ಸಿನಿವಾಣಿ

ಅಮೆರಿಕದಲ್ಲಿ ದುಬಾರಿ ಕಾರು ಖರೀದಿಸಿದ ಕನ್ನಡದ ನಟಿ

ಫ್ಲೋರಿಡಾ: ಸೀರೆಯುಟ್ಟು ಕನ್ನಡದ ಧಾರಾವಾಹಿಗಳಲ್ಲಿ ಪಕ್ಕಾ ಕನ್ನಡದ ಬೆಡಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಇದೀಗ ಅಮೆರಿಕದ ಫ್ಲೋರಿಡಾದಲ್ಲಿ ಸೆಟಲ್​ ಆಗಿದ್ದಾರೆ. ಇತ್ತೀಚೆಗೆ ಹೊಸ ಬೆಂಜ್​ ಕಾರನ್ನು ತೆಗೆದುಕೊಂಡು ಸುದ್ದಿಯಾಗಿದ್ದಾರೆ.

ಅರ್ಚನಾ ಅವರು ಮನೆ ದೇವ್ರು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಮಧುಬಾಲಾ ಹೆಸರಿನ ಧಾರಾವಾಹಿಯಲ್ಲೂ ನಟಿಸಿದ್ದರು. ಕನ್ನಡದ ಜತೆ ತಮಿಳಿನ ಎರಡು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. ಧಾರಾವಾಹಿಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಸಮಯದಲ್ಲೇ ಅವರಿಗೆ ಮದುವೆ ನಿಶ್ಚಯವಾಗಿದ್ದು, ವಿಘ್ನೇಶ್​ ಹೆಸರಿನ ವರನನ್ನು ವರಿಸಿ ನ್ಯೂಯಾರ್ಕ್​ಗೆ ಶಿಫ್ಟ್​ ಆಗಿದ್ದರು. ಅದಾದ ನಂತರ ಫ್ಲೋರಿಡಾಕ್ಕೆ ಶಿಫ್ಟ್​ ಆಗಿ ಅಲ್ಲಿಯೇ ಸೆಟಲ್​ ಆಗಿದ್ದಾರೆ.

ಇದೀಗ ಅರ್ಚನಾ ಹೊಸ ಮರ್ಸಡಿಸ್​ ಬೆಂಜ್​ ಕಾರನ್ನು ಖರೀದಿ ಮಾಡಿದ್ದಾರೆ. ದುಬಾರಿ ಕಾರನ್ನು ಖರೀದಿ ಮಾಡುತ್ತಿರುವ ಹಾಗೂ ಅದರಲ್ಲಿ ದಂಪತಿ ಕುಳಿತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ದಿನ ಬೆಂಜ್​ ಫ್ಯಾಮಿಲಿಗೆ ನಾವು ಸೇರಿಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೆ ಅರ್ಚನಾ ನಟನೆಗೂ ಮೊದಲು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಎಚ್​ಆರ್​ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಫ್ಲೋರಿಡಾದಲ್ಲಿಯೂ ಎಚ್​ಆರ್​ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)