ಬೆಂಗಳೂರು: ‘ಮಹಾಭಾರತ’ ಸಹ ಕನ್ನಡಕ್ಕೆ ಡಬ್ ಆಗಿ ಮೇ 11ರಿಂದ ಪ್ರಸಾರವಾಗಲಿದೆ. ಶಂತನು ಮಹಾರಾಜನಿಂದ ಪ್ರಾರಂಭವಾಗಿ, ಕುರುಕ್ಷೇತ್ರ ಯುದ್ಧದ 18ನೇ ದಿನದ ತನಕ ಕಥೆಯನ್ನು ಕೇವಲ 260 ಸಂಚಿಕೆಗಳಲ್ಲಿ ಹೇಳಿರುವುದು ಈ ಧಾರಾವಾಹಿಯ ವಿಶೇಷ. ಅದ್ಧೂರಿ ಸೆಟ್, ಬದುಕಿನ ನೀತಿ ಹೇಳುವ ಸಂಭಾಷಣೆಗಳು, ಗ್ರಾಫಿಕ್ಸ್ ಮೆರಗು ಮುಂತಾದ ಹಲವು ವಿಶೇಷತೆಗಳಿರುವ ಈ ಧಾರಾವಾಹಿ, ಇಂದಿನಿಂದ ಪ್ರತಿ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.