Maa Inti Bangaram Cast Fees
- ದೇಶದಾದ್ಯಂತ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ
- ಮಾ ಇಂಟಿ ಬಂಗಾರಂನಲ್ಲಿ ನಟಿಸಿದ ಸೆಲಬ್ರೆಟಿಗಳಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ
- ಹೆಚ್ಚು ಸಂಭಾವನೆ ಪಡೆದಿರುವುದು ಸಮಂತಾ ಅಲ್ಲ ದಿಗಂತ್ ಅಲ್ವೇ ಅಲ್ಲ.. ಇವ್ರೇ ನೋಡಿ ಆ ನಟಿ!
Maa Inti Bangaram Cast Fees:
ಇಂದಿನಿಂದ ದೇಶದಾದ್ಯಂತ 'ಮಾ ಇಂಟಿ ಬಂಗಾರಂ' ಸಿನಿಮಾ ರಿಲೀಸ್ ಆಗಿದೆ. ನಿರ್ದೇಶಕಿ ನಂದಿನಿ ರೆಡ್ಡಿ ಮತ್ತು ಸಮಂತಾ ರುತ್ ಪ್ರಭು ಕಾಂಬಿನೇಷನ್ನ ಈ ಎರಡನೇ ಸಿನಿಮಾಗೆ ಈಗಾಗಲೇ ಸಾಕಷ್ಟು ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಈ ಮಧ್ಯೆ ಮುನ್ನೆಲೆಗ ಬಂದಿರುವ ವಿಚಾರ ಎಂದರೆ, ಸಿನಿಮಾದ ಪ್ರಮುಖ ಪಾತ್ರಧಾರಿ ಸಮಂತಾ ಹಾಗೂ ನಟ ದಿಗಂತ್ ಹೆಚ್ಚು ಸಂಭಾವನೆ ಪಡೆದಿಲ್ಲ ಎನ್ನುವುದು.
ಹೌದು, ಆಕ್ಷನ್ ಥ್ರಿಲ್ಲರ್, ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾದಲ್ಲಿ ನಟಿಸಿರುವ ನಟಿ ಸಮಂತಾ ರುತ್ ಪ್ರಭು, ನಟ ದಿಗಂತ್ಗಿಂತ ಹೆಚ್ಚು ಸಂಭಾವನೆ ಪಡೆದಿರುವುದು ಹಿರಿಯ ನಟಿ ಹಾಗೂ ರಾಜಕಾರಣಿ ಗೌತಮಿ ತಡಿಮಲ್ಲ ಎನ್ನಲಾಗಿದೆ. ಹಾಗಾದ್ರೆ ಈ ಸಿನಿಮಾದಲ್ಲಿ ನಟಿಸಿದ ನಟ, ನಟಿಯರಿಗೆ ಸಿಕ್ಕ ಸಂಭಾವನೆ ಎಷ್ಟು ಎನ್ನುವುದನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಸಮಂತಾ ಪಡೆದ ಸಂಭಾವನೆ ಎಷ್ಟು?
ಶುಭಂ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಹೊರಬಂದಿದ್ದ ನಟಿ ಸಮಂತಾ ಅವರು ಅಷ್ಟಾಗಿ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ. ಅವರ ಆರೋಗ್ಯದಲ್ಲಿ ಉಂಟಾದ ಬದಲಾವಣೆ, ನಾಗ ಚೈತನ್ಯರೊಂದಿಗಿನ0 ಡಿವೋರ್ಸ್, ರಾಜ್ ನಿಡಿಮೂರುರೊಂದಿಗಿನ ವೈವಾಹಿಕ ಜೀವನಕ್ಕೆ ಕಾಲಿಡುವ ಈ ವಿದ್ಯಮಾನದಲ್ಲಿ ಖುಷಿ ಕೊನೆಯಾಗಿತ್ತು. ಈಗ ಮಾ ಇಂಟಿ ಬಂಗಾರಂ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟಿರುವ ಸಮಂತಾ ಅವರು ಎಂಟು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಸದ್ಯ ಹರಿದಾಡುತ್ತಿದೆ. ಆದರೆ, ಇದೇ ನಿಖರ ಸಂಭಾವನೆಯಲ್ಲ,
ದೂದ್ಪೇಡ ದಿಗಂತ್ ಗಳಿಸಿದ್ದೆಷ್ಟು?
