ಹೈದರಾಬಾದ್: ಬಹುಭಾಷೆಗಳಲ್ಲಿ ಮೂಡಿಬರಲಿರುವ ಪುಷ್ಪ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ತಾರಾಗಣದ ಆಯ್ಕೆ ಪ್ರಕ್ರಿಯೆಯಲ್ಲಿಯೇ ಸಿನಿಮಾ ಚರ್ಚೆಯಲ್ಲಿದೆ. ಇದೀಗ ಇದೇ ಬಳಗಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ.
ಹೌದು, ಪುಷ್ಪ ಸಿನಿಮಾದಲ್ಲಿ ಖಳನಾಯಕನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈಗಾಗಲೇ ಹಲವು ಕಲಾವಿದರ ಹೆಸರುಗಳು ಕೇಳಿಬಂದಿವೆಯಾದರೂ, ಯಾವುದೂ ಅಂತಿಮವಾಗಿಲ್ಲ. ತಮಿಳಿನಲ್ಲಿ ವಿಜಯ್ ಸೇತುಪತಿ ಹೆಸರೂ ಈ ಹಿಂದೆಯೇ ಕೇಳಿಬಂದಿತ್ತು. ಅದಾದ ಬಳಿಕ ಡಾಲಿ ಧನಂಜಯ ಅವರ ಹೆಸರೂ ತಳುಕು ಹಾಕಿಕೊಂಡಿತ್ತು. ಈಗ ಮಾಧವನ್ ಅವರ ಸರದಿ.
ಅಲ್ಲು ಅರ್ಜುನ್ ಎದುರಿಗೆ ಖಳನಾಗಿ ಮಾಧವನ್ ನಟಿಸಲಿದ್ದಾರೆ ಎಂಬ ಮಾತು ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಸಿನಿಮಾತಂಡವೂ ಈಗಾಗಲೇ ಅವರನ್ನು ಅಪ್ರೋಚ್ ಮಾಡಿ ಮನವೊಲಿಸಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಇನ್ನಷ್ಟೇ ಈ ವಿಚಾರವನ್ನು ಅಧಿಕೃತ ಮಾಡಬೇಕಿದೆ. (ಏಜೆನ್ಸೀಸ್)