ಹೈದರಾಬಾದ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ಯಾವುದೇ ಕಾಮೆಂಟ್ ಅಥವಾ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಖ್ಯಾತ ನಟಿ ಮಾಳವಿಕಾ ಮೋಹನನ್ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಬೋಲ್ಡ್ ಉತ್ತರವನ್ನೇ ನೀಡಿದ್ದಾರೆ.
2013ರಲ್ಲಿ ತೆರೆಕಂಡ ಪಟ್ಟಂ ಪೋಲ್ ಸಿನಿಮಾ ಮೂಲಕ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ ಮಲಯಾಳಿ ಬ್ಯೂಟಿ ಮಾಳವಿಕಾ ಮೋಹನನ್, ಇದೀಗ ದಕ್ಷಿಣ ಭಾರತ ಸಿನಿರಂಗದ ಪ್ರಮುಖ ನಟಿಯರ ಸಾಲಲ್ಲಿ ಒಬ್ಬರಾಗಿದ್ದಾರೆ. ಅನೇಕ ದೊಡ್ಡ ದೊಡ್ಡ ಸಿನಿಮಾಗಳ ಭಾಗವಾಗಿರುವ ಮಾಳವಿಕಾ, ಸೋಶಿಯಲ್ ಮೀಡಿಯಾ ಸೆನ್ಸೇಷನ್ ಕೂಡ ಹೌದು. ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಾಳವಿಕಾ ಆಗಾಗ ಗ್ಲಾಮರಸ್ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ.
ಇತ್ತೀಚೆಗೆ ಮಾಳವಿಕಾ ಅವರು ಎಕ್ಸ್ ಖಾತೆಯಲ್ಲಿ #AskMalavika ಸೆಸ್ಸೆನ್ಸ್ ನಡೆಸಿದ್ದರು. ಈ ವೇಳೆ ನೆಟ್ಟಿಗರೊಬ್ಬರು "ಯಾಕೆ ನೀವು ಯಾವಾಗಲು ಗ್ಲಾಮರಸ್ ಫೋಟೋಶೂಟ್ ಮಾಡಿಸುತ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಖಡಕ್ ಉತ್ತರ ನೀಡಿರುವ ಮಾಳವಿಕಾ, "ಏಕೆಂದರೆ ನಾನದನ್ನು ಇಷ್ಟಪಡುತ್ತೇನೆ" ಎಂದಿದ್ದಾರೆ.
ಇದೇ ವೇಳೆ ಮತ್ತೊಬ್ಬ ನೆಟ್ಟಿಗ, ಗ್ಲಾಮರ್ ಪ್ರದರ್ಶನ ಬಿಟ್ಟು ನೀವು ಯಾವಾಗ ನಟನೆ ಆರಂಭಿಸುತ್ತೀರಾ ಎಂದು ಪ್ರಶ್ನಿಸಿದ್ದ. ಇದಕ್ಕೆ ಉತ್ತರ ನೀಡಿರುವ ಮಾಳವಿಕಾ, ನಾನು ಯಾವತ್ತೂ ಮಾಡೋದೇ ಇಲ್ಲ, ಇದರಿಂದ ನಿನಗೆ ಏನಾದರೂ ತೊಂದರೆ ಇದೆಯೇ? ಎಂದಿದ್ದಾರೆ. ಸದ್ಯ ಮಾಳವಿಕಾ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮಾಳವಿಕಾ ದಿಟ್ಟತನಕ್ಕೆ ಫಿದಾ ಆಗಿದ್ದಾರೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಮಾಳವಿಕಾ ಅವರು ಪ್ರಭಾಸ್-ಮಾರುತಿ ಜೋಡಿಯ ಹಾರರ್ ಕಾಮಿಡಿ ಪ್ರಾಜೆಕ್ಟ್ ರಾಜಾಸಾಬ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)