಾವ್ಯ ಮತ್ತು ಮಂಜು ಅವರ ಆಟದಲ್ಲಿ ನಿಯಮ ಮೀರಿರುವುದರಿಂದ ಅವರನ್ನು ಅಧಿಕೃತವಾಗಿ ಡಿಸ್ಕ್ವಾಲಿಫೈ ಮಾಡಲಾಗಿದೆ. ಇದರಿಂದಾಗಿ ಈ ವಾರ ಬಿಗ್ ಬಾಸ್ ಮನೆಯು ತನ್ನ ವಾರದ ಒಟ್ಟು ದಿನಸಿ ಸಾಮಗ್ರಿಗಳಲ್ಲಿ ಶೇ. 50ರಷ್ಟು ಭಾಗವನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಇದರಿಂದಾಗಿ ಇಡೀ ಮನೆಗೆ ತೊಂದರೆಯಾಗಿದ್ದು, ಮಂಜ ನಿನ್ನ ಕಡೆಯಿಂದ ನಮಗೆಲ್ಲ ಊಟ ಹೋಗಿದೆ, ಗಿಲ್ಟ್ ನಿಮಗಿರಲಿ" ಎಂದು ಇತರೆ ಸ್ಪರ್ಧೆಗಳು ಆಕ್ರೋಶ ಹೊರಹಾಕಿದ್ದಾರೆ. ಮಂಜ ತಾನು ಅಪರಾಧಿಯಂತೆ ನಟಿಸುತ್ತಾ ಅಳುತ್ತಾ ವರ್ತಿಸಿರುವುದು ಪ್ರೋಮೋದಲ್ಲಿ ಇದೆ
ಗಾನವಿ ಅವರ ತಪ್ಪುಗಳನ್ನು ಸುದೀಪ್ ಅವರು ತೋರಿಸಿ ಹೇಳುವಾಗ ಸರ್ ನೀವು ಇದನ್ನು ಅಬಸರ್ವ್ ಮಾಡಿದ್ರೆ ಗೊತ್ತಾಗತ್ತೆ ಎಂದು ಪದೇ ಪದೇ ಹೇಳುವುದು. ಅವರು ಮಾತನಾಡುವಾಗ ಮತ್ತೆಲ್ಲೋ ನೋಡುವುದು. ಅವರಿಗೆ ಗೌರವ ನೀಡದೆ ಇರುವ ಬಗ್ಗೆ ಸುದೀಪ್ ಕಿಡಿಕಾರಿದರು,. ನಿಮಗೆ ಕುಳಿತುಕೊಳ್ಳಲು ಇಷ್ಟವಿಲ್ಲದಿದ್ದರೆ ದಯವಿಟ್ಟು ಎದ್ದು ಹೋಗಬಹುದು ಎಂದು ಗುಡುಗಿದ್ದರು.
ಕಿರಣ್, ಧನುಷ್, ಮಂಜು, ಸಂಗೀತಾ, ಯಶಸ್ ಮತ್ತು ಲಿಖಿತ್ ನಾಮಿನೇಟ್ ಆಗಿದ್ದರು. ಆ ಪೈಕಿ ಲಿಖಿತ್ ಮನೆಯಿಂದ ಹೊರಬಂದಿದ್ದಾರೆ. ಲಿಖಿತ್ ಟಾಸ್ಕ್ ಮತ್ತು ಮಾತನಾಡುವ ಶೈಲಿಯಲ್ಲಿ ಬೇರೆಯಾಗಿಯೇ ಇರಬಹುದು. ಆದರೆ, ಮನೆ ಮಂದಿಯನ್ನು ನಗಿಸುವ ವಿಚಾರದಲ್ಲಿ ಹಾಗೂ ಟ್ರಿಗರ್ ಮಾಡುವ ವಿಚಾರದಲ್ಲಿ, ಮ್ಯಾನಿಪುಲೇಟ್ ಮಾಡುವಲ್ಲಿ ಸಾಕಷ್ಟು ಬಲ್ಲವರಾಗಿದ್ದರು. ಬಿಗ್ಬಾಸ್ ಮನೆಗೆ ಇದು ಬೇಕಾಗಿರುವುದು ಹೌದು. ಆದರೆ, ನಾಮಿನೇಟ್ ಆದವರ ಪೈಕಿ ಲಿಖಿತ್ ಎಲಿಮಿನೇಟ್ ಆಗಿದ್ದು, ಹಲವರಿಗೆ ಬೇಸರ ತರಿಸಿದೆ. ನನ್ನ ಸಿಟ್ಟು ನನ್ನ ಈ ಸ್ಥಿತಿಗೆ ಕಾರಣ ಇರುವುದು ಎಂದು ಭಾವುಕರಾಗಿ ಸುದೀಪ್ ಮುಂದೆ ಮಾತನಾಡಿದ್ದರು ಲಿಖಿತ್, (ಏಜೆನ್ಸೀಸ್).