ಮುಂಬೈ: ಮಹಾಮಾರಿ ಕರೊನಾ ಲಾಕ್ಡೌನ್ನಿಂದ ಸೆಲೆಬ್ರಿಟಿಗಳು ಸುಮಾರು ಆರೇಳು ತಿಂಗಳು ಮನೆಯಲ್ಲೇ ಲಾಕ್ ಆಗಿದ್ದರು. ಸದಾ ಸುತ್ತಾಡಿಕೊಂಡು ಇರುತ್ತಿದ್ದ ಸೆಲೆಬ್ರಿಟಿಗಳಿಗೆ ಲಾಕ್ಡೌನ್ ಒಂದು ರೀತಿಯಲ್ಲಿ ಜೈಲು ಅನುಭವ ನೀಡಿತ್ತು. ಸ್ವತಂತ್ರ ಹಕ್ಕಿಗಳಾಗಿರುವ ಸೆಲೆಬ್ರಿಟಿಗಳು ಅದರಲ್ಲೂ ನಾಯಕಿಯರು ನಾ-ಮುಂದು-ತಾ-ಮುಂದು ಎಂಬಂತೆ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ.
ಬಹುತೇಕ ಬಾಲಿವುಡ್ ಮಂದಿ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ. ದಕ್ಷಿಣ ಭಾರತದ ನಟಿಯರು ಸಹ ಇದಕ್ಕೆ ಹೊರತೇನಲ್ಲ. ಕತ್ರಿನಾ ಕೈಫ್, ದಿಶಾ ಪಟಾನಿ, ಟೈಗರ್ ಶ್ರಾಫ್, ತಾಪ್ಸಿ ಪನ್ನು, ರಾಕುಲ್ ಪ್ರೀತ್ ಸಿಂಗ್, ಸಮಂತಾ ಮತ್ತು ನಾಗಾ ಚೈತನ್ಯ, ಶಾನ್ವಿ ಶ್ರೀವಾತ್ಸವ, ಸೋನಾಕ್ಷಿ ಸಿನ್ಹಾ, ಕಾಜಲ್ ಅಗರವಾಲ್ ಸೇರಿದಂತೆ ಅನೇಕರು ಮಾಲ್ಡೀವ್ಸ್ ಭೇಟಿ ನೀಡಿದ್ದಾರೆ. ಕೆಲವರು ಮರಳಿದ್ದರೆ, ಇನ್ನು ಕೆಲವು ಮಾಲ್ಡೀವ್ಸ್ನಲ್ಲೇ ಬೀಡುಬಿಟ್ಟಿದ್ದಾರೆ.
ಟ್ರೆಂಡಿಂಗ್ನಲ್ಲಿ ಮಾಲ್ಡೀವ್ಸ್
ಸೆಲೆಬ್ರಿಟಿಗಳ ಮಾಲ್ಡೀವ್ಸ್ ಭೇಟಿ ಬೆನ್ನಲ್ಲೇ ಮಾಲ್ಡೀವ್ಸ್ ಪದ ಟ್ರೆಂಡಿಂಗ್ನಲ್ಲಿದೆ. ನೀವೇನಾದರೂ ಇನ್ಸ್ಟಾಗ್ರಾಂನಲ್ಲಿ ಬಾಲಿವುಡ್ ಸೆಲಿಬ್ರೆಟಿಗಳನ್ನು ಫಾಲೋ ಮಾಡುತ್ತಿದ್ದರೆ, ಅರ್ಧಕ್ಕರ್ಧ ಬಾಲಿವುಡ್ ಸೆಲೆಬ್ರಿಟಿಗಳು ಮಾಲ್ಡೀವ್ಸ್ಗೆ ಹೋಗಿ ಬಂದಿರುವುದು ನಿಮಗೆ ಗೊತ್ತಾಗುತ್ತದೆ. ಇನ್ಸ್ಟಾಗ್ರಾಂ ತುಂಬ ಮಾಲ್ಡೀವ್ಸ್ನ ಫೋಟೋ ಮತ್ತು ವಿಡಿಯೋಗಳೇ ತುಂಬಿವೆ. ಅಲ್ಲದೆ, ನಟಿಯರ ಮಾದಕ ಫೋಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಷ್ಟೆಲ್ಲಾ ಕಾರಣಗಳಿಂದ ಮಾಲ್ಡೀವ್ಸ್ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ನೆಟ್ಟಿಗರ ಟ್ರೋಲ್
ಸೆಲೆಬ್ರಿಟಿಗಳು ಸಾಲು ಸಾಲಾಗಿ ಮಾಲ್ಡೀವ್ಸ್ ಭೇಟಿ ನೀಡಿರುವುದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಮುಂಬೈ ರೈಲ್ವೇ ಸ್ಟೇಷನ್ನಲ್ಲಿ ಜನ ತುಂಬಿರುವುದು, ವಿಮಾನ ತುಂಬಿ ಜನ ನೇತಾಡುತ್ತಿರುವ ಮೀಮ್ಸ್ಗಳನ್ನು ಹರಿಬಿಟ್ಟು ಸೆಲೆಬ್ರಿಟಿಗಳ ಮಾಲ್ಡೀವ್ಸ್ ಪ್ರಯಾಣವನ್ನು ಟ್ರೋಲ್ ಮಾಡಿದ್ದಾರೆ. ಹಾಸ್ಯಸ್ಪದ ಮೀಮ್ಸ್ಗಳ ಝಲಕ್ ಅನ್ನು ಈ ಕೆಳಗೆ ನೀವು ಕಾಣಬಹುದು. (ಏಜೆನ್ಸೀಸ್)