ಸಿನಿವಾಣಿ

ಆವತ್ತು ಮಲೈಕಾ ಮೈಮಾಟ ತೋರಿಸ್ತಿದ್ರೆ, ಅರ್ಜುನ್​ ಕಪೂರ್​ ಆಗಿನ್ನೂ ಅಮ್ಮಣ್ಣಿ ಪಾಪು!

ಸೋಷಿಯಲ್​ ಮೀಡಿಯಾದಲ್ಲಿ ಸಿನಿಮಾ ತಾರೆಯರು ಹಳೇ ಫೋಟೋಗಳನ್ನು ಆಗಾಗ ಶೇರ್​ ಮಾಡಿಕೊಂಡು ಖುಷಿ ಪಡುತ್ತಿರುತ್ತಾರೆ. ಆವತ್ತಿನ ದಿನವನ್ನು ಮತ್ತೆ ನೆನಪು ಮಾಡಿಕೊಂಡು, ಮತ್ತೆ ಆ ದಿನಗಳಿಗೆ ಜಾರುತ್ತಾರೆ. ಇದೀಗ ಬಾಲಿವುಡ್​ ನಟಿ ಮಲೈಕಾ ಅರೋರಾ ಸಹ ಅಂತದ್ದೇ ಹಳೇ ನೆನಪಿಗೆ ಜಾರಿ ಆವತ್ತಿನ ಕ್ಷಣವನ್ನು ಮತ್ತೆ ರೀ ಕಾಲ್​ ಮಾಡಿಕೊಂಡಿದ್ದಾರೆ. ಆದರೆ, ಆ ನೆನಪಿನ ಫೋಟೋ ಹಾಕಿದ್ದೇ ತಡ, ಬಗೆಬಗೆಯ ಕಮೆಂಟ್​ಗಳು ಮಲೈಕಾ ಇನ್​ಬಾಕ್ಸ್​ಗೆ ಬಂದು ಬೀಳುತ್ತಿವೆ. ಯಾವುದಾ ಫೋಟೋ? ಏನೆಲ್ಲ ಕಮೆಂಟ್​ಗಳು ಬಂದಿವೆ..

ಹೌದು, ಸಹೋದರಿ ಅಮೃತಾ ಅರೋರಾ ಜತೆಗಿನ ಒಂದೂವರೆ ದಶಕದ ಹಿಂದಿನ ಫೋಟೋವೊಂದನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಮಲೈಕಾ, ಸೇಮ್​ ಪೋಸ್​, ಸೇಮ್​ ಸ್ಮೈಲ್​ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಕ್ಕೆ ಸಾಕಷ್ಟು ಕಮೆಂಟ್​ಗಳು ಸಂದಾಯವಾಗಿದ್ದು, 15 ವರ್ಷದ ಹಿಂದೆ ನೀವು ಬೋಲ್ಡ್ ಆ್ಯಂಡ್​ ಬ್ಯೂಟಿಫುಲ್​, ಆದರೆ, ಅದೇ ಅರ್ಜುನ್​ ಕಪೂರ್​ ಆಗಿನ್ನು ಎಳಸು..’, ‘ಅರ್ಜುನ್​ ಕಪೂರ್​ ನೀವು ನಿಮ್ಮ 15 ವರ್ಷದ ಹಿಂದಿನ ಫೋಟೋ ಶೇರ್ ಮಾಡಿ..’ ಎಂದೂ ಮತ್ತೆ ಕೆಲವರು ಕಿಚಾಯಿಸಿದ್ದಾರೆ.

15 ವರ್ಷದ ಹಿಂದೆ ಅರ್ಜುನ್​ ಕಪೂರ್​ಗೆ ಕೇವಲ 19 ವರ್ಷ ವಯಸ್ಸು. ಸಿನಿಮಾ ಕ್ಷೇತ್ರದ ಬಗ್ಗೆ ಅರಿವಿದ್ದರೂ, ಚಿತ್ರರಂಗ ಪದಾರ್ಪಣೆಗೆ ಅವರ ದೇಹ ಮಾತ್ರ ಸ್ಪಂದಿಸಿರಲಿಲ್ಲ. ಆಗ ಮಲೈಕಾ ಅರೋರಾ ಬಾಲಿವುಡ್​ಗೆ ಪದಾರ್ಪಣೆ ಮಾಡಿಯೇ ಏಳು ವರ್ಷಗಳು ಉರುಳಿದ್ದವು. 25 ವರ್ಷಕ್ಕೆ ಅಂದರೆ 1998ರಲ್ಲಿಯೇ ಸಲ್ಮಾನ್​ ಸಹೋದರ ಅರ್ಬಾಜ್​ ಖಾನ್​ ಜತೆ ವಿವಾಹವನ್ನೂ ಆಗಿದ್ದರು ಮಲೈಕಾ. ಇದೀಗ ಇದೇ 46 ವರ್ಷದ ಮಲೈಕಾ ಮತ್ತು 34 ವರ್ಷದ ಅರ್ಜುನ್​ ಕಪೂರ್​ ಬಾಲಿವುಡ್​ನ ಮೋಸ್ಟ್​ ಟಾಕ್ಡ್​ ಲವ್​ಬರ್ಡ್ಸ್. (ಏಜೆನ್ಸೀಸ್​)