ಸಿನಿವಾಣಿ

ಉಪ್ಪಿ ಮನೆಯಲ್ಲಿ ಹೇಗಿತ್ತು ಮಕರ ಸಂಕ್ರಾಂತಿಯ ಸಂಭ್ರಮ? ವಿಡಿಯೋ ವೈರಲ್...

ಕರೊನಾ, ಕರ್ಫ್ಯೂ ನಡುವೆಯೂ ಸೆಲೆಬ್ರಿಟಿಗಳ ಸಂಕ್ರಾಂತಿ ಸಂಭ್ರಮ ಸಿಕ್ಕಾಪಟ್ಟೆ ಜೋರಾಗಿದೆ. ಈ ಸಂದರ್ಭದಲ್ಲಿ, ಕೆಲವು ಗಂಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್​ವುಡ್ ನಟ ಸೆಲೆಬ್ರಿಟಿ ಜೋಡಿಯೊಂದರ ಕುಟುಂಬದ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಅವರು ಯಾರು ಅಂತೀರಾ?.
ಅವರೇ ಅಭಿಮಾನಿಗಳ ನೆಚ್ಚಿನ ನಟ ಉಪ್ಪಿ ಮತ್ತು ಪ್ರಿಯಾಂಕಾ ದಂಪತಿಯ ಕುಟುಂಬ. ಇಂದು ನಟ ಉಪೇಂದ್ರ, ಪ್ರಿಯಾಂಕಾ ಮತ್ತು ಅವರ ಮಕ್ಕಳು ಸಾಂಪ್ರದಾಯಿಕವಾಗಿ ರೆಡಿಯಾಗಿ ತೆಗೆಸಿಕೊಂಡಿರುವ ಫೋಟೋಗಳು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಕಂಡು ತಾರಾ ಜೋಡಿಯ ಅಭಿಮಾನಿಗಳು ಖುಷಿ ಪಟ್ಟು ಅವರು ಹಂಚಿಕೊಳ್ಳುತ್ತಿದ್ದಾರೆ.