ಸಿನಿವಾಣಿ

ಮಹಾಕವಿಗೆ ಸ್ಕ್ರಿಪ್ಟ್​ಪೂಜೆ; ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಕುರಿತ ಬಯೋಪಿಕ್

Webdesk - Ravikanth

ಬೆಂಗಳೂರು: ಕರ್ನಾಟಕದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಜೀವನವನ್ನಾಧರಿಸಿ ನಿರ್ವಣವಾಗುತ್ತಿರುವ ‘ಮಹಾಕವಿ’ ಚಿತ್ರದ ಸ್ಕ್ರಿಪ್ಟ್​ಪೂಜೆಯು ಅವರ ಹುಟ್ಟುಹಬ್ಬವಾದ ಮಂಗಳವಾರದಂದೇ ಮಂಜೇಶ್ವರದ ಅವರ ಮನೆಯಲ್ಲಿ ನೆರವೇರಿದೆ. ಈ ಸಮಾರಂಭದಲ್ಲಿ ಮಂಗಳೂರಿನ ಪೊಲೀಸ್ ಕಮಿಷನರ್ ಶಶಿಕುಮಾರ್, ಎಡೆನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಮಂಜೇಶ್ವರದ ವಿನ್ಸೆಂಟ್ ಚರ್ಚ್​ನ ವಿನೋದ್ ಸಲ್ಡಾನಾ, ವಿಕ್ರಂ ಸೂರಿ, ನಮಿತಾ ರಾವ್ ಮುಂತಾದವರು ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಚಿತ್ರವನ್ನು ಗಡಿನಾಡು ಮಂಜೇಶ್ವರದವರೇ ಆದ ನಟ ರಘು ಭಟ್ ಮತ್ತು ಅವರ ಪತ್ನಿ ಸುಗುಣ ಭಟ್ ತಮ್ಮ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್​ನಡಿ ನಿರ್ವಿುಸುತ್ತಿದ್ದಾರೆ. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ಗೋವಿಂದ ಪೈಗಳ ಪಾತ್ರವನ್ನು ಜನಪ್ರಿಯ ನಟರೊಬ್ಬರು ನಿರ್ವಹಿಸುತ್ತಿದ್ದು, ಮಂಜೇಶ್ವರ ಸುತ್ತಮುತ್ತ ಮಳೆಗಾಲದಲ್ಲಿ ಚಿತ್ರೀಕರಣ ನಡೆಯಲಿದೆ.