ಇಂದಿಗೂ ಎಂದಿಗೂ ಚಾಕ್ಲೆಟ್ ಬಾಯ್ನಂತೆ ಕಾಣಿಸಿಕೊಳ್ಳುವ ದಿಗಂತ್ ಅವರು ಕನ್ನಡದ ನಟ. ಮಾ ಇಂಟಿ ಬಂಗಾರಂ ಮೂಲಕ ಟಾಲಿವುಡ್ಗೆ ಕಾಲಿಟ್ಟಿರುವ ಅವರು ಸಮಂತಾ ರುತ್ ಪ್ರಭು ಅವರ ಪತಿಯಾಗಿ ನಟಿಸಲು ಪಡೆದುಕೊಂಡಿದ್ದು 50 ಲಕ್ಷ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸಿನಿಮಾ ರಿಲೀಸ್ಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೆಲುಗು ಸಿನಿಮಾದಲ್ಲಿ ಮತ್ತೊಂದು ಚಾನ್ಸ್ ನೀಡಬೇಕಾಗಿ ಕೇಳಿಕೊಂಡಿರುವುದು ಸ್ಯಾಂಡಲ್ವುಡ್ನ ಪರಿಸ್ಥಿತಿ ಬಗ್ಗೆ ಪರೋಕ್ಷವಾಗಿ ಉಲ್ಲೇಖಿಸಿದಂತೆ ಕಂಡಿತು.
90ರ ದಶಕದ ಬಹುಬೇಡಿಕೆ ನಟಿ ಗೌತಮಿ ತಡಿಮಲ್ಲ ಸಂಭಾವನೆ ಎಷ್ಟು?
90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದ ಗೌತಮಿ ತಡಿಮಲ್ಲ ಅವರು ನಟಿಯಾಗಿ ಮಾತ್ರವಲ್ಲದೆ ರಾಜಕೀಯದಲ್ಲಿ ತಮ್ಮ ಛಾಪುಮೂಡಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾರ ಅತ್ತೆಯಾಗಿ ನಟಿಸಲು 17 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಂದರೆ ಇಡೀ ಚಿತ್ರತಂಡದ ನಟ-ನಟಿಯರಿಗಿಂತ ಹೆಚ್ಚು ಸಂಭಾವನೆ ಇವರಿಗೆ ಇದೆ ಎನ್ನಲಾಗುತ್ತಿದೆ.
ಖಳನಾಯಕನಾದ ಗುಲ್ಶನ್ ದೇವಯ್ಯ
ಎಲೆಮರೆ ಕಾಯಿಯಂತೆ ಇದ್ದ ಗುಲ್ಶನ್ ದೇವಯ್ಯ ಅವರು ಹೆಚ್ಚಾಗಿ ಪರಿಚಿತರಾಗಿದ್ದು ಕಾಂತಾರ2 ಸಿನಿಮಾ ಮೂಲಕ. ಸಿನಿಮಾದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿರುವ ಇವರು ಇದಕ್ಕಾಗಿ ಸಂಭಾವನೆ ಪಡೆದಿರುವುದು 25 ಲಕ್ಷ ಮಾತ್ರ ಎನ್ನಲಾಗಿದೆ.
ನಿರೂಪಕಿ ಶ್ರೀಮುಖಿ ಸಂಭಾವನೆ ಎಷ್ಟು?
ನಿರೂಪಕಿ ಕಮ್ ನಟಿಯಾಗಿರುವ ಶ್ರೀ ಮುಖಿ ಅವರು ಸಿನಿಮಾದಲ್ಲಿ ಕಿರಿಯ ಸೊಸೆಯಾಗಿ ಎಂಟ್ರಿ ಕೊಡ್ತಾರೆ. ಈ ಚಿತತ್ರದಲ್ಲಿ ನಟನೆ ಮಾಡಲು ಅವರು ಪಡೆದ ಸಂಭಾವನೆ 25 ರಿಂದ 40 ಲಕ್ಷ ಇರಬಹುದು ಎನ್ನಲಾಗಿದೆ, (ಏಜೆನ್ಸೀಸ್).