ಬಾಲಿವುಡ್ನ ಹಾಟ್ ನಟಿ ಮಲ್ಲಿಕಾ ಶೆರಾವತ್ ಅವರು 2000ರಲ್ಲಿ ತೆರೆಯ ಮೇಲೆ ಸಾಕಷ್ಟು ಮಿಂಚಿದ್ದರು. ತಮ್ಮ ಬೋಲ್ಡ್ ಪಾತ್ರಗಳು, ಬೋಲ್ಡ್ ಉಡುಪುಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರ ಕಿಸ್ಸಿಂಗ್ ಸೀನ್, ಅರೆ ನಗ್ನ ದೃಶ್ಯಗಳನ್ನು ಯಾವುದೇ ಮುಜುಗರವಿಲ್ಲದೆ ಮಾಡುತ್ತಿದ್ದನ್ನು ತೆರೆ ಮೇಲೆ ನೋಡಲು ಥಿಯೇಟರ್ಗಳಿಗೆ ಕೇವಲ ಗಂಡಸರ ಮಹಾಸಾಗರವೇ ಹರಿದುಬರುತ್ತಿತ್ತಂತೆ. ಆದರೆ, ಒಂದು ಹಂತದ ನಂತರ ನಟಿ ಮಲ್ಲಿಕಾ ಅವರು ನಟನೆಯಿಂದ ದೂರ ಉಳಿದರು.
ಆದರೆ, ನಟಿ ಮಲ್ಲಿಕಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಇನ್ನು, ನಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 2 ಮಿಲಿಯನ್ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಹಾಗಾಗಿ, ಯಾವಗಲೂ ಹೊಸ ಹೊಸ ಪೋಸ್ಟ್ಗಳನ್ನು ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ. ಹಾಗೆಯೇ, ಸದ್ಯ ನಟಿ ಮಲ್ಲಿಕಾ ಹೊಸ ಫೋಟೋ ಒಂದನ್ನು ಶೇರ್ ಮಾಡಿದ್ದು, ಅದರಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದ್ದಾರೆ.
ಇಂದು ಹೊಸ ಫೋಟೋ ಹಂಚಿಕೊಂಡಿದ್ದು, ಈ ಫೋಟೋದಲ್ಲಿ ನಟಿ ಕಪ್ ಹಿಡಿದು ಕೂತಿದ್ದಾರೆ. ಇನ್ನು, ಈ ಫೋಟೋದಲ್ಲಿ ಅವರು ಟಾಪ್ ಮಾತ್ರ ಧರಿಸಿದ್ದಾರೆ. ಈ ಫೋಟೋ ನೋಡಿದ ಪಡ್ಡೆ ಹುಡುಗರು ಫುಲ್ ಖುಷ್ ಆಗಿದ್ದಾರೆ. ಜತೆಗೆ, ಅಭಿಮಾನಿಗಳು ನಟಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಬರೀ ಟಾಪ್ ಧರಿಸದ ಕಾರಣ ನಟಿ 45ನೇ ವರ್ಷದಲ್ಲಿ ಕೂಡಾ ಸೂಪರ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ನಟಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.