ಮುಂಬೈ: ಬಾಲಿವುಡ್ನ ಜನಪ್ರಿಯ ನಟಿ ಮತ್ತು ನಿರೂಪಕಿ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್, ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ರಾಜ್ ಕೌಶಲ್ಗೆ 49 ವರ್ಷ ವಯಸ್ಸಾಗಿತ್ತು. ಅವರು ಮಂದಿರಾ ಬೇಡಿ ಮತ್ತು ಮಕ್ಕಳನ್ನು ಅಗಲಿದ್ದಾರೆ.
ಇದನ್ನೂ ಓದಿ: ಸುಳ್ಳು ರೇಪ್ ಕೇಸ್ನಲ್ಲಿ ಸಿಲುಕಿರೋ ಖ್ಯಾತ ನಟನ ಬದುಕು ಛಿದ್ರ ಛಿದ್ರ- ಕುಟುಂಬದಲ್ಲಿ ಸಾಲು ಸಾಲು ದುರಂತ
ಬಾಲಿವುಡ್ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಾಜ್ ಕೌಶಲ್, 'ಆಂಟೋನಿ ಕೌನ್ ಹೇ', 'ಶಾದಿ ಕಾ ಲಡ್ಡೂ' ಮತ್ತು 'ಪ್ಯಾರ್ ಮೇ ಕಭೀ ಕಭೀ' ಚಿತ್ರಗಳನ್ನು ನಿರ್ದೇಶಿಸುವುದರ ಜತೆಗೆ, 'ಮೈ ಬದ್ರರ್ ನಿಖಿಲ್', 'ಶಾದಿ ಕಾ ಲಡ್ಡೂ' ಮತ್ತು 'ಪ್ಯಾರ್ ಮೇ ಕಭೀ ಕಭೀ' ಚಿತ್ರಗಳನ್ನು ನಿರ್ಮಿಸಿದ್ದರು.
'ದಿಲ್ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಖ್ಯಾತಿಯ ಮಂದಿರಾ ಬೇಡಿ ಅವರನ್ನು 1999ರಲ್ಲಿ ರಾಜ್ ಮದುವೆಯಾಗಿದ್ದರು. ಈ ದಂಪತಿಗೆ 2011ರಲ್ಲಿ ಒಬ್ಬ ಮಗ ಜನಸಿದ್ದ. ಇನ್ನು ಕೆಲವು ವರ್ಷಗಳ ಹಿಂದೆ ಈ ದಂಪತಿ ಒಂದು ಹೆಣ್ಣು ಮಗವನ್ನು ದತ್ತು ಪಡೆದು, ತಾರಾ ಬೇಡಿ ಕೌಶಲ್ ಎಂದು ಹೆಸರಿಟ್ಟಿದ್ದರು.
ರಾಜ್ ಕೌಶಲ್ ನಿಧನಕ್ಕೆ ನೇಹಾ ಧೂಪಿಯಾ, ಟಿಸ್ಕಾ ಚೋಪ್ರಾ, ನಿರ್ದೇಶಕ ಓನಿರ್ ಸೇರಿದಂತೆ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.