ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಸ್ಟಾರ್ ಮಕ್ಕಳಿಂದಾಗಿ, ಹೊರಗಿನವರಿಗೆ ಸಮಸ್ಯೆಗಳಾಗುತ್ತಿವೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆಲಿಯಾ ಭಟ್ ಸಹ ಸಿನಿಮಾ ಕುಟುಂಬದವರಾದ್ದರಿಂದ, ಅವರು ಸಹ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದ್ದಾರೆ.
ಈಗಾಗಲೇ ಅವರ ‘ಸಡಕ್ 2’ ಚಿತ್ರದ ಟ್ರೇಲರ್ಗೆ ಒಂದು ಕೋಟಿಗೂ ಹೆಚ್ಚು ಡಿಸ್ಲೈಕ್ಗಳು ಸಿಗುವ ಮೂಲಕ, ಅತೀ ಹೆಚ್ಚು ಡಿಸ್ಲೈಕ್ಗಳಿಗೆ ಪಾತ್ರವಾದ ಮೊದಲ ಭಾರತೀಯ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿತ್ತು. ಈಗ ಚಿತ್ರ ಇನ್ನೊಂದು ದಾಖಲೆ ಮಾಡಿದೆ. ಮಹೇಶ್ ಭಟ್ ನಿರ್ದೇಶನದ ‘ಸಡಕ್ 2’ ಚಿತ್ರವು ಆಗಸ್ಟ್ 28ರ (ಶುಕ್ರವಾರ) ರಾತ್ರಿ 7.30ಕ್ಕೆ ಡಿಸ್ನಿ ಹಾಟ್ಸ್ಟಾರ್ನಲ್ಲಿ ಪ್ರೀಮಿಯರ್ ಆಗಿದೆ. ಚಿತ್ರವನ್ನು ಜಗತ್ತಿನಾದ್ಯಂತ ಕೋಟ್ಯಂತರ ಜನ ನೋಡಿದ್ದರೂ, ಐಎಂಡಿಬಿಯಲ್ಲಿ ಅತೀ ಕಡಿಮೆ ರೇಟಿಂಗ್ ಪಡೆದ ಚಿತ್ರ ಎಂಬ ಹೊಸ ದಾಖಲೆಯನ್ನು ‘ಸಡಕ್ 2’ ತನ್ನದಾಗಿಸಿಕೊಂಡಿದೆ.
ಐಎಂಡಿಬಿಯಲ್ಲಿ ಪ್ರೇಕ್ಷಕರೇ ರೇಟಿಂಗ್ ನೀಡುವ ಪರಿಪಾಠವಿದ್ದು, ಈ ಚಿತ್ರವನ್ನು ನೋಡಿರುವ ಪ್ರೇಕ್ಷಕರು ರೇಟಿಂಗ್ ನೀಡಿದ್ದಾರೆ. ಇಷ್ಟಕ್ಕೂ ಈ ಚಿತ್ರಕ್ಕೆ ಸಿಕ್ಕ ರೇಟಿಂಗ್ ಎಷ್ಟು ಗೊತ್ತಾ? 1.1 ಮಾತ್ರ. 10ಕ್ಕೆ 1.1 ರೇಟಿಂಗ್ ಸಿಕ್ಕಿರುವ ಈ ಚಿತ್ರವೇ ಇದೀಗ, ಭಾರತದ ಮೊದಲ ಅತ್ಯಂತ ಕಡಿಮೆ ರೇಟಿಂಗ್ ಪಡೆದ ಚಿತ›ವಾಗಿದೆ. ಇದಕ್ಕೂ ಮುನ್ನ ಅಜಯ್ ದೇವಗನ್ ಅವರ ‘ಹಿಮ್ಮತ್ವಾಲಾ’ ಮತ್ತು ರಾಮ್ೋಪಾಲ್ ವರ್ವ ಅವರ ‘ಆಗ್’ ಚಿತ್ರಕ್ಕೆ ಪ್ರೇಕ್ಷಕರಿಂದ 1.7 ರೇಟಿಂಗ್ ಸಿಕ್ಕಿತ್ತು.