ಸಿನಿವಾಣಿ

'ಆ ನಿರ್ಮಾಪಕ ನನ್ನ ಟಾಪ್​...' ಕಹಿ ಅನುಭವ ಬಿಚ್ಚಿಟ್ಟ ಮತ್ತೋರ್ವ ಬಾಲಿವುಡ್​ ನಟಿ; ಸಂದರ್ಶನದಲ್ಲಿ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತು

lakshmihegde

ಮುಂಬೈ: ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಈಗಾಗಲೇ ಬಾಲಿವುಡ್, ಸ್ಯಾಂಡಲ್​ವುಡ್ ಸೇರಿ ಹಲವು ನಟಿಯರು ಆರೋಪ ಮಾಡಿದ್ದಾರೆ.

ಕಳೆದ ವರ್ಷ ಮುನ್ನೆಲೆಗೆ ಬಂದಿದ್ದ ಮೀ ಟೂ ಚಳವಳಿಯ ಹೊತ್ತಲ್ಲಂತೂ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗ ಬಾಲಿವುಡ್​ನ ಟೆಲಿವಿಷನ್​ ನಟಿ ಮಲ್ಹಾರ್​ ರಾಥೋಡ್​ ಅವರು ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

25 ವರ್ಷದ ನಟಿ ಮಲ್ಹಾರ್​ 64 ವರ್ಷದ ನಿರ್ಮಾಪಕರೋರ್ವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದೊಂದು ವಿಲಕ್ಷಣ ಘಟನೆ ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, 64 ವರ್ಷದ ನಿರ್ಮಾಪಕನೋರ್ವ ನನ್ನ ಬಳಿ ಟಾಪ್ ಎತ್ತುವಂತೆ ಅಶ್ಲೀಲವಾಗಿ ಮಾತನಾಡಿದ್ದ. ಆದರೆ ನಾನು ಅದನ್ನು ಕೇಳುತ್ತಲೇ ದಿಗಿಲುಗೊಂಡು ಅಲ್ಲಿಂದ ಹೊರಬಂದುಬಿಟ್ಟೆ ಎಂದು ತಿಳಿಸಿದ್ದಾರೆ.

ಮಲ್ಹಾರ್​ ರಾಥೋಡ್​ ಅವರು ಕೆಲವು ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದರೂ ಪ್ರಸಿದ್ಧಿಯಾಗಿದ್ದು ಟೆಲಿವಿಷನ್​ ಶೋಗಳಿಂದ. ಹಾಸ್ಟೇಜಸ್​ ಎಂಬ ಕ್ರೈಂ ಥ್ರಿಲ್ಲರ್​ ವೆಬ್​ ವಿಡಿಯೋ ಸರಣಿಯಲ್ಲಿ ಅವರು ಅಭಿನಯಿಸಿದ್ದಾರೆ. (ಏಜೆನ್ಸೀಸ್)